ಮಂಗಳವಾರ, ಜೂನ್ 17, 2025
HomeCrimeಇಡಿಗೇ ತಿರುಗೇಟು ಕೊಟ್ಟ ಜಮೀರ್….! ಅಧಿಕಾರಿಗಳಿಗೇ ಫ್ಲ್ಯಾಟ್ ಕೀ ಕೊಡದ ಶಾಸಕ…!!

ಇಡಿಗೇ ತಿರುಗೇಟು ಕೊಟ್ಟ ಜಮೀರ್….! ಅಧಿಕಾರಿಗಳಿಗೇ ಫ್ಲ್ಯಾಟ್ ಕೀ ಕೊಡದ ಶಾಸಕ…!!

- Advertisement -

ಐಎಂಎ ಪ್ರಕರಣ ಹಾಗೂ ಅಕ್ರಮ ಆದಾಯ ಆರೋಪ ಎದುರಿಸುತ್ತಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಇಡಿ ಶಾಕ್ ನೀಡಿದೆ. ಆದರೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಜಮೀರ್ ಅಹ್ಮದ್ ಕೂಡ ತಿರುಗೇಟು ನೀಡಿದ್ದು, ತಮ್ಮ ಫ್ಲ್ಯಾಟ್ ಕೀ ನೀಡದೇ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.

Jameer1

ಇಡಿ ಅಧಿಕಾರಿಗಳು ಏಕಕಾಲಕ್ಕೆ ಮನೆ, ಕಚೇರಿ ಹಾಗೂ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಸದಾಶಿವನಗರದ ಜಮೀರ್ ಅಹ್ಮದ್ ಫ್ಲ್ಯಾಟ್ ನಲ್ಲಿ ಯಾರು ವಾಸವಾಗಿರಲಿಲ್ಲ. ಹೀಗಾಗಿ ಫ್ಲ್ಯಾಟ್ ಬಾಗಿಲು ಮುಚ್ಚಿತ್ತು. ಈ ಫ್ಲ್ಯಾಟ್ ಕೀಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

Jameer2

ಆದರೆ ಇಡಿ ಅಧಿಕಾರಿಗಳಿಗೆ ಫ್ಲ್ಯಾಟ್ ಕೀ ನೀಡದೆ ಶಾಸಕ ಜಮೀರ್ ನೆಪ ಹೇಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಮೀರ್ ಆಸ್ತಿ ಸೇರಿದಂತೆ ಎಲ್ಲ ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಫ್ಲ್ಯಾಟ್ ನಲ್ಲೇ ಇದ್ದಿರಬೇಕೆಂಬ ಅನುಮಾನ ವ್ಯಕ್ತವಾಗಿದೆ.

Jameer4

ಸದಾಶಿವನಗರದ ರಂಕಾ ಏನ್ ಕ್ಲೇವ್ ಅಪಾರ್ಮೆಂಟ್ ಎದುರು ಇಡಿ ಅಧಿಕಾರಿಗಳು ಭದ್ರತೆಯೊಂದಿಗೆ ಕಾದಿದ್ದು, ಫ್ಲ್ಯಾಟ್ ಕೀ ಸಿಕ್ಕಿಲ್ಲ. ಆದರೆ ಪರಿಶೀಲನೆ ನಡೆಸದೇ ಅಧಿಕಾರಿಗಳು ಹಿಂತಿರುಗುವು ಸಾಧ್ಯತೆ ಕಡಿಮೆಯಾಗಿರೋದಿಂದ ಜಮೀರ್ ಕೀ ನೀಡಲೇಬೇಕಾದ ಸ್ಥಿತಿ ಇದೆ.  

RELATED ARTICLES

Most Popular