Mangalore Blast case: ಮಂಗಳೂರು ಬ್ಲಾಸ್ಟ್‌ : ನಕಲಿ ಪಾಸ್‌ ಪೋರ್ಟ್‌ ಬಳಸಿ ವಿದೇಶಕ್ಕೆ ಹಾರುವ ಪ್ಲ್ಯಾನ್‌ ಮಾಡಿದ್ದ ಶಾರೀಖ್

ಮಂಗಳೂರು: (Mangalore Blast case) ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣದ ಹಿನ್ನಲೆಯಲ್ಲಿ ಆರೋಪಿಗಳ ವಿಚಾರಣೆ ಮುಂದುವರೆದಿದ್ದು, ದಿನಕ್ಕೊಂದು ಮಾಹಿತಿಗಳು ಬಹಿರಂಗವಾಗುತ್ತಿದೆ. ಇದೀಗ ತನಿಖೆ ವೇಳೆ ಇನ್ನೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಶಾರೀಖ್‌ ನಕಲಿ ಪಾಸ್‌ ಪೋರ್ಟ್‌ ಬಳಸಿ ವಿದೇಶಕ್ಕೆ ಹಾರುವ ಉಪಾಯ ಹೂಡಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ.

ಶಾರೀಖ್‌ ವಿದ್ವಂಸಕ ಕೃತ್ಯಕ್ಕೆ ಸ್ಕೆಚ್‌ (Mangalore Blast case) ಹಾಕಿದ್ನಾ ಅನ್ನೋ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ ವೇಳೆಯಲ್ಲಿ ಇನ್ನೋರ್ವ ಭಯೋತ್ಪಾದಕನ ಅಸಲಿಯತ್ತು ಬಯಲಾಗಿದೆ. ಅಮೀರ್‌ ಎನ್ನುವಾತ ಶಾರೀಖ್‌ ಗೆ ಸಹಾಯ ನೀಡುತ್ತಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ. ಉಗ್ರ ಅಮೀರ್‌ ನಕಲಿ ಆಧಾರ್‌ ಕಾರ್ಡ್‌ ಬಳಸಿ ವಿದೇಶಕ್ಕೆ ಹಾರುವ ಪ್ಲ್ಯಾನ್‌ ನಡೆಸಿದ್ದ. ಶಾರೀಖ್‌ ಕೂಡ ಅದೇ ರೀತಿಯಲ್ಲಿ ನಕಲಿ ಆಧಾರ್‌ ಕಾರ್ಡ್‌ ಬಳಸಿ ವಿದೇಶಕ್ಕೆ ಹಾರುವ ಉಪಾಯವನ್ನು ನಡೆಸಿದ್ದ ಎನ್ನುವ ಮಹಿತಿ ಹೊರಬಿದ್ದಿದೆ.

ಯಾರಿದು ಅಮೀರ್‌ ಹಂಝಾ..?

ಅಮೀರ್‌ ಹಂಝಾ ಅಸ್ಸಾಂ ಮೂಲದವನು. ಈತ ಪಿಎಫ್‌ಐ ಉಪ ಸಂಘಟನೆ ಮತ್ತು ಸಿಎಫ್‌ಐ ನ ಅಧ್ಯಕ್ಷನಾಗಿದ್ದ. ಪಿಎಫ್‌ಐ ಬ್ಯಾನ್‌ ಆದ ಬಳಿಕ ಅಸ್ಸಾಂ ನಿಂದ ಬೆಂಗಳೂರಿಗೆ ಅಮೀರ್‌ ಬಂದಿದ್ದ. ಈತನಿಗಾಗಿ ಅಸ್ಸಾಂ ಪೊಲೀಸರು ಹುಡುಕಾಟವನ್ನು ನಡೆಸಿದ್ದರು. ಅದಕ್ಕಾಗಿಯೇ ಈತ ನಕಲಿ ಆಧಾರ್‌ ಕಾರ್ಡ್‌ ಬಳಸಿ ವಿದೇಶಕ್ಕೆ ಹಾರುವ ಉಪಾಯವನ್ನು ಕೂಡ ಮಾಡಿಕೊಂಡಿದ್ದ. ನಕಲಿ ಆಧಾರ್‌ ಕಾರ್ಡ್‌ ಬಳಸಿ ನಕಲಿ ಪಾಸ್‌ ಪೋರ್ಟ್‌ ಗೆ ಅರ್ಜಿ ಕೂಡ ನೀಡಿದ್ದ. ಹಣ್ಣೂರು ಠಾಣಾ ಸಿಬ್ಬಂಧಿಗಳು ಪಾಸ್‌ ಪೋರ್ಟ್‌ ಪರಿಶೀಲನೆಗೆಂದು ಬಂದಿದ್ದ ವೇಳೆ ಅವರಿಗೆ ಶಾಕ್‌ ಆಗಿತ್ತು. ಈತ ಬಿನ್ನಾಮಿನ ಎಂಬ ಹೆಸರಿನಲ್ಲಿ ಪಾಸ್‌ ಪೋರ್ಟ್‌ ಗೆ ಅಪ್ಲೈ ಮಾಡಿದ್ದ. ಆದರೆ ಆ ಹೆಸರಿನವರು ಯಾರು ಇರಲಿಲ್ಲ ಎಂಬ ಮಾಹಿತಿ ಠಾಣಾ ಸಿಬ್ಬಂಧಿಗಳಿಗೆ ಗೊತ್ತಾಗಿದೆ. ಶಾರೀಖ್‌ ಕೂಡ ಅವನಂತೆಯೇ ನಕಲಿ ಪಾಸ್‌ ಪೋರ್ಟ್‌ ಬಳಸಿ ವಿದೇಶಕ್ಕೆ ಹಾರುವ ಉಪಾಯವನ್ನು ನಡೆಸಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಮಾದಕ ವ್ಯಸನ, ಅನೈತಿಕ ಸಂಬಂಧ : ಪತ್ನಿಯನ್ನೇ ಕೊಲೆಗೈದು ದೇಹವನ್ನು ತುಂಡರಿಸಿದ ಪತಿ

ಇದನ್ನೂ ಓದಿ : Firecracker Explosion : ಪಟಾಕಿ ಸ್ಪರ್ಧೆಯ ವೇಳೆ ಅವಘಡ : ಪಟಾಕಿ ಸ್ಪೋಟದಿಂದ 30ಕ್ಕೂ ಅಧಿಕ ಮಂದಿಗೆ ಗಾಯ

ಬೆಂಗಳೂರಿನಲ್ಲೂ ವಾಸವಿದ್ದ ಶಾರೀಖ್‌ :

ತನಿಖೆಯ ವೇಳೆ ಶಾರೀಖ್‌ ಬೆಂಗಳೂರಿನಲ್ಲೂ ವಾಸವಿದ್ದ ಎಂಬ ಮಾಹಿತಿ ತಿಳಿದು ಬಂದಿದೆ. ಈ ಕುರಿತು ಎನ್‌ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮತೀನ್‌ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂಬ ಮಾಹಿತಿ ಕೂಡ ಬಯಲಾಗಿದೆ. ಈ ಕುರಿತು ಅಕ್ಕಪಕ್ಕದ ಮನೆಯವರಲ್ಲಿ ಕೂಡ ಎನ್‌ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

(Mangalore Blast case) In the background of the Mangalore blast case, the investigation of the accused is continuing and information is being revealed day by day. Now another explosive information has been revealed during the investigation and it has been revealed that Sharikh had planned to fly abroad using a fake passport.

Comments are closed.