Manipur violence : ಮಣಿಪುರದಲ್ಲಿ ಆಗಸ್ಟ್ 10 ರಿಂದ ಶಾಲೆಗಳು ಪುನರಾರಂಭ : 9 ರಿಂದ 12ನೇ ತರಗತಿಯವರೆಗೆ ಆರಂಭಕ್ಕೆ ಸಿದ್ದತೆ

ಮಣಿಪುರ : ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur violence) ಆಗಸ್ಟ್ 10 ರಿಂದ ಶಾಲೆಗಳನ್ನು ಪುನರಾರಂಭಿಸಲು ಸಿದ್ದತೆ ನಡೆಸಲಾಗಿದೆ. ಎರಡನೇ ಹಂತದಲ್ಲಿ 9 ರಿಂದ 12 ನೇ ತರಗತಿಗಳಿಗೆ ಶಾಲೆಗಳನ್ನು ಆರಂಭಿಸಲಾಗುತ್ತದೆ. ಕಳೆದ ಎರಡು ತಿಂಗಳಿನಿಂದಲೂ ಶಾಲೆಗಳನ್ನು ಮುಚ್ಚಲಾಗಿದ್ದು, ಇದೀಗ ಶಾಲಾರಂಭಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಆಡಳಿತ ತಿಳಿಸಿದೆ.

ಹಿಂಸಾಚಾರದ ನಂತರ ಸುಮಾರು ಎರಡು ತಿಂಗಳ ಕಾಲ ಮುಚ್ಚಲಾಗಿದ್ದ ಮಣಿಪುರದ ಶಾಲೆಗಳು ಗುರುವಾರ ಮತ್ತೆ ತೆರೆಯಲಿವೆ. ಮಕ್ಕಳ ಸುರಕ್ಷತೆಗೆ ಆದ್ಯತೆಯನ್ನು ನೀಡಿ, ಶಾಲಾರಂಭ ಮಾಡಲಾಗುತ್ತಿದೆ.”1 ರಿಂದ 8 ನೇ ತರಗತಿಗಳಿಗೆ ಶಾಲೆಗಳನ್ನು ತೆರೆಯಲು ಜುಲೈ 3, 2023 ರ ಸಮ ಸಂಖ್ಯೆಯ ಆಧಾರದಲ್ಲಿ ಶಾಲೆಗಳನ್ನು ಆರಂಭಿಸಲಾಗಿತ್ತು. ಮುಂದಿನ ಹಂತದಲ್ಲಿ ಇದೀಗ ಮಣಿಪುರದಲ್ಲಿನ ಎಲ್ಲಾ ಶಾಲೆಗಳು ಪುನರರಾರಂಭಗೊಳ್ಳುತ್ತಿದೆ. ಇದನ್ನೂ ಓದಿ : Crime News : ಸರಗಳ್ಳತನ ಆರೋಪ ವಯೋವೃದ್ಧನ ಹತ್ಯೆ : ಮೂವರ ಬಂಧನ

ಈ ಶಾಲೆಗಳ ಪುನರಾರಂಭಕ್ಕೆ ಪ್ರತ್ಯೇಕ ಆದೇಶವನ್ನು ನಂತರ ನೀಡಲಾಗುವುದು. ಯಾವುದೇ ಕಲಿಕೆಯ ನಷ್ಟವನ್ನು ತಡೆಗಟ್ಟಲು ಈ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಕಷ್ಟು ಕಡ್ಡಾಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

Manipur violence: Schools to resume from August 10 in Manipur: 9th to 12th classes ready to start

Comments are closed.