ಬದಲಾಗುತ್ತಿದೆ ಪಾಸ್ ಪೋರ್ಟ್ ಸ್ವರೂಪ : 2021ಕ್ಕೆ ಜನರ ಕೈ ಸೇರುತ್ತೆ ಇ-ಪಾಸ್​ಪೋರ್ಟ್ !

0

ನವದೆಹಲಿ : ಪಾಸ್ ಪೋರ್ಟ್ ವಂಚನೆ ಪ್ರಕರಣ ಹೆಚ್ಚುತ್ತಿರುವುದರ ಜೊತೆಗೆ ನಕಲಿ ಪಾಸ್ ಪೋರ್ಟ್ ಗಳನ್ನು ತಡೆದು ಪ್ರಯಾಣಿಕರಿಗೆ ತ್ವರಿತಗತಿಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಪಾಸ್ ಪೋರ್ಟ್ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗಳನ್ನು ಮಾಡಲು ಕೇಂದ್ರ ಸರಕಾರ ಮುಂದಾಗಿದೆ.

ದೇಶದಲ್ಲಿ ಈಗಾಗಲೇ ಪಾಸ್ ಪೋರ್ಟ್ ಬದಲು ಇ-ಪಾಸ್ ಪೋರ್ಟ್ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸೆರಕಾರ ನಿರ್ಧರಿಸಿದೆ. ಮುದ್ರಿತ ಪಾಸ್​ಪೋರ್ಟ್ ಬದಲಿಗೆ ಎಲೆಕ್ಟ್ರಾನಿಕ್ ಪಾಸ್​ಪೋರ್ಟ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2021ರ ಹೊತ್ತಿಗೆ ಪಾಸ್​ಪೋರ್ಟ್ ವಿತರಣೆ ಆರಂಭವಾಗುವ ಸಾಧ್ಯತೆಯಿದೆ. ಪಾಸ್​ಪೋರ್ಟ್ ವಂಚನೆ (ಫೋರ್ಜರಿ) ತಡೆಯುವುದು ಹಾಗೂ ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆ ಬೇಗನೆ ಮುಗಿಸಲು ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ.

ಪ್ರಾಯೋಗಿಕವಾಗಿ 20,000 ಅಧಿಕೃತ ಮತ್ತು ರಾಜತಾಂತ್ರಿಕ ಇ-ಪಾಸ್​ಪೋರ್ಟ್​ಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ ಎಲೆಕ್ಟ್ರಾನಿಕ್ ಮೈಕ್ರೋಪ್ರೋಸೆಸರ್ ಚಿಪ್​ಗಳನ್ನು ಅಳವಡಿಸಲಾಗಿದೆ.

ಇ-ಪಾಸ್​ಪೋರ್ಟ್​ಗಳನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ಐಸಿಎಒ) ಮಾನದಂಡಗಳಿಗೆ ಅನುಗುಣವಾಗಿ ಇವೆ. ಇ-ಪಾಸ್​ಪೋರ್ಟ್ ಯೋಜನೆ ಅನುಷ್ಠಾನಕ್ಕಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಸೌಕರ್ಯ ಸ್ಥಾಪಿಸಲು ಸರ್ಕಾರ ಸಂಸ್ಥೆಯೊಂದನ್ನು ಆಯ್ಕೆ ಮಾಡಲಿದೆ.

ಇನ್ಮುಂದೆ ದೇಶದಲ್ಲಿರುವ ಎಲ್ಲಾ 36 ಪಾಸ್​ಪೋರ್ಟ್ ಕಚೇರಿಗಳು ಕೂಡ ಇ-ಪಾಸ್​ಪೋರ್ಟ್ ಸೇವೆಯನ್ನು ಒದಗಿಸಲಿವೆ. ಪ್ರತೀ ಗಂಟೆಗೆ 10,000ದಿಂದ 20,000 ಇ-ಪಾಸ್​ಪೋರ್ಟ್​ಗಳನ್ನು ನೀಡುವ ನಿಟ್ಟಿನಲ್ಲಿ ತಾಂತ್ರಿಕವಾಗಿ ಸಜ್ಜುಗೊಳಿಸಲಾಗುತ್ತದೆ.

ದೆಹಲಿ ಮತ್ತು ಚೆನ್ನೈನಲ್ಲಿ ಐಟಿ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಚಿಪ್ ನೆರವಿನೊಂದಿಗೆ ಕಾರ್ಯಾಚರಿಸುವ ಸುಧಾರಿತ ಭದ್ರತಾ ಅಂಶಗಳ್ನೊಳಗೊಂಡ ಇ-ಪಾಸ್​ಪೋರ್ಟ್ ರೂಪಿಸಲು ನಾಸಿಕ್​ನಲ್ಲಿರುವ ಭಾರತೀಯ ಭದ್ರತಾ ಪ್ರೆಸ್ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರದೊಂದಿಗೆ ತಮ್ಮ ಸಚಿವಾಲಯ ಕೆಲಸ ಮಾಡುತ್ತಿದೆ.

ಇ-ಪಾಸ್​ಪೋರ್ಟ್ ಚಾಲ್ತಿಗೆ ಬರುವುದರಿಂದ ಭಾರತೀಯರ ಪ್ರವಾಸ ದಾಖಲೆಪತ್ರದ ಭದ್ರತಾ ಅಂಶಗಳು ಬಲಗೊಳ್ಳಲಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

Leave A Reply

Your email address will not be published.