ಉತ್ತರ ಪ್ರದೇಶ: (Insult National Anthem) ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಹಿನ್ನಲೆಯಲ್ಲಿ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿ ಯುವಕರನ್ನು ಅದ್ನಾನ್ ಮತ್ತು ರಾಹುಲ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈದ್ಗಾ ಪ್ರದೇಶದಲ್ಲಿ ರಾಷ್ಟ್ರಗೀತೆಯನ್ನು ನುಡಿಸುವಾಗ ಮೂವರು ಯುವಕರು ರಾಷ್ಟ್ರಗೀತೆಗೆ ಅವಮಾನ ಮಾಡಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋಗೆ ಬಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅದ್ನಾನ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ವೈರಲ್ ಆದ ವಿಡಿಯೋದಲ್ಲಿ ಕಪ್ಪು ಜಾಕೇಟ್ ಧರಿಸಿದ ಯುವಕನು ರಾಷ್ಟ್ರಗೀತೆ ಹಾಡುವಾಗ ಸೆಲ್ಯೂಟ್ ಮಾಡುತ್ತಿರುವುದನ್ನು ನೋಡುತ್ತಾನೆ. ನಂತರದಲ್ಲಿ ಅಶ್ಲೀಲವಾಗಿ ನೃತ್ಯ ಮಾಡುತ್ತಾನೆ. ಹಿನ್ನಲೆಯಲ್ಲಿ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಅವನ ಸ್ನೇಹಿತರು ನಗುತ್ತಾರೆ. ವಿಡಿಯೋವನ್ನು ನೋಡಿದ ಹಿಂದೂ ಜಾಗರಣ ಮಂಚ್‌ನ ಮಾಜಿ ನಗರಾಧ್ಯಕ್ಷ ಸಚಿನ್ ಸಿರೋಹಿ, ಇದು ರಾಷ್ಟ್ರಗೀತೆಗೆ ಅವಮಾನವಾಗುವಂತಹ ಕಾರ್ಯವಾಗಿದೆ. ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕೆಂದು ಒತ್ತಾಯಿಸಿದರು.
ಈ ಹಿನ್ನಲೆಯಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ಮೂವರು ಯುವಕರ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ಯುವಕರನ್ನು ಬಂಧಿಸಲಾಗಿದೆ.
ಇದನ್ನೂ ಓದಿ : Hemmadi Student death: ಹೆಮ್ಮಾಡಿ: ಬಸ್ ಹರಿದು ವಿದ್ಯಾರ್ಥಿ ದಾರುಣ ಸಾವು
ಇನ್ಸ್ಟಾದಲ್ಲಿ ಹುಡುಗಿಯರೊಂದಿಗೆ ಸ್ನೇಹ: ಖಾಸಗಿ ಫೋಟೋ ಶೇರ್ ಮಾಡುವುದಾಗಿ ಬ್ಲಾಕ್ ಮೇಲ್
ದೆಹಲಿ: ಯುವಕನೋರ್ವ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ನಂತರದಲ್ಲಿ ಅವರ ಖಾಸಗಿ ಫೋಟೋಗಳನ್ನು ಶೇರ್ ಮಾಡುವುದಾಗಿ ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿ ಪೊಲೀಸರು 17 ವರ್ಷದ ಹುಡುಗನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : Bail for people in drug case: ಮಂಗಳೂರು ಡ್ರಗ್ಸ್ ಪ್ರಕರಣ: 13 ಮಂದಿಗೆ ಜಾಮೀನು
Insult National Anthem: Three youths arrested