ಭಾನುವಾರ, ಏಪ್ರಿಲ್ 27, 2025
HomeCrimeLiquor tragedy: ಬಿಹಾರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 20 ಮಂದಿ ಬಲಿ; ವಿಧಾನಸಭೆಯಲ್ಲಿ ಚರ್ಚೆ, ಪ್ರತಿಪಕ್ಷಗಳ ಗದ್ದಲ

Liquor tragedy: ಬಿಹಾರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 20 ಮಂದಿ ಬಲಿ; ವಿಧಾನಸಭೆಯಲ್ಲಿ ಚರ್ಚೆ, ಪ್ರತಿಪಕ್ಷಗಳ ಗದ್ದಲ

- Advertisement -

ಬಿಹಾರ: Liquor tragedy: ಬಿಹಾರದ ಸರನ್ ಜಿಲ್ಲೆಯ ಛಾಪ್ರಾ ಪ್ರದೇಶದಲ್ಲಿ ಕಳ್ಳಭಟ್ಟಿ ದುರಂತ (Hooch tragedy) ಸಂಭವಿಸಿದೆ. ಕಳ್ಳಭಟ್ಟಿ ಸೇವಿಸಿ 20 ಮಂದಿ ಸಾವಿಗೀಡಾಗಿದ್ದು, ಅಸ್ವಸ್ಥರಿಗಾಗಿ ಹುಡುಕಾಟ ನಡೆಯುತ್ತಿದೆ. ಇನ್ನು ಕೆಲ ಅಸ್ವಸ್ಥರನ್ನು ಛಾಪ್ರಾ ಸದರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಇಸುವಾಪುರ ಠಾಣಾ ವ್ಯಾಪ್ತಿಯ ಡೊಯಿಲಾ ಗ್ರಾಮಸ್ಥರು ಕಳ್ಳಭಟ್ಟಿ ಸೇವಿಸಿದ್ದಾರೆ. ಅವರಲ್ಲಿ ಕೆಲವರು ಗ್ರಾಮದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಕೆಲ ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಧೌರಾ ಡಿಎಸ್ ಪಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಕಳ್ಳಭಟ್ಟಿ ಸೇವಿಸಿ ಅಸ್ವಸ್ಥರಾದವರು ಇದ್ದರೆ ಹುಡುಕಾಟ ನಡೆಸಲು ಸೂಚಿಸಿದ್ದಾರೆ. ಹಾಗೆಯೇ ಪ್ರಕರಣದ ಸೂಕ್ತ ತನಿಖೆಗೂ ಆದೇಶಿಸಿದ್ದಾರೆ. 2016ರಿಂದಲೂ ಸಾರಾಯಿ ನಿಷೇಧವಿದ್ದರೂ ಕಳ್ಳಭಟ್ಟಿ ದಂಧೆಗಳು ಎಗ್ಗಿಲ್ಲದೇ ಸಾಗುತ್ತಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ: Escort service website: ಎಸ್ಕಾರ್ಟ್ ವೆಬ್ ಸೈಟ್ ನಲ್ಲಿ ಪತ್ನಿ ಮತ್ತು ತಂಗಿಯ ಫೋಟೋ ಕಂಡು ವ್ಯಕ್ತಿಯೊಬ್ಬ ಬೆಚ್ಚಿಬಿದ್ದಿದ್ದು ಯಾಕೆ ಗೊತ್ತಾ..?

ಇನ್ನು ಈ ದುರಂತ ಪ್ರಕರಣ ಸಂಬಂಧ ವಿಧಾನಸಭೆಯಲ್ಲಿಂದು ಭಾರೀ ಚರ್ಚೆಗಳು ನಡೆದಿವೆ. ಮದ್ಯ ನಿಷೇಧದಲ್ಲಿ ಸರ್ಕಾರ ವೈಫಲ್ಯವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ನಿರ್ಬಂಧ ಬಗ್ಗೆ ಪುನರಾವಲೋಕನ ನಡೆಸಬೇಕು ಎಂದು ಒತ್ತಾಯಿಸಿದೆ. ಇದೇ ವೇಳೆ ಬಿಜೆಪಿ ಶಾಸಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಸದನದಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ಆರೋಪಕ್ಕೆ ಸಿಎಂ ನಿತೀಶ್ ಕುಮಾರ್ ಸಿಡಿಮಿಡಿಗೊಂಡರು. ಗದ್ದಲ, ಗಲಾಟೆಗಳು ವಿಪರೀತಗೊಂಡಾಗ ಸಿಎಂ ನಿತೀಶ್ ಕುಮಾರ್ ಅವರು ಬಿಜೆಪಿಗರಿಗೆ, ನೀವು ಮದ್ಯಪಾನ ಮಾಡಿ ಇಲ್ಲಿಗೆ ಬಂದಿದ್ದೀರಾ..? ಎಂದು ವ್ಯಂಗ್ಯ ಮಾಡಿದ್ರು. ಇದರಿಂದ ಗದ್ದಲ ಮತ್ತಷ್ಟು ಜೋರಾಗಿದೆ.

ಇದನ್ನೂ ಓದಿ: Bus-truck collision: ಬಸ್ ಗೆ ಟ್ರಕ್‌ ಢಿಕ್ಕಿ: 6 ಮಂದಿ ಸಾವು, 21 ಜನರಿಗೆ ಗಾಯ

ಇದನ್ನೂ ಓದಿ: Birbhum accused’s death: ಕಸ್ಟಡಿಯಲ್ಲಿದ್ದ ಹಿಂಸಾಚಾರ ಪ್ರಕರಣದ ಆರೋಪಿ ಸಾವು : ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್‌ ದಾಖಲು

Liquor tragedy: 20 killed in Bihar liquor tragedy; Debate in the assembly, opposition party makes noise

RELATED ARTICLES

Most Popular