ಕಾಬೂಲ್ : ತಾಲಿಬಾನಿಗಳ ವಶದಲ್ಲಿರುವ ಅಫ್ಘಾನ್ ಈಗಿನ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಹೆಣ್ಣಿನ ಶೋಷಣೆ, ಅತ್ಯಾಚಾರ, ಹೆಣ್ಣನ್ನು ನಿರ್ಜಿವ ವಸ್ತುವಿನಂತೆ ಕಾಣುವುದು, ತಾಲಿಬಾನಿಗಳು ಹಿಂದಿನಿಂದಲೂ ನಡೆಸುತ್ತಾ ಬಂದ ಹೇಯ ಕೃತ್ಯ. ಆದ್ರೀಗಉಗ್ರರು ಅದಕ್ಕಿಂತಲೂ ನೀಚ ಕೃತ್ಯವನ್ನು ಎಸಗಿದ್ದಾರೆ.
ತಾಲಿಬಾನಿಗಳ ಪಾಲಿಗೆ ಹೆಣ್ಣ ಎಂದರೆ ಕಾಮದ ವಸ್ತು, ಸಿಕ್ಕಸಿಕ್ಕಲೆಲ್ಲಾ ಒಬ್ಬಂಟಿ ಹೆಣ್ಣಿನ ಮೇಲೆ ಕ್ರೌರ್ಯ ಎಸಗುತ್ತಿದ್ದಾರೆ. ಆದರೀಗ ಸತ್ತ ಹೆಣವನ್ನು ಬಿಡದೆ, ಅತ್ಯಾಚಾರ ಎಸಗುವ ಮೂಲಕ ವಿಕೃತಿ ಮೆರೆಯುತ್ತಿದ್ದಾರೆ ತಾಲಿಬಾನಿಗಳು. ಅಫ್ಘಾನ್ ನಲ್ಲಿ ಈಗ ಸತ್ತ ಶವದ ಮೇಲೂ ಅತ್ಯಾಚಾರ ನಡೆಯುತ್ತಿದೆ ಎಂದು ಅಲ್ಲಿಂದ ಭಾರತಕ್ಕೆ ಬಂದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.
ಅಫ್ಘಾನ್ ನಲ್ಲಿ ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ಭಾರತಕ್ಕೆ ಹಿಂತಿರುಗಿರುವ ಮುಸ್ಕಾನ್ ” ತಾಲಿಬಾನ್ ಗಳಿಗೆ ಹೆಣ್ಣು ಜೀವಂತವಾಗಿದ್ದಾಳೋ, ಇಲ್ಲವೊ ಎನ್ನುವುದು ವಿಚಾರವೇ ಆಗುವುದಿಲ್ಲ. ನಾನು ಪೋಲಿಸ್ ಕೆಲಸದಲ್ಲಿ ಇದ್ದದರಿಂದ ಕೆಲಸ ಬಿಡಲು ನನಗೆ ಹಲವು ಬೆದರಿಕೆಗಳು ಬಂದಿವೆ.
ಆದ್ದರಿಂದ ನಾನು ಆ ದೇಶವನ್ನೇ ಬಿಟ್ಟು ಬಂದಿದ್ದೇನೆ ಎಂದು ಮುಸ್ಕಾನ್ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಕೇಳಿದ ನಮಗೆ ಇಷ್ಟು ಆತಂಕವಾದರೇ ಇನ್ನೂ ಅಫ್ಘಾನ್ ಜನರ ಸ್ಥಿತಿ ಯಾವ ನರಕಕ್ಕಿಂತಲೂ ಕಡಿಮೆ ಇಲ್ಲ. ಹೆಣ್ಣಿಗಂತೂ ಅಲ್ಲಿ ಯಾವ ಬೆಲೆಯೂ ಇಲ್ಲಾ ಎನ್ನುವುದೇ ಬೇಸರದ ಸಂಗತಿ.
ಇದನ್ನೂ ಓದಿ : 12 ರ ಬಾಲಕಿ ಮೇಲೆ ಅಪ್ರಾಪ್ತರಿಂದ ಅತ್ಯಾಚಾರ: ಸಂತ್ರಸ್ಥೆಗೆ ಮಗು ಜನಿಸಿದ ಬಳಿಕ ಬಹಿರಂಗವಾಯ್ತು ಕೃತ್ಯ
ಇದನ್ನೂ ಓದಿ : ಸಂಭಾವನೆಯಲ್ಲಿ ರಜನಿಕಾಂತ್ ಹಿಂದಿಕ್ಕಿದ ಯುವನಾಯಕ: ನೆಕ್ಸ್ಟ್ ಮೂವಿಗೆ ವಿಜಯ್ ಸಂಭಾವನೆ 120 ಕೋಟಿ