ಮೂಲ್ಕಿ : ಮಾರುತಿ ಓಮ್ನಿ ಕಾರು ಹಾಗೂ ಬಸ್ಸು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Marathi Omni bus Accident ) ಇಬ್ಬರು ಸಾವನ್ನಪ್ಪಿ, ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಪಾವಂಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಮುಕ್ಕ ಸಮೀಪದ ಪಡ್ರೆಯ ನಿವಾಸಿಗಳಾದ ಭುಜಂಗ (62 ವರ್ಷ) ಹಾಗೂ ವಸಂತ್ (55 ವರ್ಷ ) ಎಂಬವರೇ ಮೃತ ದುರ್ದೈವಿಗಳು. ಇನ್ನು ಕಾರು ಚಾಲಕ ಬಾಲಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಓಮ್ನಿ ಕಾರು ಹಳೆಯಂಗಡಿಯ ಒಳ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಎಂಟ್ರಿ ಕೊಟ್ಟಿದೆ. ಈ ವೇಳೆಯಲ್ಲಿ ಮಂಗಳೂರಿನಿಂದ ಬರುತ್ತಿದ್ದ ಬಸ್ಸು ನೇರವಾಗಿ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಮಂಗಳೂರು ಉತ್ತರ ವಲಯದ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : 8 ತಿಂಗಳು, 80 ಮಂದಿ ಕಾಮುಕರು..! ಗ್ಯಾಂಗ್ರೇಪ್ಗೊಳಗಾಗುತ್ತಿದ್ದ ಬಾಲಕಿಯ ಕರುಣಾಜನಕ ಕತೆಯಿದು..!
ಇದನ್ನೂ ಓದಿ : ಒಡಹುಟ್ಟಿದ ತಮ್ಮನನ್ನೇ ಬರ್ಬರವಾಗಿ ಕೊಂದು ಪೊಲೀಸರಿಗೆ ಶರಣಾದ ಅಣ್ಣ..!
Marathi omni bus Accident 2 death Pavanje near Mangalore