ಕೇರಳ : ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಅಣ್ಣನೋರ್ವ ತನ್ನ ಸ್ವತಃ ತಂಗಿಯನ್ನೇ ಕೊಲೆ ಮಾಡಿದ್ದಾನೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿರುವ ಘಟನೆಯಿಂದಾಗಿ ಜನರು ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಅಣ್ಣ ತಂಗಿಯನ್ನು ಕೊಲೆ ಮಾಡಿರುವುದಕ್ಕೆ ಕಾರಣವೇನು ಅಂತಾ ತಿಳಿದ್ರೆ ನೀವು ಬೆಚ್ಚಿ ಬೀಳ್ತಿರಿ !
ಕಾಸರಗೋಡು ಜಿಲ್ಲೆಯ 16 ವರ್ಷದ ಅನ್ನಾ ಮೇರಿ ಎಂಬಾಕೆಯೇ ಅಣ್ಣನಿಂದ ಸಾವನ್ನಪ್ಪಿದ ದುರ್ದೈವಿ. ಆರೋಪಿಯಾಗಿರುವ ಅಲ್ವಿನ್ ಅಗಸ್ಟ್ 3ರಂದು ಮನೆಯಲ್ಲಿ ತಾನೇ ಐಸ್ ಕ್ರೀಂ ತಯಾರಿಸಿದ್ದಾನೆ. ಐಸ್ ಕ್ರೀಂ ಅನ್ನು ತಂಗಿ ಹಾಗೂ ತಾಯಿಗೆ ನೀಡಿ ತಾನೂ ಕೂಡ ತಿಂದಿದ್ದಾನೆ. ಐಸ್ ಕ್ರೀಂ ತಿಂದ ಸ್ವಲ್ಪ ಹೊತ್ತಲ್ಲೇ ಅನ್ನಾ ಮೇರಿಗೆ ಪುಡ್ ಪಾಯಿಸನ್ ಆಗಿತ್ತು. ಕೂಡಲೇ ಆಕೆಯನ್ನು ಕನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅನ್ನಾ ಮೇರಿ ಅಗಸ್ಟ್ 6ರಂದು ಸಾವನ್ನಪ್ಪಿದ್ದಳು. ಈ ಕುರಿತು ವೆಲ್ಲರಿಕ್ಕುಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ನಡುವಲ್ಲೇ ತಂದೆಯ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ಕೋಯಿಕ್ಕೊಡ್ ನ ವಿಮ್ಸ್ ಗೆ ಶಿಫ್ಟ್ ಮಾಡಿ ಚಿಕಿತ್ಸೆಯನ್ನು ಕೊಡಿಸ ಲಾಗುತ್ತಿದೆ. ಇತ್ತ ಆದರೆ ಅನ್ನಾ ಮೇರಿಯ ಮರಣೋತ್ತರ ಕಾರ್ಯ ನಡೆಸಿದ ಪೊಲೀಸರಿಗೆ ಇದೊಂದು ಸಹಜ ಸಾವಲ್ಲ ಅನ್ನೋದು ಬಯಲಾಗಿತ್ತು. ಮೇರಿಯ ದೇಹದಲ್ಲಿ ವಿಷದ ಅಂಶವಿರುವುದು ಪತ್ತೆಯಾಗಿತ್ತು. ಕೇವಲ ಐಸ್ ಕ್ರೀಂ ತಿಂದಿದ್ದ ಮಗಳ ದೇಹದಲ್ಲಿ ವಿಷ ಸೇರಿರುವ ಕುರಿತು ಪೋಷಕರು ಕೂಡ ಅನುಮಾನವನ್ನು ವ್ಯಕ್ತಪಡಿಸಿದ್ದರು.

