Jescom Power Station Fired: ಜೆಸ್ಕಾಂ ಪವರ್‌ ಸ್ಟೇಷನ್‌ನಲ್ಲಿ ಅಗ್ನಿ ಅವಘಡ : ಹಲವು ಗ್ರಾಮಗಳಿಗೆ ವಿದ್ಯುತ್‌ ಸ್ಥಗಿತ

ಕಲ್ಬುರ್ಗಿ : (Jescom Power Station Fired) ಜಿಲ್ಲೆಯ ಸೇಡಂ ತಾಲೂಕಿನಲ್ಲಿನ ಜೆಸ್ಕಾಂ ಪವರ್‌ ಸ್ಟೇಷನ್‌ ಗೆ ಸಂಜೆ ಏಕಾಏಕಿ ಬೆಂಕಿಸ್ಥಗಿತಗೊಂಡಿದೆ ಹೊತ್ತಿಕೊಂಡಿದ್ದು, ಕೂಡಲೇ ವಿದ್ಯುತ್‌ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಈ ಕಾರಣಕ್ಕೆ ಸೇಡಂ ತಾಲೂಕಿನ ಇಪ್ಪತ್ತೈದು ಗ್ರಾಮಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸೇಡಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಸಂಜೆ ವೇಳೆ ಏಕಾಏಕಿ ಜೆಸ್ಕಾಂ ಗೆ ಬೆಂಕಿ ಹೊತ್ತಿಕೊಂಡಿದೆ. ಬಿಸಿಲಿನ ತಾಪಮಾನ ಹೆಚ್ಚಳದಿಂದಾಗಿ ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಬೆಂಕಿ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ವಿದ್ಯುತ್​ ಸರಬರಾಜನ್ನು ಬಂದ್​ ಮಾಡಲಾಗಿದ್ದು, ಸೇಡಂ ತಾಲೂಕಿನ ಇಪ್ಪತ್ತೈದು ಗ್ರಾಮಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ.

ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕರ ನಡುವೆ ಜಗಳ ; ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಪರಾರಿ

ಕೋಝಿಕ್ಕೋಡ್‌ : ಚಲಿಸುತ್ತಿರುವ ರೈಲಿನೊಳಗೆ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ವಾದ ವಿವಾದಗಳ ನಂತರ ವ್ಯಕ್ತಿಯೋರ್ವ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾದ ಘಟನೆ ಕೇರಳದ ಕೋಝಿಕ್ಕೋಡ್‌ನ ಎಲತ್ತೂರ್ ಬಳಿ ನಡೆದಿದೆ. ಘಟನೆಯಲ್ಲಿ ಎಂಟು ಮಂದಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : Rajasthan murder : ಅಪ್ರಾಪ್ತ ಬಾಲಕಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ

ಕೇರಳದ ಕೋಝಿಕ್ಕೋಡ್‌ನ ಎಲತ್ತೂರ್ ಬಳಿ ಚಲಿಸುತ್ತಿರುವ ರೈಲಿನೊಳಗೆ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ನಂತರ ವ್ಯಕ್ತಿಯೊಬ್ಬ ತನ್ನ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ್ದಾನೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನ ಡಿ 1 ಕಂಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಆರ್‌ಪಿಎಫ್ ಆಸ್ಪತ್ರೆಗೆ ರವಾನಿಸಲಾಗಿದೆ. ರೈಲ್ವೇ ಮೂಲಗಳ ಪ್ರಕಾರ, ಘಟನೆಯ ನಂತರ ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದಿದ್ದು, ರೈಲು ನಿಧಾನವಾದಾಗ ಶಂಕಿತ ಆರೋಪಿ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆ. ರೈಲ್ವೇ ರಕ್ಷಣಾ ಪಡೆಗೆ (ಆರ್‌ಪಿಎಫ್) ಮಾಹಿತಿ ನೀಡಿದ ಇತರ ಪ್ರಯಾಣಿಕರು ಕಂಪಾರ್ಟ್‌ ಮೆಂಟ್‌ ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಿದ್ದಾರೆ. ಅಗತ್ಯ ತಪಾಸಣೆಯ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರಿಸಿದೆ.

ಇದನ್ನೂ ಓದಿ : ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕರ ನಡುವೆ ಜಗಳ ; ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಪರಾರಿ

Jescom Power Station Fired: Fire broke out at Jescom Power Station: Power cut in many villages

Comments are closed.