ಭಾನುವಾರ, ಏಪ್ರಿಲ್ 27, 2025
HomeCoastal Newsಮಣೂರು : ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಪ್ರೌಢಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ

ಮಣೂರು : ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಪ್ರೌಢಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ

- Advertisement -

ಕೋಟ : ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು (SSLC Student Suicide) ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರವಡಿಯಲ್ಲಿ ನಡೆದಿದೆ.

ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಮಣೂರು ಪಡುಕೆರೆಯ ಸರಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಅನನ್ಯ ( 13 ವರ್ಷ) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಇಂದು ಮುಂಜಾನೆ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ. ವಿದ್ಯಾರ್ಥಿನಿಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪತ್ನಿ ಕಬಾಬ್‌ ಮಾಡಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡ ಪತಿ

ಕೆಲವರಿಗೆ ಯಾವುದು ಸರಿ ಅಂದರೂ ತಿನ್ನುವ ಆಹಾರ ಮಾತ್ರ ಸರಿ ಇರಬೇಕು. ರುಚಿಯಲ್ಲಿ ಸಣ್ಣ ಬದಲಾವಣೆಯನ್ನೂ ಸಹಿಸುವುದಿಲ್ಲ. ಆದರೆ ಈ ಅಭ್ಯಾಸವು ಒಬ್ಬರ ಜೀವ ತೆಗೆಯುವಂತಿದ್ದರೆ ಭಾರೀ ಕಷ್ಟ. ಈ ವಿಚಾರವನ್ನು ಈ ಸಂದರ್ಭದಲ್ಲಿ ವಿವರಿಸಲು ಕಾರಣ ಕೂಡ ಇದೆ. ಏಕೆಂದರೆ ಈ ಮಾತುಗಳಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಪತ್ನಿಯು ಕಬಾಬ್​ ತಯಾರಿಸಿದ್ದು ರುಚಿಯಾಗಿಲ್ಲ ಎಂಬ ಕಾರಣಕ್ಕೆ ಪತಿಯು ಆಕೆಯೊಂದಿಗೆ ಜಗಳವಾಡಿದ್ದು ಮಾತ್ರವಲ್ಲದೇ ಆಕೆಯನ್ನು ಮಾರಕಾಸ್ತ್ರ ಗಳಿಂದ ಇರಿದಿದ್ದಾನೆ. ಬಳಿಕ ಸ್ಥಳೀಯರು ತನಗೆ ಥಳಿಸಬಹುದು ಎಂಬ ಭಯದಿಂದ ಈತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

ಮೃತ ಆರೋಪಿಯನ್ನು ಸುರೇಶ್​ ಎಂ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಅರೆಕೆರೆ ಲೇಔಟ್​ನ ಬನ್ನೇರುಘಟ್ಟ ರಸ್ತೆಯಲ್ಲಿ ಜುಲೈ 27ರಂದು ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಾರ್ಮೆಂಟ್ಸ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಸುರೇಶ್​ ಎಂ. ಕೆಲಸ ಮುಗಿಸಿ ಮನೆಗೆ ತೆರಳಿದ್ದ. ಮನೆಗೆ ಬಂದವನೇ ಮದ್ಯಪಾನ ಮಾಡಲು ಶುರು ಮಾಡಿದ್ದ ಈತ ತನಗೆ ಡ್ರಿಂಕ್ಸ್​ ಮಾಡುವ ವೇಳೆ ತಿನ್ನಲು ಕಬಾಬ್​ ಬೇಕು ಎಂದು ಪತ್ನಿ ಬಳಿ ಡಿಮ್ಯಾಂಡ್​ ಮಾಡಿದ್ದಾನೆ. ಪತ್ನಿ ಶಾಲಿನಿ ಕೂಡ ಪತಿಗೆ ಕಬಾಬ್​ ತಯಾರಿಸಿಕೊಟ್ಟಿದ್ದರು. ಕಬಾಬ್​ ಸೇವಿಸಿದ ಸುರೇಶ್​ ಮಾಡಿದ ಕಬಾಬ್​ ರುಚಿಯಾಗಿಲ್ಲ ಎಂದು ಕ್ಯಾತೆ ತೆಗೆದಿದ್ದ. ಇದೇ ವಿಚಾರವಾಗಿ ಪತ್ನಿ ಶಾಲಿನಿ ಹಾಗೂ ಸುರೇಶ್​ ನಡುವೆ ವಾಗ್ವಾದ ಏರ್ಪಟ್ಟಿದೆ. ಇದರಿಂದ ಕೋಪಗೊಂಡ ಸುರೇಶ್​ ಪತ್ನಿಯ ಕೈಗಳನ್ನು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಕತ್ತರಿಸಿದ್ದಾನೆ. ನೋವಿನಿಂದ ಪತ್ನಿಯು ಕಿರುಚಲು ಆರಂಭಿಸುತ್ತಿದ್ದಂತೆಯೇ ಈತ ಮನೆಯಿಂದ ಎಸ್ಕೇಪ್​ ಆಗಿದ್ದಾನೆ. ಕೂಡಲೇ ಪತ್ನಿ ಶಾಲಿನಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿ : Monkey Pox Patient Dead:ಯುಎಇಯಿಂದ ವಾಪಸಾದ ಶಂಕಿತ ಮಂಕಿ ಪಾಕ್ಸ್ ರೋಗಿ ಕೇರಳದ ತ್ರಿಶೂರ್‌ನಲ್ಲಿ ಸಾವು

ಇದನ್ನೂ ಓದಿ : Praveen Nettaru Murder NIA Investigation : ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಪುತ್ತೂರಿಗೆ ಎನ್‌ಐಎ ಅಧಿಕಾರಿಗಳ ತಂಡ

Kundapura Manoor SSLC Student Suicide

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular