ಶನಿವಾರ, ಜೂನ್ 14, 2025
HomeCrimeLondon Crime News‌ : ಲಂಡನ್‌ನಲ್ಲಿ ಚಾಕುವಿನಿಂದ ಇರಿದು ಭಾರತೀಯ ಮೂಲದ ಯುವತಿಯ ಹತ್ಯೆ

London Crime News‌ : ಲಂಡನ್‌ನಲ್ಲಿ ಚಾಕುವಿನಿಂದ ಇರಿದು ಭಾರತೀಯ ಮೂಲದ ಯುವತಿಯ ಹತ್ಯೆ

- Advertisement -

ಲಂಡನ್‌ : ಲಂಡನ್‌ನಲ್ಲಿ (London Crime News‌ ) ಭಾರತೀಯ ಮೂಲದ ಯುವತಿಯನ್ನು ಬ್ರೆಜಿಲ್‌ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುತ್ತಾನೆ. ದೇಶದಿಂದ ಅನೇಕ ಜನರು ಉನ್ನತ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಉದ್ದೇಶಗಳಿಂದ ವಿದೇಶಕ್ಕೆ ಹೋಗುತ್ತಾರೆ. ಇದೀಗ ವಿದೇಶದಲ್ಲಿ ವಾಸಿಸುವ ಭಾರತೀಯರಿಗೆ ಜೀವ ಅಪಾಯ ಉಂಟಾಗಿದೆ.

ಸದ್ಯ ಈ ಘಟನೆಯು ವೆಂಬ್ಲಿಯ ನೀಲ್ಡ್‌ ಕ್ರೆಸೆಂಟ್‌ನಲ್ಲಿ ನಡೆದಿದೆ. ಇದರಲ್ಲಿ ಹೈದರಾಬಾದ್‌ನ ಮೂಲದ ತೇಜಸ್ವಿನಿ ರೆಡ್ಡಿ (27 ವರ್ಷ) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಉನ್ನತ ಶಿಕ್ಷಣಕ್ಕೆಂದು ಲಂಡನ್‌ಗೆ ತೆರಳಿದ್ದ ತೇಜಸ್ವಿನಿ ರೆಡ್ಡಿಯನ್ನು ಬ್ರೆಜಿಲ್‌ನ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ತೇಜಸ್ವಿನಿ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಯುವತಿಗೂ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೆಟ್ರೋಪಾಲಿಟನ್‌ ಪೊಲೀಸ್‌ ಆಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : 14 ವರ್ಷದ ಹಿಂದೂ ಬಾಲಕಿಯ ಅಪಹರಿಸಿ ಇಸ್ಲಾಂಗೆ ಮತಾಂತರ : ಪೋಷಕರ ಜೊತೆ ಕಳುಹಿಸಲು ಕೋರ್ಟ್‌ ನಕಾರ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 24ವರ್ಷದ ಯುವಕ ಹಾಗೂ 23 ವರ್ಷದ ಯುವತಿಯನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಯುವಕ ಕಸ್ಟಡಿಯಲ್ಲಿದ್ದಾನೆ. ಆದರೆ ಆತನ ಜತಗೆ ಇದ್ದ ಯುವತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಖಾರಿಗಳು ತಿಳಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಲಂಡನ್‌ ನಗರದ ಪೊಲೀಸ್‌ರು ಹೇಳಿದ್ದಾರೆ.

London Crime News : A young woman of Indian origin was killed by a knife in London

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular