ಬೆಂಗಳೂರು : ತೆಲುಗಿನ ಖ್ಯಾತ ಸಿನಿಮಾ ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಗೊಂಡ ರಶ್ಮಿಕಾ ಮಂದಣ್ಣಗೆ ಚಲಿಸುತ್ತಿದ್ದ ಬಸ್ಸಿನಲ್ಲಿ ಕಿಸ್ ಮಾಡಿದ್ರು. ಇದೀಗ ಸಿನಿಮಾ ಶೈಲಿಯಲ್ಲಿ ಸರಕಾರಿ ಬಸ್ಸಿನಲ್ಲಿ ಯುವತಿಯೋರ್ವಳಿಗೆ ಕಿಸ್ ಕೊಟ್ಟಿದ್ದಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲಕ ಇಂಜಿನಿಯರ್ ಮಧುಸೂದನ್ ರೆಡ್ಡಿಯನ್ನು ಬಂಧಿಸಿ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಗೌರಿ ಗಣೇಶ ಹಬ್ಬ ಹಬ್ಬವನ್ನು ಮುಗಿಸಿ ಯುವತಿಯೋರ್ವಳು ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆಯಲ್ಲಿ ಆಕೆಯ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವಕ ಸಿನಿಮಾವನ್ನು ನೋಡುತ್ತಿದ್ದ. ಬಸ್ಸು ಟಿ ದಾಸರಹಳ್ಳಿಯಿಂದ ಜಾಲಹಳ್ಳಿ ನಡುವೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಮಧುಸೂದನ್ ರೆಡ್ಡಿ ಯುವತಿಗೆ ಕಿಸ್ ಮಾಡಿದ್ದಾನೆ. ಘಟನೆಯಿಂದ ಯುವತಿ ಕಿರುಚಿಕೊಳ್ಳುತ್ತಿದ್ದಂತೆಯೇ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಸಾರ್ವಜನಿಕವಾಗಿ ಮಾನಹಾನಿಯಾಗಿರುವ ಕುರಿತು, ಯುವತಿ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ದೂರನ್ನು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 354 A ಹಾಗೂ 354 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಬಳ್ಳಾರಿ ಮೂಲದ ಇಂಜಿನಿಯರ್ ಮಧುಸೂದನ ರೆಡ್ಡಿ ಎಂಬಾತನನ್ನು ಬಂಧಿಸಿದ್ದಾರೆ.
ವಿಚಾರಣೆಯ ವೇಳೆಯಲ್ಲಿ ತಾನು ಸಿನಿಮಾದಿಂದ ಪ್ರೇರಣೆಗೊಂಡು, ಆಕಸ್ಮಿಕವಾಗಿ ಕಿಸ್ ಮಾಡಿದ್ದೇನೆ ಎಂದು ತಿಳಿಸಿದ್ದಾನೆ ಎನ್ನಲಾಗುತ್ತಿದೆ. ಈತ ಈ ಹಿಂದೆಯೂ ಇಂತಹದ್ದೇ ಕೃತ್ಯವನ್ನು ಎಸಗಿದ್ದಾನೆಯೇ ಅನ್ನೋ ಬಗ್ಗೆಯೂ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಭಾರತದ ಸೇನಾ ಸೀಕ್ರೆಟ್ ಕದ್ದ ISI ಸುಂದರಿ : ಪಾಕ್ ಗೂಢಾಚಾರಿ ಜಿತೇಂದ್ರ ಸಿಂಗ್ ಬಾಯ್ಬಿಟ್ಟ ಸ್ಪೋಟಕ ಮಾಹಿತಿ
ಇದನ್ನೂ ಓದಿ : ಆತ್ಮ ಬಿಡಿಸುವ ನೆಪದಲ್ಲಿ ಅತ್ಯಾಚಾರ: 16 ಬಾಲಕಿ ಮೇಲೆ ದೌರ್ಜನ್ಯ ನಡೆಸಿದ ಬಾಬಾ
( Peenya Police Arrested engineer who Kisses Girl in traveling KSRTC Bus Bangalore )