ಭಾನುವಾರ, ಏಪ್ರಿಲ್ 27, 2025
HomeCrimeLorry and Auto Accident : 2 ಆಟೋ - ಲಾರಿ ನಡುವೆ ಭೀಕರ ಅಪಘಾತ...

Lorry and Auto Accident : 2 ಆಟೋ – ಲಾರಿ ನಡುವೆ ಭೀಕರ ಅಪಘಾತ : 6 ಮಂದಿ ಸಾವು, 3 ಮಕ್ಕಳು ಗಂಭೀರ

- Advertisement -

ವಿಜಯನಗರ : ಎರಡು ಟಂಟಂ ಆಟೋ ಹಾಗೂ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Lorry and Auto Accident) ಆರು ಮಂದಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಸೇತುವೆ ಬಳಿ ಎರಡು ಆಟೋ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಳ್ಳಾರಿಯಿಂದ ತುಂಗಭದ್ರಾ ಅಣೆಕಟ್ಟಿನ ವೀಕ್ಷಣೆಗೆ ಆಟೋ ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೃತಪಟ್ಟ ಉಮೇಶ್‌ ಮತ್ತು ಆಟೋ ಚಾಲಕ ಶ್ಯಾಮ್‌ ಎಂದು ಗುರುತಿಸಲಾಗಿದೆ. ಉಳಿದರ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಮೃತಪಟ್ಟವರೆಲ್ಲರೂ ಬಳ್ಳಾರಿಯ ಗೌತಮ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ.

ಹೊಸಪೇಟೆಯ ಸರಕಾರಿ ಆಸ್ಪತ್ರೆಗೆ ಶಾಕ ಗವಿಯಪ್ಪ, ಎಸ್‌.ಪಿ. ಶ್ರೀಹರಿ ಬಾಬು, ಎಸಿ ಸಿದ್ದರಾಮೇಶ್ವರ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ಇದನ್ನೂ ಓದಿ : Noida Rape Case : ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯೊಂದಿಗೆ ಸ್ನೇಹ ಬೆಳೆಸಿ ಅತ್ಯಾಚಾರವೆಸಿಗಿದ ಯುವಕನ ಬಂಧನ

ಇದನ್ನೂ ಓದಿ : ಪ್ರಥಮ ರಾತ್ರಿ ಹೊಟ್ಟೆನೋವು, ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮಕೊಟ್ಟ ವಧು !

Lorry and Auto Accident: 6 people dead, 2 children Injured

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular