ಇಸ್ಲಾಮಾಬಾದ್: (Islamabad Suicide bomb blast) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟನಡೆದಿದ್ದು, ಇದರಲ್ಲಿ ಓರ್ವ ಪೊಲೀಸ್ ಸಾವನ್ನಪ್ಪಿದ್ದು, ನಾಲ್ವರು ಪೊಲೀಸರು ಮತ್ತು ಇಬ್ಬರು ನಾಗರಿಕರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಇಸ್ಲಾಮಾಬಾದ್‌ನ I-10/4 ಸೆಕ್ಟರ್ ಬಳಿ ಸ್ಫೋಟ ವರದಿಯಾಗಿದೆ. ಸ್ಫೋಟದ ನಂತರ ವಿಶೇಷ ಭಯೋತ್ಪಾದನಾ ನಿಗ್ರಹ ಪಡೆ ತಕ್ಷಣವೇ ಸ್ಥಳಕ್ಕೆ ಧಾವಿಸಿತು. ಸಾವನ್ನಪ್ಪಿದ ಪೊಲೀಸ್ ಅಧಿಕಾರಿಯನ್ನು ಹೆಡ್ ಕಾನ್ಸ್‌ಟೇಬಲ್ ಅದೀಲ್ ಹುಸೇನ್ ಎಂದು ಗುರುತಿಸಲಾಗಿದೆ.
ಘಟನಾ (Islamabad Suicide bomb blast) ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯೊಂದಿಗೆ ವಾಹನದ ಉರಿಯುತ್ತಿರುವ ಭಗ್ನಾವಶೇಷಗಳನ್ನು ದೂರದರ್ಶನದ ದೃಶ್ಯಾವಳಿಗಳು ತೋರಿಸಿವೆ ಎಂದು ದಿ ಡಾನ್ ವರದಿ ಮಾಡಿದೆ.
ಇಸ್ಲಾಮಾಬಾದ್‌ನ I-10 ಸೆಕ್ಟರ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದ್ದು, ಭದ್ರತಾ ಅಧಿಕಾರಿಗಳು ಪ್ರದೇಶವನ್ನು ಸುತ್ತುವರೆದು ತನಿಖೆಯನ್ನು ಪ್ರಾರಂಭಿಸಿದರು ಎಂದು ಪಾಕಿಸ್ತಾನದ ARY ನ್ಯೂಸ್ ವರದಿ ಮಾಡಿದೆ. ಸ್ಫೋಟ ಸಂಭವಿಸುವ ಮೊದಲು ತಪಾಸಣೆಗೆಂದು ಪೊಲೀಸ್ ಅಧಿಕಾರಿಗಳು ಟ್ಯಾಕ್ಸಿಯನ್ನು ನಿಲ್ಲಿಸಿದ್ದರು ಎಂದು ಇಸ್ಲಾಮಾಬಾದ್ ಪೊಲೀಸರು ತಿಳಿಸಿದ್ದಾರೆ.
“ಒಬ್ಬ ಪುರುಷ ಮತ್ತು ಮಹಿಳೆಯೊಂದಿಗೆ ವಾಹನವು ಐ-10/4 ರ ಬಳಿ ಬೆಳಿಗ್ಗೆ 10:15 ಕ್ಕೆ ಪೊಲೀಸರಿಗೆ ಪತ್ತೆಯಾಗಿದೆ. ಅನುಮಾನಾಸ್ಪದವಾಗಿ ಕಂಡ ವಾಹನವನ್ನು ಪತ್ತೆ ಹಚ್ಚಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಈ ಸಮಾಯದಲ್ಲಿ ದಂಪತಿಗಳು ಕಾರಿನಿಂದ ಹೊರಬಂದಿದ್ದು, ವ್ಯಕ್ತಿಗಳನ್ನು ಅಧಿಕಾರಿಗಳು ಪರಿಶೀಲಿಸಲು ಮುಂದಾದಾಗ, ಯಾವುದೋ ನೆಪವೊಡ್ಡಿ ಮತ್ತೆ ವಾಹನದೊಳಗೆ ಹೋಗಿದ್ದು, ಅಲ್ಲಿ ಬಾಂಬ್ ಸ್ಫೋಟಿಸಿಕೊಂಡಿದ್ದಾರೆ. ಈ ಆತ್ಮಾಹುತಿ ಸ್ಫೊಟದಲ್ಲಿ ಈಗಲ್ ಸ್ಕ್ವಾಡ್‌ನ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಉಪ ಪೊಲೀಸ್ ಮಹಾನಿರೀಕ್ಷಕ ಸೊಹೈಲ್ ಜಾಫರ್ ಚಟ್ಟಾ ಅವರು ದಿ ಡಾನ್‌ಗೆ ತಿಳಿಸಿದ್ದಾರೆ.
ಇಸ್ಲಾಮಾಬಾದ್ ಪೊಲೀಸರು ಟ್ವೀಟ್‌ನಲ್ಲಿ, “ಬಾಂಬ್ ಸ್ಫೋಟದ ಘಟನೆಯಿಂದಾಗಿ, ಐ-10/4 ರ ಸರ್ವಿಸ್ ರಸ್ತೆಯ ಪೂರ್ವದಲ್ಲಿ ಎರಡೂ ಬದಿಯ ಸಂಚಾರಕ್ಕೆ ತಿರುವು ನೀಡಲಾಗಿದೆ.” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Gadag crime: ಶಿಕ್ಷಕನ ಅಟ್ಟಹಾಸಕ್ಕೆ ನಲುಗಿದ್ದ ಶಿಕ್ಷಕಿ ಗೀತಾ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು
ಇದನ್ನೂ ಓದಿ : Belthangadi accident: ಕೈಕೊಟ್ಟ ಬ್ರೇಕ್ : ಶಬರಿಮಲೆ ಯಾತ್ರಾರ್ಥಿಗಳ ಬಸ್ ಗೆ ಅಪಘಾತ
ಸದ್ಯಕ್ಕೆ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಈ ವರ್ಷದ ಜೂನ್‌ನಲ್ಲಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅನಿರ್ದಿಷ್ಟ ಕದನ ವಿರಾಮವನ್ನು ಹಿಂತೆಗೆದುಕೊಂಡ ಕೆಲವು ದಿನಗಳ ನಂತರ ಇದು ಸಂಭವಿಸಿದೆ.
(Islamabad Suicide bomb blast) A suicide bomb blast took place in Pakistan’s Islamabad on Friday, killing one policeman and injuring six others, including four policemen and two civilians. An explosion was reported near I-10/4 sector in Islamabad.