M-bomb blast: ಮಂಗಳೂರು ಬಾಂಬ್‌ ಸ್ಪೋಟ: ಉಗ್ರ ಶಾರೀಖ್ ಹಣದ ಮೂಲದ ಬಗ್ಗೆ ಅಧಿಕಾರಿಗಳಿಂದ ತನಿಖೆ

ಮಂಗಳೂರು: (M-bomb blast) ಮಂಗಳೂರು ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆಯನ್ನು ಚುರುಕುಗೊಳಿಸಿದೆ. ಎನ್ಐಎ ಅಧಿಕಾರಿಗಳು ಮಂಗಳೂರಿನಲ್ಲೇ ಮೊಕ್ಕಾಂ ಹೂಡಿದ್ದು, ಎಲ್ಲಾ ಆಂಗಲ್ ನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಉಗ್ರ ಶಾರೀಖ್ ಗೆ ಸಹಕಾರ ಮಾಡಿದವರನ್ನು ಹೆಡೆಮುರಿ ಕಟ್ಟಿರುವ ಅಧಿಕಾರಿಗಳು ಇದೀಗ ಶಾರೀಖ್ ಗೆ ಹರಿದು ಬರುತ್ತಿದ್ದ ಹಣದ ಮೂಲದ ಬೆನ್ನುಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಉಗ್ರ ಶಾರೀಖ್‌ (M-bomb blast) ನನ್ನು ಪೊಲೀಸ್‌ ತಂಡ ವಿಚಾರಣೆಗೆ ಒಳಪಡಿಸಿದ್ದು, ಆತ ನಿಧಾನವಾಗಿ ವಿಚಾರಣೆಗೆ ಸ್ಪಂದಿಸುತ್ತಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ವಿಚಾರಣೆಗೆ ಸ್ಪಂಧಿಸಿದ ವೇಳೆ ಆತನಿಂದ ಕೆಲವು ಮಾಹಿತಿಗಳನ್ನು ಅಧಿಕಾರಿಗಳು ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಆತನ ಬ್ಯಾಂಕ್‌ ಅಕೌಂಟ್‌ ಗೆ ಸಾಕಷ್ಟು ಹಣ ವರ್ಗಾವಣೆ ಆಗುತ್ತಿದ್ದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈತ ಮೈಸೂರಿನ ಹಲವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪೊಲೀಸರಿಂದ ಮೈಸೂರಿನಲ್ಲಿ 40ಕ್ಕೂ ಅಧಿಕ ಮಂದಿಯ ವಿಚಾರಣೆ ಕೂಡ ನಡೆಯುತ್ತಿದೆ.

ಇದೀಗ ಉಗ್ರ ಶಾರೀಕ್‌ಗೆ ಬರುತ್ತಿದ್ದ ಹಣದ ಮೂಲದ ಬಗ್ಗೆ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಡಾರ್ಕ್ ವೆಬ್‌ ಮೂಲಕ ಅಕೌಂಟ್‌ ತೆರೆದಿರುವ ಶಾರೀಕ್‌ ಡಾಲರ್‌ಗಳ ಮೂಲಕ ಹಣ ವರ್ಗಾವಣೆ ನಡೆಸುತ್ತಿದ್ದ ಹಾಗೂ ಡಾಲರ್‌ಗಳನ್ನು ಭಾರತೀಯ ಕರೆನ್ಸಿಯಾಗಿ ಪರಿವರ್ತನೆ ಮಾಡಿ ಹಲವಾರು ಅಕೌಂಟ್‌ಗಳಿಗೆ ಹಣ ವರ್ಗಾಯಿಸುತ್ತಿದ್ದ ಎಂಬ ಮಾಹಿತಿ ತನಿಖೆಯ ವೇಳೆ ತಿಳಿದು ಬಂದಿದೆ. ಇದೀಗ ಆತನಿಗೆ ಬರುತ್ತಿದ್ದ ಹಣದ ಮೂಲದ ಕುರಿತಾಗಿ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುವ ಸಲುವಾಗಿ ಜಾರ್ಖಂಡ್‌, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : M-K Border dispute: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯದ ನಿಲುವು ಸಂವಿಧಾನ ಬದ್ಧ : ಸಿಎಂ ಬೊಮ್ಮಾಯಿ

ಇದನ್ನೂ ಓದಿ : ಸುರತ್ಕಲ್ ಟೋಲ್ ರದ್ದು, ಹೆಜಮಾಡಿಯಲ್ಲಿ ಟೋಲ್ ದರ ಏರಿಕೆ ಇಲ್ಲ : ಹೋರಾಟಗಾರರ ಸಂಭ್ರಮಾಚರಣೆ

ಪೊಲೀಸರು ಆರೋಪಿಯನ್ನು ತನ್ನ ಕಸ್ಟಡಿಗೆ ತೆಗೆದುಕೊಳ್ಳುವ ಮೊದಲೇ ಎನ್‌ಐಎ ತಂಡ ಶಾರೀಕ್‌ನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಮಂಗಳೂರು ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ.

(M-bomb blast) NIA has accelerated the investigation in connection with the Mangalore bomb blast. The NIA officials are stationed in Mangalore and are investigating from all angles. Information has been received that the officials who have been killing those who cooperated with the extremist Shareekh have now turned their backs on the source of the money that was flowing to Shareekh.

Comments are closed.