HDFC BANK : ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಗ್ರಾಹಕರಿಗೆ ಭರ್ಜರಿ ಗುಡ್‌ ನ್ಯೂಸ್

ನವದೆಹಲಿ : ಹಬ್ಬಗಳ ಋತು ಶುರುವಾಗಿ, ಇಡೀ ದೇಶವೇ ಸಂಭ್ರಮದಲ್ಲಿ ಮುಳುಗುವ ತವಕದಲ್ಲಿದೆ. ಇದೇ ಹೊತ್ತಲ್ಲೇ ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಅದ್ರಲ್ಲೂ ಶೇ. 6.70 ಬಡ್ಡಿದರದಲ್ಲಿ ತನ್ನ ಗೃಹ ಸಾಲ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆ ಸೆಪ್ಟೆಂಬರ್‌ 20 ರಿಂದ ಅಕ್ಟೋಬರ್‌ 20ರ ವರೆಗೆ ಚಾಲ್ತಿಯಲ್ಲಿರಲಿದೆ.

ಕೊರೊನಾ ಸಂಕಷ್ಟದಿಂದ ರಿಯಲ್‌ ಎಸ್ಟೇಟ್‌ ಉದ್ಯಮದ ಜೊತೆಗೆ ಹಲವು ಕ್ಷೇತ್ರಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ ವ್ಯವಹಾರವನ್ನು ಚುರುಕುಗೊಳಿಸುವುದರ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಎಚ್‌ಡಿಎಫ್‌ಸಿ (HDFC BANK) ಬ್ಯಾಂಕ್‌ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಒದಗಿಸಲು ಮುಂದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ರೇಣು ಕಾರ್ನಾಡ್‌ ಹೇಳಿದ್ದಾರೆ.

ಇದನ್ನೂ ಓದಿ: SBI Pension Seva : ಪಿಂಚಣಿದಾರರಿಗೆ ಗುಡ್‌ನ್ಯೂಸ್‌ : ಎಸ್‌ಬಿಐ ಆರಂಭಿಸಿಗೆ ವಿಶೇಷ ವೆಬ್‌ಸೈಟ್‌

ಕೇವಲ ಗ್ರಾಹಕರಿಗೆ ಬಡ್ಡಿದರ ಕಡಿಮೆಯಾಗೋದು ಮಾತ್ರವಲ್ಲ ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಸಬ್ಸಿಡಿ ಸೌಲಭ್ಯ ಕೂಡ ದೊರೆಯಲಿದೆ. ಅಲ್ಲದೇ ಹಲವು ತೆರಿಗೆ ವಿನಾಯಿತಿಯನ್ನೂ ಕೂಡ ಗ್ರಾಹಕರು ಪಡೆಯಬಹುದಾಗಿದೆ. ಹೀಗಾಗಿ ಜನಸಾಮಾನ್ಯರ ಸ್ವಂತ ಮನೆಯ ಕನಸು ಸಾಕಾರಕ್ಕೆ ಇದು ಸಕಾಲವಾಗಿದೆ. ಸಾಫ್ಟ್‌ವೇರ್‌ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಈಗಾಗಲೇ ಕೊರೊನಾ ಚೇತರಿಕೆ ಕಂಡುಬಂದು, ಉದ್ಯೋಗಿಗಳಿಗೆ ಕಂಪನಿಗಳು ವೇತನ ಬಡ್ತಿ ನೀಡಿ ಉತ್ತೇಜಿಸುತ್ತಿವೆ. ಹಾಗಾಗಿ ಸ್ವಂತ ಮನೆಯನ್ನು ಹೊಂದುವುದು ಎಚ್‌ಡಿಎಫ್‌ಸಿಯ ಕಡಿಮೆ ಬಡ್ಡಿ ದರದ ಗೃಹ ಸಾಲ ಯೋಜನೆ ಮೂಲಕ ಸುಲಭವಾಗಲಿದೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Nirmala Sitharaman : ಜಿಎಸ್‌ಟಿ ವ್ಯಾಪ್ತಿಗೆ ಬರುತ್ತಾ ಪೆಟ್ರೋಲ್, ಡೀಸೆಲ್ ಬೆಲೆ : ಇಂದು ನಡೆಯುತ್ತೆ ಮಹತ್ವದ ಸಭೆ

ಎಚ್‌ಡಿಎಫ್‌ಸಿ ಜತೆಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಪಿಎನ್‌ಬಿ, ಬ್ಯಾಂಕ್‌ ಆಫ್‌ ಬರೋಡಾ ಕೂಡ ಗೃಹ ಸಾಲದ ಬಡ್ಡಿ ದರಗಳನ್ನು ಇಳಿಕೆ ಮಾಡಿವೆ. ಮುಖ್ಯವಾಗಿ ‘ಕ್ರೆಡಿಟ್‌ ಸ್ಕೋರ್‌’ ಉತ್ತಮವಾಗಿ ಇರುವವರಿಗೆ ಬಡ್ಡಿ ದರಗಳು ಬಹಳ ಅನುಕೂಲಕರವಾಗಿರಲಿವೆ. ಇನ್ನು ಕೊಟಕ್‌ ಮಹೀಂದ್ರಾ ಬ್ಯಾಂಕ್‌ ಶೇ. 6.50 ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುವ ಯೋಜನೆ ಪರಿಚಯಿಸಿದೆ.

(Good news for customers from HDFC Bank)

Comments are closed.