Wrestler Ravi Dahiya : ಭಾರತಕ್ಕೆ ಬೆಳ್ಳಿಯ ಪದಕ ತಂದ ರವಿ : ಕುಸ್ತಿಯಲ್ಲಿ ಬಂತು ಭಾರತಕ್ಕೆ ಪದಕ

ಟೋಕಿಯೋ: ಭಾರತದ ಖ್ಯಾತ ಕುಸ್ತಿ ಪಟು ರವಿ ದಹಿಯಾ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. ಕುಸ್ತಿಯ ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 23 ವರ್ಷದ ರವಿ ದಹಿಯಾ ಭರ್ಜರಿ ಆಟದ ಪ್ರದರ್ಶನ ನೀಡಿದ್ದರೂ ಸೋಲನ್ನು ಕಂಡಿದ್ದಾರೆ. ಈ ಮೂಲಕ ಭಾರತ ಎರಡನೇ ಬೆಳ್ಳಿಯ ಪದಕವನ್ನು ಜಯಿಸಿದೆ.

ಸೆಮಿಫೈನಲ್‍ನಲ್ಲಿ ಕಝಖಿಸ್ತಾನದ ನುರಿಸ್ಲಾಮ್ ಸನಯೆವ್ ವಿರುದ್ದ ರವಿ ದಹಿಯಾ ರೋಚಕ ಗೆಲುವಿನೊಂದಿಗೆ ಫೈನಲ್‌ ಪ್ರವೇಸಿಸಿದ್ದರು. ಫೈನಲ್‌ನಲ್ಲಿ 2 ಬಾರಿ ವಿಶ್ವಚಾಂಪಿಯನ್ ರಷ್ಯಾದ ಚೌರ್ ಉಗುವೆವ್ ಸತತ 16 ಪಂದ್ಯಗಳನ್ನು ಗೆದ್ದು ಒಲಿಂಪಿಕ್ಸ್ ಪ್ರವೇಶಿಸಿದ್ದ ಉಗುವೆವ್‌ ವಿರುದ್ದ ಸೆಣೆಸಾಡಿದ್ದಾರೆ. ಅಂತಿಮವಾಗಿ 7-4 ಅಂಕಗಳಿಂದ ರವಿ ದಹಿಯಾ ಸೋತು ಎರಡನೇ ಸ್ಥಾನವನ್ನು ಪಡೆದಿದ್ದಾರೆ.

ಹರಿಯಾಣದ ಸೋನಿಪತ್ ಜಿಲ್ಲೆಯ ನಹ್ರಿ ಗ್ರಾಮದ ರವಿ ದಹಿಯಾ ಈ ಹಿಂದೆ 2019ರ ವಿಶ್ವ ಚಾಂಪಿಯನ್‍ಷಿಪ್‍ನ 57 ಕೆಜಿ ವಿಭಾಗದಲ್ಲಿ ಕಂಚು, 2020ರ ಏಷ್ಯನ್ ಚಾಂಪಿಯನ್‍ ಶಿಪ್‌ನಲ್ಲಿ ಚಿನ್ನ, 2021ರ ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು.

Comments are closed.