DK Suresh : ಲೋಕಸಭೆ ಚುನಾವಣೆಯಿಂದ ದೂರ, ರಾಜಕೀಯ ವೈರಾಗ್ಯದ ಮಾತನ್ನಾಡಿದ ಡಿಕೆ ಸುರೇಶ್‌

ಆನೇಕಲ್‌ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ (DK Suresh) ಮಾಡುವುದಿಲ್ಲ. ಹೊಸ ನಾಯಕರಿಗೆ ಅವಕಾಶ ಮಾಡಿಕೊಡುತ್ತೇನೆ. ಯಾರಾದ್ರೂ ಸ್ಪರ್ಧೆಗೆ ಮುಂದೆ ಬಂದ್ರೆ ಅಂತವರಿಗೆ ನಾನು ಕ್ಷೇತ್ರವನ್ನು ಪರಿಚಯ ಮಾಡಿಕೊಟ್ಟು, ಸಹಕಾರವನ್ನು ಮಾಡಲಿದ್ದೇನೆ ಎನ್ನುವ ಮೂಲಕ ಸಂಸದ ಡಿಕೆ ಸುರೇಶ್‌ ರಾಜಕೀಯ ವೈರಾಗ್ಯದ ಮಾತನ್ನಾಡಿದ್ದಾರೆ.

ಆನೇಕಲ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಡಿಕೆ ಸುರೇಶ್‌ ಅವರು, ತನ್ನ ಕ್ಷೇತ್ರವನ್ನು ಹೊಸ ನಾಯಕರಿಗೆ ಬಿಟ್ಟುಕೊಡಲು ರೆಡಿ ಆಗಿದ್ದೇನೆ. ಅವಕಾಶ ವಂಚಿತರರು, ಹೊಸ ಮುಖಗಳು ಬಂದರೆ ಅವಕಾಶ ನೀಡುತ್ತೇವೆ. ಹೊಸ ಮುಖಗಳು ಬಂದರೆ ಹೊಸ ಚಿಂತನೆಗಳು ಬರುತ್ತವೆ, ನಾವು ಹಿಂದೆ ಹೋದ್ರೆ ಮತ್ತೊಬ್ಬರು ಮುಂದೆ ಬರಲು ಅನುಕೂಲಕರವಾಗಲಿದೆ ಎಂದಿದ್ದಾರೆ.

ಸಹೋದರ ಡಿಕೆ ಶಿವಕುಮಾರ್‌ ಅವರು ಸಿಎಂ ಆಗುವುದು ಬಿಡುವುದು ಅವರಿಗೆ ಹಾಗೂ ಪಕ್ಷೆಕ್ಕೆ ಬಿಟ್ಟ ವಿಚಾರವಾಗಿದೆ. ನನ್ನ ರಾಜಕೀಯ ನಿರ್ಧಾರಕ್ಕೂ ಅವರ ಸಿಎಂ ಹುದ್ದೆಗೂ ಯಾವುದೇ ಸಂಬಂಧವಿಲ್ಲ. ರಾಜಕಾರಣ ಸಾಕು ಅನಿಸ್ತಾ ಇದೆ. ಜನರ ನಿರೀಕ್ಷೆ, ಈಗಿನ ವ್ಯವಸ್ಥೆ ಬಗ್ಗೆ ನನಗೆ ಬೇಸರ ಮೂಡಿಸಿದೆ. ಹೀಗಾಗಿ ಈ ತೀರ್ಮಾನವನ್ನು ಕೈಗೊಂಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : Anna Bhagya Scheme : ನಾಳೆಯಿಂದ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಖಾತೆಗೆ ಹಣ ವರ್ಗಾವಣೆ

ಇದನ್ನೂ ಓದಿ : KGF song copyright dispute : ಕೆಜಿಎಫ್ ಹಾಡಿನ ಹಕ್ಕುಸ್ವಾಮ್ಯ ವಿವಾದ : ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ವಜಾಗೊಳಿಸಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್

ಇಡಿ, ಐಟಿ ಬಗ್ಗೆ ನನಗೆ ಯಾವುದೇ ಭಯ ಇಲ್ಲ. ಆದರೆ ಇಂದಿನ ರಾಜಕೀಯ ವ್ಯವಸ್ಥೆ ನನಗೆ ಬೇಸರ ಮೂಡಿಸಿದೆ ಎನ್ನುವ ಮೂಲಕ ಚುನಾವಣಾ ಕಣದಿಂದ ದೂರ ಉಳಿಯುವ ಮಾತನ್ನು ಆಡಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸಂಸದ ಡಿ.ಕೆ. ಸುರೇಶ್‌ ಅವರು ಶಸ್ತ್ರ ತ್ಯಾಗದ ಮಾತನ್ನು ಆಡಿದ್ದಾರೆ. ಈ ಹಿಂದೆ ಕೂಡ ರಾಜಕೀಯದಿಂದ ದೂರ ಉಳಿಯುವ ಮಾತನ್ನು ಹೇಳಿದ್ದು, ನಂತರದಲ್ಲಿ ಅವರು ಸ್ಪಷ್ಟನೆಯನ್ನು ನೀಡುವ ಕಾರ್ಯವನ್ನು ಮಾಡಿದ್ದರು.

DK Suresh: Away from the Lok Sabha elections, DK Suresh spoke of political isolation.

Comments are closed.