Kidnapp and Rape Case : 5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ : ಸಿಸಿಟಿವಿಯಲ್ಲಿ ಕಾಮುಕನ ನೀಚಕೃತ್ಯ

ನವದೆಹಲಿ : ತನ್ನ ಮನೆಯ ಬಳಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿರುವ (Kidnapping and Rape Case) ಮತ್ತೊಂದು ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸದ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಐದು ವರ್ಷದ ಬಾಲಕಿ ಉತ್ತರ ದಿಲ್ಲಿಯ ಭಾಲ್ಸ್ವಾ ಡೈರಿ ಪ್ರದೇಶದಲ್ಲಿ ನಿವಾಸಿ ಎಂದು ಗುರುತಿಸಲಾಗಿದೆ. ಆಕೆಯ ನಿವಾಸದ ಮುಂಭಾಗದಿಂದ ಆಕೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ ನಂತರ ಸರೋವರದ ಬಳಿ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಆಕೆಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಬಹಿರಂಗಪಡಿಸಿದ್ದಾರೆ.

ಸದ್ಯ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಿಸಿಟಿವಿ ದೃಶ್ಯದಲ್ಲಿ ಡಿಸೆಂಬರ್ 21 ರಂದು ತನ್ನ ಮನೆಯ ಸಮೀಪದಿಂದ 5 ವರ್ಷದ ಮಗುವನ್ನು ಅಪಹರಿಸುವ ಕೆಲವೇ ಕ್ಷಣಗಳ ಮೊದಲು ವ್ಯಕ್ತಿಯೊಬ್ಬರು ಕರೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಐಪಿಸಿ ಮತ್ತು ಪೋಕ್ಸೋ ಕಾಯಿದೆಯ U/S ಗಳನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಡಿಸಿಡಬ್ಲ್ಯು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ :
ಭಾಲ್ಸ್ವಾ ಡೈರಿಯಲ್ಲಿ ಐದು ವರ್ಷದ ಬಾಲಕಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ನಗರ ಪೊಲೀಸರಿಗೆ ನೋಟಿಸ್ ನೀಡಿದೆ. ಸಮಿತಿಯು ಎಫ್‌ಐಆರ್‌ಗೆ ಸಂಬಂಧಿಸಿದ ವಿವರಗಳನ್ನು ಮತ್ತು ಡಿಸೆಂಬರ್ 26 ರೊಳಗೆ ಆರೋಪಿಗಳನ್ನು ಬಂಧಿಸುವಂತೆ ಕೋರಿದೆ.

ಇದನ್ನೂ ಓದಿ : Gadag crime: ಶಿಕ್ಷಕನ ಅಟ್ಟಹಾಸಕ್ಕೆ ನಲುಗಿದ್ದ ಶಿಕ್ಷಕಿ ಗೀತಾ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು

ಇದನ್ನೂ ಓದಿ : Islamabad Suicide bomb blast: ಇಸ್ಲಾಮಾಬಾದ್‌ ನಲ್ಲಿ ಆತ್ಮಹತ್ಯಾ ಬಾಂಬ್‌ ಸ್ಪೋಟ: ಓರ್ವ ಪೊಲೀಸ್‌ ಸಾವು, ಆರು ಮಂದಿ ಗಾಯ

ಇದನ್ನೂ ಓದಿ : Belthangadi accident: ಕೈಕೊಟ್ಟ ಬ್ರೇಕ್‌ : ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಗೆ ಅಪಘಾತ

ದೆಹಲಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರದ ಕುರಿತು ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್, “ಭಾಲ್ಸ್ವಾ ಡೈರಿಯಲ್ಲಿರುವ ಆಕೆಯ ನಿವಾಸದ ಮುಂಭಾಗದಿಂದ ಆಕೆಯನ್ನು ಕರೆದುಕೊಂಡು ಹೋಗಲಾಗಿದೆ. ನಂತರ ಆ ಬಾಲಕಿ ಸರೋವರದ ಬಳಿ ಪತ್ತೆಯಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ನನ್ನ ತಂಡ ಅವಳೊಂದಿಗೆ ಇದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದೇವೆ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Kidnapping and Rape Case: Kidnapping of 5-year-old girl, Rape: Sexual immorality on CCTV

Comments are closed.