Mangalore bomb blast: ಮಂಗಳೂರು ಬಾಂಬ್‌ ಸ್ಪೋಟ ಪ್ರಕರಣ: ಸ್ಪೋಟದ ತನಿಖೆ ಎನ್‌ಐಎ ಹೆಗಲಿಗೆ :ಸಂಸದ ನಳೀನ್‌ ಕುಮಾರ್‌

ಮಂಗಳೂರು: (Mangalore bomb blast) ಮಂಗಳೂರಿನಲ್ಲಿ ನಡೆದ ಬಾಂಬ್‌ ಸ್ಪೋಟ ಪ್ರಕರಣವನ್ನು ಇದೀಗ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ತನಿಖೆ ನಡೆಸಲಿದೆ. ಸ್ಪೋಟದ ಹಿಂದಿರುವ ಉಗ್ರರ ಜಾಡನ್ನು ಪತ್ತೆಹಚ್ಚಲು ಎನ್‌ಐಎ ನೆರವಾಗಲಿದೆ ಎಂದು ನಳೀನ್‌ ಕುಮಾರ್ ಹೇಳಿದ್ದಾರೆ.

ಈ ಕುರಿತು(Mangalore bomb blast) ಟ್ವೀಟ್‌ ಮಾಡಿರುವ ನಳೀನ್‌ ಕುಮಾರ್‌ ಅವರು, ಇಂತಹ ಮೂಲಭೂತವಾದಿಗಳ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ನೀಡುವವರಿಗೂ ಕೂಡ ಹೆಡೆಮುರಿ ಕಟ್ಟಲು ನಮ್ಮ ಪೊಲೀಸ್‌ ತಂಡ ಸನ್ನದ್ದವಾಗಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ನಡೆದ ಸ್ಫೋಟದ ಹಿಂದೆ ಮತೀಯ ಶಕ್ತಿಗಳು ಜಿಲ್ಲೆಯ ಶಾಂತಿ,ಸುವ್ಯವಸ್ಥೆ ಕದಡುವ ಪ್ರಯತ್ನ ಮಾಡಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಮೂಲಭೂತವಾದಿಗಳ ಇಂತಹ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಅಥವಾ ನೆರವು ನೀಡುವವರಿಗೂ ಹೆಡೆಮುರಿ ಕಟ್ಟಲು ನಮ್ಮ ಪೊಲೀಸ್ ವ್ಯವಸ್ಥೆ ಸನ್ನದ್ಧವಾಗಿದೆ. ದೇಶದ್ರೋಹಿ ಸಂಘಟನೆ ಗಳನ್ನು ಬ್ಯಾನ್ ಮಾಡಿದ ಬಳಿಕ ವಿಧ್ವಂಸಕ ಕೃತ್ಯಗಳನ್ನು ಮಾಡಿ ಬಾಲ ಬಿಚ್ಚಲು ಕೆಲವರು ಹೊರಟಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರದಲ್ಲಿ ನಾಗರಿಕರ ಸಹಕಾರ ಮುಖ್ಯ. ಕರ್ನಾಟಕದಲ್ಲಿ ನಮ್ಮ ಪೊಲೀಸ್ ಇಲಾಖೆ ಮಂಗಳೂರಿನ ಸ್ಫೋಟದ ಮೂಲ ಪತ್ತೆಹಚ್ಚುವಲ್ಲಿ ನಿರತವಾಗಿದ್ದು, ಕೇಂದ್ರದಿಂದ ಅಗತ್ಯ ನೆರವು ನೀಡಲಾಗಿದೆ. ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : Mangaluru blast incident: ಮಂಗಳೂರು ಸ್ಪೋಟ ಪ್ರಕರಣ : ಪಿಎಫ್ಐ ಮುಖಂಡ ಇಜಾಜ್ ಪೊಲೀಸ್ ವಶಕ್ಕೆ

ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ಮಾಡುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಮತಾಂಧರ ಪ್ರಯತ್ನ ಜಾರಿಯಾಗಲು ಬಿಡುವುದಿಲ್ಲ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಎನ್‌ಐಎ ದಳವು ಮಂಗಳೂರಿನ ಬಾಂಬ್‌ ಸ್ಪೋಟದ ತನಿಖೆಯನ್ನು ನಡೆಸಲಿದ್ದು, ಇದರ ಹಿಂದಿರುವ ಭಯೋತ್ಪಾದಕರ ಜಾಡನ್ನು ಪತ್ತೆಹಚ್ಚಲು ತಂಡ ನೆರವಾಗಲಿದೆ. ಬಾಂಬ್‌ ಸ್ಪೋಟದ ಹಿಂದೆ ಅಂತರಾಜ್ಯ ದೇಶದ್ರೋಹಿಗಳ ಕೈವಾಡವಿದ್ದರೆ ಅದನ್ನು ಪತ್ತೆ ಹಚ್ಚಲು ಎನ್‌ಐಎ ಸನ್ನದ್ದವಾಗಿದೆ. ಇದಕ್ಕೆ ನಮ್ಮ ಉನ್ನತ ಪೊಲೀಸ್‌ ಅಧಿಕಾರಿಗಳು ಸಹಕರಿಸುತ್ತಾರೆ ಎಂದು ಟ್ವೀಟ್‌ ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ : Mangaluru Blast: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಬಾಂಬ್ ರಸ್ತೆ ಹಂಪ್ಸ್‌ನಿಂದಾಗಿ ಆಟೋದಲ್ಲೇ ಸ್ಫೋಟ !

ಏನಿದು ಪ್ರಕರಣ..?

ಶನಿವಾರ ಸಂಜೆ ಮಂಗಳೂರಿನ ಪಂಪ್‌ವೆಲ್‌ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿದೆ. ಇದಕ್ಕೂ ಮುನ್ನ ದಾರಿ ಮಧ್ಯೆ ಪ್ರಯಾಣಿಕನೊಬ್ಬ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದ. ಆತ ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿದೆ. ಶಂಕಿತನ ಕೈಯಲ್ಲಿದ್ದ ಕುಕ್ಕರ್ ಸ್ಪೋಟದ ತೀವ್ರತೆಗೆ ಛಿದ್ರಗೊಂಡಿದೆ.
‌ಈ ಕುರಿತು ಪೊಲೀಸ್‌ ಅಧಿಕಾರಿಗಳು ಇಂಚಿಂಚು ಮಾಹಿತಿಗಳನ್ನು ಕಲೆ ಹಾಕಿದ್ದು, ಇನ್ನಷ್ಟು ಮಾಹಿತಿಗಳನ್ನು ಬಯಲಿಗೆಳೆಯುವ ಕಾರ್ಯ ಪೊಲೀಸ್‌ ಹಾಗೂ ರಾಷ್ಟ್ರೀಯ ತನಿಖಾ ತಂಡದಿಂದ ನಡೆಯುತ್ತಿದೆ

(Mangalore bomb blast) The National Investigation Agency (NIA) will now investigate the bomb blast case in Mangalore on the instructions of the central government. Naleen Kumar said that the NIA will help trace the trail of the terrorists behind the blast.

Comments are closed.