ಭುವನೇಶ್ವರ : ಮೊಬೈಲ್ ಆಸೆಗಾಗಿ ಪತಿಯೋರ್ವ ಮದುವೆಯಾದ ಒಂದೇ ತಿಂಗಳಲ್ಲಿ ತನ್ನ ಪತ್ನಿಯನ್ನೇ ಮಾರಾಟ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪ್ರಕರಣದಲ್ಲಿ ಮಹಿಳೆಯನ್ನು ರಕ್ಷಿಸಿದ್ದು, ಆಕೆಯ ಪತಿಯನ್ನು ಬಂಧಿಸಿದ್ದಾರೆ.
26 ವರ್ಷದ ಮಹಿಳೆಗೆ 17 ವರ್ಷದ ಯುವಕನ ಜೊತೆಗೆ ಮದುವೆ ಮಾಡಲಾಗಿತ್ತು. ಜುಲೈ ತಿಂಗಳಿನಲ್ಲಿ ಇಬ್ಬರಿಗೂ ಮದುವೆಯಾಗಿದ್ದು, ಆಗಸ್ಟ್‌ನಲ್ಲಿ, ದಂಪತಿ ಇಟ್ಟಿಗೆ ಗೂಡು ಕೆಲಸ ಮಾಡಲು ರಾಯಪುರ ಮತ್ತು ಝಾನ್ಸಿ ಮೂಲಕ ರಾಜಸ್ಥಾನಕ್ಕೆ ಹೋಗಿದ್ದರು. ಕೆಲವು ದಿನಗಳ ನಂತರ ಪತಿ ಮಹಾಶಯ ತನ್ನ ಪತ್ನಿಯನ್ನು ಬರಾನ್ ಜಿಲ್ಲೆಯ 55 ವರ್ಷದ ವ್ಯಕ್ತಿಗೆ ₹1.8 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ ಎಂದು ಬಲಂಗೀರ್ ಜಿಲ್ಲೆಯ ಬೆಲ್ಪಾಡಾ ಪೊಲೀಸ್ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಬುಲು ಮುಂಡಾ ಹೇಳಿದ್ದಾರೆ
ಪತ್ನಿಯನ್ನು ಮಾರಾಟ ಮಾಡಿದ ಹಣದಲ್ಲಿ ಮೊಬೈಲ್ ಖರೀದಿಸಿ ಎಂಜಾಯ್ ಮಾಡಿದ್ದ. ನಂತರ ಒಬ್ಬಂಟಿಯಾಗಿ ಯುವಕ ಊರಿಗೆ ತೆರಳಿದ್ದಾನೆ. ಈ ವೇಳೆಯಲ್ಲಿ ಅನುಮಾನ ಗೊಂಡ ಮನೆಯವರು ವಿವಾರಣೆ ನಡೆಸಿದ ವೇಳೆಯಲ್ಲಿ ಪತ್ನಿಯನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೂಡಲೇ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಹೆಂಡತಿಯನ್ನು ಮಾರಿದ ಆರೋಪದ ಮೇಲೆ 17 ವರ್ಷದ ಯುವಕನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಮಹಿಳೆಯನ್ನು ಮಧ್ಯಪ್ರದೇಶದ ಗಡಿಯಲ್ಲಿರುವ ಬರಾನ್‌ನ ಆಗ್ನೇಯ ರಾಜಸ್ಥಾನ ಜಿಲ್ಲೆಯಿಂದ ಪೊಲೀಸರು ರಕ್ಷಿಸಿದ್ದಾರೆ, ಆದರೆ ಸ್ಥಳೀಯ ಗ್ರಾಮಸ್ಥರು ಪೊಲೀಸ್ ತಂಡವನ್ನು ಕರೆದುಕೊಂಡು ಹೋಗಲು ಬಿಡಲು ನಿರಾಕರಿಸಿದರು.
ಮಹಿಳೆಯನ್ನು ಪತ್ತೆಹಚ್ಚಲು ಬಾಲಂಗೀರ್ ತಂಡವು ರಾಜಸ್ಥಾನಕ್ಕೆ ಹೋಗಿದೆ. ಆದರೆ, ಮಹಿಳೆಯನ್ನು 1.8 ಲಕ್ಷಕ್ಕೆ ಖರೀದಿಸಲಾಗಿದೆ ಎಂದು ಒತ್ತಾಯಿಸಿ ಆಕೆಯನ್ನು ಹಿಂದಕ್ಕೆ ಕಳುಹಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. 17 ವರ್ಷದ ಯುವಕನನ್ನು ಶುಕ್ರವಾರ ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ.
ಇದನ್ನೂ ಓದಿ : ಕೈ ಹಿಡಿದ ಪತ್ನಿಯನ್ನೇ 500 ರೂಪಾಯಿ ಮಾರಾಟ ಮಾಡಿದ ಪತಿ : ನಂತರ ನಡೆಯಿತು ಪೈಶಾಚಿಕ ಕೃತ್ಯ
ಇದನ್ನೂ ಓದಿ : ಎರಡನೇ ಮದುವೆಯಾಗಲು ಹಾವು ಕಚ್ಚಿಸಿ ಪತ್ನಿಯನ್ನೇ ಕೊಂದ ಪಾಪಿಪತಿ !
The husband who sold his wife to buy mobile