ಭಾನುವಾರ, ಏಪ್ರಿಲ್ 27, 2025
HomeCrimeMinor girl Murder case : ಬಾಲಕಿಗೆ 20 ಬಾರಿ ಚಾಕು ಇರಿದು ಕೊಲೆ :...

Minor girl Murder case : ಬಾಲಕಿಗೆ 20 ಬಾರಿ ಚಾಕು ಇರಿದು ಕೊಲೆ : ಘಟನೆ ಸಿಸಿಟಿವಿಯಲ್ಲಿ ಸೆರೆ

- Advertisement -

ದೆಹಲಿ : ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು (Minor girl Murder case) ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಸದ್ಯ ಈ ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ದುರ್ಘಟನೆಯು ದೆಹಲಿಯ ಶಹಬಾದ್ ಪ್ರದೇಶದಲ್ಲಿ ನಡೆದಿದ್ದು, ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ಸಂತ್ರಸ್ತೆಯನ್ನು ಸಾಕ್ಷಿ ಎಂದು ಗುರುತಿಸಲಾಗಿದ್ದು, ಆಕೆಯ ಶವ ಬೀದಿಯಲ್ಲಿ ಪತ್ತೆಯಾಗಿದೆ. ಹಾಗೆಯೇ ಆರೋಪಿಯನ್ನು ಸಾಹಿಲ್ ಎಂದು ಗುರುತಿಸಲಾಗಿದ್ದು, ರಸ್ತೆಯಲ್ಲಿ ಬರುತ್ತಿದ್ದ ಬಾಲಕಿಯ ಮೇಲೆ ಹಲ್ಲೆ ನಡೆಸಿ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ.

ಆರೋಪಿ ಸಾಹಿಲ್ ಮತ್ತು ಮೃತಪಟ್ಟ ಸಾಕ್ಷಿ ಮನೆಯವರು ಸಂಬಂಧಿಕರಾಗಿದ್ದು, ಅವರ ನಡುವೆ ಜಗಳವಾಗಿತ್ತು. ಮೃತಪಟ್ಟ ಸಾಕ್ಷಿ ತನ್ನ ಸ್ನೇಹಿತೆಯ ಮಗನ ಹುಟ್ಟುಹಬ್ಬಕ್ಕೆ ಹಾಜರಾಗಲು ತೆರಳುತ್ತಿದ್ದಳು. ಆ ಸಂದರ್ಭದಲ್ಲಿ ಆರೋಪಿ ಸಾಹಿಲ್ ಆಕೆಯನ್ನು ಅಡ್ಡಗಟ್ಟಿ ಹಲವು ಬಾರಿ ಇರಿದು ಕಲ್ಲಿನಿಂದ ಹೊಡೆದಿದ್ದಾನೆ. ಇನ್ನು ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಹುಡುಕಾಟ ನಡೆದಿದೆ.

ಇದನ್ನೂ ಓದಿ : Terrible Car Accident Case : ಭೀಕರ ಕಾರು ಅಪಘಾತದಲ್ಲಿ ಒಂದೇ ಕಾಲೇಜಿನ 7 ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಸಾವು : ಮೂವರಿಗೆ ಗಂಭೀರ ಗಾಯ

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಮೃತ ಸಾಕ್ಷಿಯ ತಂದೆ ಎಫ್‌ಐಆರ್ ದಾಖಲಿಸಿದ್ದಾರೆ. ಮೃತನ ತಂದೆಯ ದೂರಿನ ಮೇರೆಗೆ ಪಿಎಸ್ ಶಹಬಾದ್ ಡೈರಿಯಲ್ಲಿ ಎಫ್‌ಐಆರ್ u/s 302 ಐಪಿಸಿ ದಾಖಲಾಗಿದೆ. ಇನ್ನು ಆರೋಪಿ ಸಾಹಿಲ್‌ ಹುಡುಕಾಟದಲ್ಲಿ ಪೊಲೀಸ್‌ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Minor girl Murder case : A 16-year-old girl was stabbed to death in a public place: The incident was captured on CCTV.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular