Earth Day 2022 : ಇಂದು ವಿಶ್ವ ಭೂ ದಿನ 2022 : ಈ ವರ್ಷದ ಥೀಮ್‌, ಇತಿಹಾಸ ಮತ್ತು ಕೆಲವು ಸಂದೇಶಗಳು ಇಲ್ಲಿದೆ ನೋಡಿ

ಇಂದು ವಿಶ್ವ ಭೂ ದಿನ (Happy Earth Day 2022). ಪ್ರತಿ ವರ್ಷ ಏಪ್ರಿಲ್‌ 22 ರಂದು ವಿಶ್ವ ಭೂ ದಿನವೆಂದು ಆಚರಿಸುತ್ತಾರೆ. ಈ ದಿನವು ಮಾಲಿನ್ಯ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜಾಗ್ರತಿ ಮೂಡಿಸುವುದಾಗಿದೆ. ಜನರನ್ನು ಒಗ್ಗೂಡುವಂತೆ ಪ್ರೆರೇಪಿಸಲು ಮತ್ತು ನಮ್ಮ ಗೃಹದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಈ ದಿನದಂದು ಹಲವಾರು ಅಭಿಯಾನಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿಲಾಗುತ್ತದೆ.

ಥೀಮ್‌ :
ಈ ವರ್ಷದ ವಿಶ್ವ ಭೂ ದಿನದ ಥೀಮ್‌ ಹೀಗಿದೆ ‘ನಮ್ಮ ಗ್ರಹದಲ್ಲಿ(ಭೂಮಿಯಲ್ಲಿ) ಹೂಡಿಕೆ ಮಾಡಿ’. ಅಂದರೆ ವ್ಯವಹಾರಗಳನ್ನು ಸುಸ್ಥಿರ ಅಬ್ಯಾಸಗಳ ಕಡೆಗೆ ಬದಲಾಗುವಂತೆ ಕರೆ ನೀಡುವುದಾಗಿದೆ.

ವಿಶ್ವಸಂಸ್ಥೆಯು ಈ ದಿನವನ್ನು ಅಂತರಾಷ್ಟ್ರೀಯ ಮಾತೃ ಭೂಮಿ ದಿನವನ್ನಾಗಿ ಆಚರಿಸುತ್ತದೆ. ಇದು ‘ಪ್ರಕೃತಿಯೊಂದಿಗೆ ಸಾಮರಸ್ಯ’ ಎಂಬ ಘೋಷವಾಕ್ಯದೊಂದಿಗೆ ಈ ದಿನವನ್ನು ಆಚರಿಸುತ್ತದೆ.

ಇತಿಹಾಸ:
ವಿಶ್ವ ಭೂ ದಿನವನ್ನು ಮೊಟ್ಟಮೊದಲು ಏಪ್ರಿಲ್‌ 22,1970ರಂದು ಆಚರಿಸಲಾಯಿತು. 20 ಮಿಲಿಯನ್‌ ಜನರು ನಗರಗಳಲ್ಲಿ ಬೀದಿಗಿಳಿದು 150 ವರ್ಷಗಳಲ್ಲಿ ಕೈಗಾರಿಕಾ ಅಭಿವೃದ್ಧಿಯಿಂದ ಮಾನವನ ಆರೋಗ್ಯದ ಮೇಲೆ ಉಂಟಾದ ಗಂಭೀರ ಪರಿಣಾಮಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಇವತ್ತಿನ ದಿನ ಹಲವಾರು ಕಾರ್ಯಕ್ರಮಗಳು, ಸೆಮಿನಾರ್‌ಗಳನ್ನು ಆಯೋಜಿಸಿ ಜನರಲ್ಲಿ ಅರಿವು ಮೂಡಿಸಲಾಗುವುದು.

ವಿಶ್ವ ಭೂ ದಿನದ ಕೆಲವು ಸಂದೇಶಗಳು:

  • ಪ್ರಕೃತಿಯನ್ನು ನಮ್ಮ ಹಿರಿಯರು ನಮಗಾಗಿ ಬಿಟ್ಟುಕೊಟ್ಟಿದ್ದಾರೆ, ನಾವೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಇದನ್ನು ಉಳಿಸೋಣ
  • ಪ್ರಕೃತಿಯನ್ನು ಆಳವಾಗಿ ನೋಡಿ, ನಂತರ ನೀವುಎಲ್ಲವನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ. – ಆಲ್ಬರ್ಟ್‌ ಐನ್ಸ್ಟೈನ್‌.
  • ಸಂಗೀತ ಮತ್ತು ಕಲೆಯಂತೆ ಪ್ರಕೃತಿಯ ಪ್ರೀತಿಯು ರಾಜಕೀಯ ಅಥವಾ ಸಾಮಾಜಿಕ ಗಡಿಗಳನ್ನು ಮೀರುವ ಸಾಮಾನ್ಯ ಭಾಷೆಯಾಗಿದೆ. –ಜಿಮ್ಮಿ ಕಾರ್ಟರ್‌

ಇದನ್ನೂ ಓದಿ : vastu tips for sleeping pattern : ಮಲಗುವ ವೇಳೆಯಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ

ಇದನ್ನೂ ಓದಿ : beat the heat : ಬೇಸಿಗೆಯಿಂದ ಪಾರಾಗಲು ಟ್ರೈಮಾಡಿ ನೋಡಿ ಈ ಆರ್ಯುವೇದಿಕ್​​ ಜ್ಯೂಸ್​​..!

(Earth Day 2022 Date Theme History and some quotes)

Comments are closed.