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಕೈ ಸೇರುತ್ತಲೇ ಪೊಲೀಸರು ಅಲರ್ಟ್ ಆಗಿದ್ದರು. ಕೂಡಲೇ ಅನ್ನಾ ಮೇರಿಯ ತಾಯಿ ಹಾಗೂ ಅಣ್ಣನನ್ನು ಠಾಣೆಗೆ ತಂದು ವಿಚಾರಣೆಯನ್ನು ಶುರುವಿಟ್ಟುಕೊಂಡಿದ್ದರು. ಮೂವರು ಒಟ್ಟಿಗೆ ಐಸ್ ಕ್ರೀಂ ತಿಂದಿದ್ದರೂ ಕೂಡ ಇಬ್ಬರಿಗೂ ಯಾವುದೇ ರೀತಿಯಲ್ಲಿಯೂ ಸಮಸ್ಯೆ ಯಾಗಿರಲಿಲ್ಲ. ಆದ್ರೆ ಅನ್ನಾ ಮೇರಿ ವಿಷ ಸೇವನೆಯಿಂದ ಸಾವನ್ನಪ್ಪಿರುವುದು. ಇಬ್ಬರ ಮೇಲಿನ ಅನುಮಾನಕ್ಕೆ ಕಾರಣವಾಗಿತ್ತು.

ಆದರೆ ಪೊಲೀಸರ ವಿಚಾರಣೆಯ ವೇಳೆಯಲ್ಲಿ ತಾಯಿ ಐಸ್ ಕ್ರೀಂ ಸೇವನೆ ಮಾಡಿಲ್ಲಾ ಅಂತಾ ಹೇಳಿದ್ದಾರೆ. ಆದರೆ ಆರೋಪಿ ಅಲ್ವಿನ್ ಐಸ್ ಕ್ರೀಂ ತಿಂದಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಈ ವೇಳೆಯಲ್ಲಿ ಅಲ್ವಿನ್ ತಾನೇ ತಂಗಿಯನ್ನು ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಮಾತ್ರವಲ್ಲ ಈ ಹಿಂದಯೇ ಚಿಕನ್ ಸಾಂಬಾರಿಗೆ ವಿಷ ಹಾಕಿ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಯತ್ನ ಮಾಡಿದ್ದ. ಆದರೆ ಆ ವೇಳೆಯಲ್ಲಿ ಅದು ವಿಫಲವಾಗಿತ್ತು. ಅಷ್ಟಕ್ಕೂ ತನ್ನ ತಾಯಿ, ತಂದೆ ಹಾಗೂ ತಂಗಿಯನ್ನು ಕೊಲ್ಲುವ ಉದ್ದೇಶದ ಹಿಂದೆ ಯಾವುದೇ ಗಂಭೀರವಾದ ಕಾರಣಗಳಿಲ್ಲ. ಮಾದಕ ವ್ಯಸನಿಯಾಗಿದ್ದ ಅಲ್ವಿನ್ ತಾನೊಬ್ಬನೇ ಏಕಾಂಗಿಯಾಗಿರಬೇಕು ಅಂತಾ ಬಯಸಿದ್ದಾನೆ. ಇದರಿಂದಾಗಿಯೇ ಅಲ್ವಿನ್ ಅಮಾನವೀಯವಾದ ಕಾರ್ಯಕ್ಕೆ ಇಳಿದಿದ್ದಾನೆ ಎಂದು ಪೊಲೀಸ್ ಮೂಲಗಳ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಣ್ಣ ಮಾಡಿಕೊಟ್ಟ ಐಸ್ ಕ್ರೀಂ ತಿಂದು ತಂಗಿ ಬಾರದ ಲೋಕಕ್ಕೆ ಪಯಣಿಸಿದ್ರೆ, ತಂದೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟವನ್ನು ನಡೆಸುತ್ತಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮಾದಕ ವ್ಯಸನ ಎಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗುತ್ತೆ ಅನ್ನೋದಕ್ಕೆ ಈ ಸ್ಟೋರಿನೇ ಬೆಸ್ಟ್ ಎಕ್ಸಾಂಪಲ್.