ಮುವಾಟ್ಟುಪುಳ (ಕೇರಳ) : ತನ್ನನ್ನ ನಿಂದಿಸಿದ್ದಾಳೆ ಅನ್ನೋ ಕಾರಣಕ್ಕೆ ಮಗನೋರ್ವ ತನ್ನ ತಾಯಿಯನ್ನು ಅಮಾನುಷವಾಗಿ ಥಳಿಸಿ ಹತ್ಯೆಗೈದಿರುವ (Son Killed Mother ) ಘಟನೆ ಕೇರಳದ ಮುವಾಟ್ಟುಪುಳದ ಪಲ್ಲಿಚಿರಂಗರದಲ್ಲಿರುವ ವಾಗಮೋನ್ ಕಪ್ಪಿಪಥಲ್ ಕುಟ್ಟಿಯಿಲ್ ಎಂಬಲ್ಲಿ ನಡೆದಿದೆ. ನಾರಾಯಣನ್ ಎಂಬವರ ಪತ್ನಿ ಶಾಂತಮ್ಮ (70 ವರ್ಷ) ಎಂಬವರೇ ಕೊಲೆಯಾದವರು. ತಾಯಿಯ ಕೊಲೆ ಆರೋಪಿ ಮಗ ಮನೋಜ್ (46 ವರ್ಷ ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಂತಮ್ಮ ಮಗನನ್ನು ಯಾವುದೋ ವಿಚಾರಕ್ಕೆ ನಿಂದಿಸಿದ್ದಾರೆ. ಇದರಿಂದಾಗಿ ಕೋಪಗೊಂಡ ಮನೋಜ್ ತನ್ನ ತಾಯಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಸಿಟ್ಟಿನಲ್ಲಿ ತಾಯಿ ಶಾಂತಮ್ಮನತಲೆಗೆ ಹೊಡೆದು, ನಂತರ ಅಡುಗೆ ಮನೆಯ ಗೋಡೆಗೆ ಢಿಕ್ಕಿ ಹೊಡೆದಿದ್ದಾನೆ. ಹಲ್ಲೆಯಿಂದಾಗಿ ಶಾಂತಮ್ಮ ವಾಂತಿ ಮಾಡಿಕೊಳ್ಳುತ್ತಿದ್ದಂತೆಯೇ ಮನೋಜ್ ಆಕೆಯನ್ನು ಹಾಸಿಗೆಯ ಮೇಲೆ ಮಲಗಿಸಿದ್ದಾನೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಮನೋಜ್ ಹಲ್ಲೆ ಮಾಡುವುದನ್ನು ಮುಂದುವರಿಸಿದ್ದಾನೆ. ನಂತರದಲ್ಲಿ ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದಾನೆ.
ತಾಯಿ ಸತ್ತಿದ್ದಾಳೆ ಅನ್ನೋದನ್ನು ಖಚಿತ ಪಡಿಸಿಕೊಂಡಿದ್ದ ಮನೋಜ್ ತನ್ನ ರಕ್ತಸಿಕ್ತ ಬಟ್ಟೆಯನ್ನು ಬದಲಾಯಿಸಿ ಕೊಲೆಯಾದ ಜಾಗದಲ್ಲಿ ಯಾವುದೇ ಗುರುತು ಸಿಗಬಾರದು ಅನ್ನೋ ಕಾರಣಕ್ಕೆ ಜಾಗವನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿದ್ದಾನೆ. ಮರುದಿನ ಬೆಳಗ್ಗೆ ತನ್ನ ತಾಯಿಗೆ ಅನಾರೋಗ್ಯವಾಗಿದೆ ಎಂದು ನಂಬಿಸಿದ್ದಾನೆ. ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ಶಾಂತಮ್ಮ ಮೃತಪಟ್ಟಿರುವುದು ಖಚಿತವಾಗಿತ್ತು. ಆದರೆ ಶಾಂತಮ್ಮ ಸಾವಿನ ಕುರಿತು ಹಲವರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಕಾರ್ಯವನ್ನು ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶಾಂತಮ್ಮ ಸಾವಿಗೂ ಮೊದಲು ತಲೆಗೆ ಪೆಟ್ಟಾಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಕೆ. ಮುವಾಟ್ಟುಪುಳ ಪೊಲೀಸ್ ನಿರೀಕ್ಷಕರಾದ ಸಿ.ಜೆ. ಮಾರ್ಟಿನ್, ಎಂ.ಕೆ. ಸಜೀವನ್ ಅವರು ತನಿಖೆ ನಡೆಸಿದ್ದು, ತನಿಖೆಯಿಂದ ಶಾಂತಮ್ಮ ಅವರ ಕೊಲೆ ಪ್ರಕರಣ ಬಯಲಿಗೆ ಬಂದಿದೆ.
ಇದನ್ನೂ ಓದಿ : Architect Suresh suicide : ವಿದೇಶಕ್ಕೆ ತೆರಳುವುದಾಗಿ ಹೇಳಿದ್ದ ಆರ್ಕಿಟೆಕ್ಟ್ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ
ಇದನ್ನೂ ಓದಿ : ಕೇರಳ ಚಿನ್ನ ಸಾಗಣೆ ಪ್ರಕರಣದಲ್ಲಿ ಮತ್ತೊಂದು ತಿರುವು : ಶಿವಶಂಕರ್ ವಿರುದ್ಧ ಆಕ್ರೋಶ ಹೊರಹಾಕಿದ ಸ್ವಪ್ನಾ
( son who killed his mother and played a sick end in Kerala )