Maharashtra crime: ಸ್ನೇಹಿತನನ್ನು ಕೊಲೆ ಮಾಡಿ ದೇಹವನ್ನು ಎಸೆಯಲು ಹೋದವ ತಾನೂ ಹೆಣವಾದ

ಅಂಬೋಲಿ: (Maharashtra crime) ಹಣಕಾಸಿನ ವಿವಾದದ ಕಾರಣ ತನ್ನ ಸ್ನೇಹಿತನನ್ನು ಕೊಲೆ ಮಾಡಿ ಶವವನ್ನು ಎಸೆಯಲು ಹೋಗಿದ್ದ ವ್ಯಕ್ತಿ ತಾನೇ ಹೆಣವಾದ ಘಟನೆ ಸಾವಂತವಾಡಿಯ ಅಂಬೋಲಿ ಘಾಟ್‌ ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಭೌಸೋ ಮಾನೆ (30 ವರ್ಷ) ಎಂದು ಗುರುತಿಸಲಾಗಿದೆ. ಮೃತ ದೇಹವನ್ನು ಎಸೆಯಲು ವ್ಯಕ್ತಿಗೆ ಸಹಾಯ ಮಾಡಿದ ಸಹಾಯಕ ಪವಾಡ ಸದೃಶ್ಯವಾಗಿ ಪಾರಾಗಿದ್ದಾನೆ.

ಹಣದ ವಿಚಾರವಾಗಿ ಭೌಸೋ ಮಾನೆ ಎನ್ನುವ ವ್ಯಕ್ತಿ ತನ್ನ ಸ್ನೇಹಿತ ಸುಶಾಂತ್‌ ಖಿಲ್ಲರೆ (30 ವರ್ಷ)ಯನ್ನು ಕೊಂದಿದ್ದು, ನಂತರ ಇನ್ನೋರ್ವ ವ್ಯಕ್ತಿ ತುಷಾರ್ ಪವಾರ್ (28 ವರ್ಷ) ಸಹಾಯದೊಂದಿಗೆ ಶವವನ್ನು ಎಸೆಯಲು ಕಾರಿನಲ್ಲಿ ಅಂಬೋಲಿ ಘಾಟ್‌ಗೆ 400 ಕಿಮೀ ಪ್ರಯಾಣಿಸಿದ್ದಾರೆ. ಸ್ನೇಹಿತನ ಶವವನ್ನು ಎಸೆಯುವ ವೇಳೆ ಅಂಬೋಲಿ ಘಾಟ್‌ ನ ಕಡಿದಾದ ಬೆಟ್ಟದ ಇಳಿಜಾರಿನ ಕೆಳಗೆ ಮಾನೆ ತನ್ನ ಸಮತೋಲನವನ್ನು ಕಳೆದುಕೊಂಡು ಬಿದ್ದಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಿಂದ ಬದುಕುಳಿದ ಪವಾರ್, ಸಮೀಪದ ದೇವಸ್ಥಾನಕ್ಕೆ ತೆರಳಿ ನಡೆದ ಘಟನೆಗಳ ಬಗ್ಗೆ ತಮ್ಮ ಕುಟುಂಬಕ್ಕೆ ತಿಳಿಸಿದ್ದಾರೆ. ಮಂಗಳವಾರ ಸ್ಥಳೀಯರೊಬ್ಬರು ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಅಪರಾಧ ಬೆಳಕಿಗೆ ಬಂದಿದೆ. ಸಬ್ ಇನ್ಸ್‌ಪೆಕ್ಟರ್ ಅಮಿತ್ ಗೋಟೆ ಅವರ ಜೊತೆಗೂಡಿ ರಕ್ಷಣಾ ಅಧಿಕಾರಿಗಳು ಎರಡು ಮೃತದೇಹಗಳನ್ನು ಹೊರತೆಗೆದಿದ್ದು, ಪರಸ್ಪರ ಸುಮಾರು 10 ಅಡಿ, 150 ಅಡಿ ಇಳಿಜಾರಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ.

“ಘಾಟ್‌ನಲ್ಲಿ ಮಾನೆ ತನ್ನ ಸಮತೋಲನವನ್ನು ಕಳೆದುಕೊಂಡಿದ್ದು, ದೇಹವನ್ನು ಎಸೆಯುವ ವೇಳೆ ಕೆಳಗೆ ಬಿದ್ದು ಸತ್ತರು” ಎಂದು TOI ನ ಮೂಲವು ತಿಳಿಸಿದೆ.

ಅಂಬೋಲಿ ಘಾಟ್: ಶವಗಳನ್ನು ಎಸೆಯುವ ನೆಚ್ಚಿನ ತಾಣ
ಅಂಬೋಲಿ ಘಾಟ್ ರಾಜ್ಯದಾದ್ಯಂತ ಅತಿ ಹೆಚ್ಚು ಮಳೆಯನ್ನು ಪಡೆಯುತ್ತದೆ ಮತ್ತು ಒಂದು ಕಾಲದಲ್ಲಿ ಶವಗಳನ್ನು ಎಸೆಯಲು ‘ಅನುಕೂಲಕರ ತಾಣ’ ಎಂದು ಕುಖ್ಯಾತವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.

ಇದನ್ನೂ ಓದಿ : Bike tanker accident: ಬೈಕ್‌ ಟ್ಯಾಂಕರ್‌ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ಇದನ್ನೂ ಓದಿ : Murder and suicide: ಬಾಲಕಿಯನ್ನು ಇರಿದು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಬಾಲಕ

ಕಳೆದ ಮೂರು ವರ್ಷಗಳಲ್ಲಿ ಇನ್ನೂ ಎರಡು ಶವಗಳನ್ನು ಈ ಪ್ರದೇಶದಲ್ಲಿ ಎಸೆಯಲಾಗಿದೆ. ಅಂದಿನಿಂದ, ಪ್ರವಾಸಿಗರ ಕಾಲ್ನಡಿಗೆಯ ಮಾರ್ಗದಲ್ಲಿ ಹಲವಾರು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕೊಲ್ಹಾಪುರದಿಂದ ಸಾವಂತವಾಡಿಗೆ ಹೋಗುವ ಮಾರ್ಗದಲ್ಲಿರುವ ಅಂಬೋಲಿ ಘಾಟ್ ಮಹಾರಾಷ್ಟ್ರದ ಅತ್ಯಂತ ಬೇಡಿಕೆಯ ಪ್ರವಾಸಿ ಆಕರ್ಷಣೆಯಾಗಿದೆ.

Maharashtra crime: The person who killed a friend and went to throw the body was also a victim

Comments are closed.