ಮಹಾರಾಷ್ಟ್ರ : 3 minors kill : ದೀಪಾವಳಿ ಸಂಭ್ರಮದ ನಡುವೆಯೇ ಮುಂಬೈನ ಶಿವಾಜಿ ನಗರದ ನಟವರ್ ಪರೇಖ್ ಕಾಂಪೌಂಡ್ನಲ್ಲಿ ಬರ್ಬರ ಘಟನೆಯೊಂದು ನಡೆದಿದೆ. ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸಿದ್ದನ್ನು ತಡೆದಿದ್ದಕ್ಕೆ 21 ವರ್ಷದ ಯುವಕನನ್ನು ಮೂವರು ಅಪ್ರಾಪ್ರರು ಹತ್ಯೆ ಮಾಡಿದ ಘಟನೆಯೊಂದು ನಡೆದಿದೆ. ಆರೋಪಿಗಳ ಪೈಕಿ ಇಬ್ಬರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓರ್ವ ನಾಪತ್ತೆಯಾಗಿದ್ದು ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳ ಪ್ರಕಾರ ಸುನೀಲ್ ಶಂಕರ್ ನಾಯ್ಡು ಚಾಕುವಿನಿಂದ ಇರಿತಕ್ಕೊಳಗಾದ ಬಳಿಕ ಆರೋಪಿಗಳ ಹಿಂದೆ ಓಡುತ್ತಿರುವುದನ್ನು ಕಾಣಬಹುದಾಗಿದೆ.
ಶಿವಾಜಿ ನಗರ ಪೊಲೀಸರು ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಸುನೀಲ್ ಶಂಕರ್ ನಾಯ್ಡು 12 ವರ್ಷದ ಬಾಲಕ ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದನ್ನು ತಡೆದಿದ್ದರು. ಶಿವಾಜಿ ನಗರ ಪೊಲೀಸರು ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಸುನೀಲ್ ಶಂಕರ್ ನಾಯ್ಡು 12 ವರ್ಷದ ಬಾಲಕ ಗಾಜಿನ ಬಾಟಲಿಯ ಒಳಗೆ ಪಟಾಕಿ ಸಿಡಿಸಲು ಮುಂದಾಗಿದ್ದ ಸಂದರ್ಭದಲ್ಲಿ ಅದನ್ನು ತಡೆದಿದ್ದರು. ಇದಾದ ಬಳಿಕ ಸುನೀಲ್ ಶಂಕರ್ ನಾಯ್ಡು ವಿರುದ್ಧ ಕೋಪಗೊಂಡಿದ್ದ 12 ವರ್ಷದ ಬಾಲಕ ತನ್ನ 14 ವರ್ಷದ ಸಹೋದರ ಹಾಗೂ 15ವರ್ಷದ ಸ್ನೇಹಿತನನ್ನು ಕರೆತಂದಿದ್ದ. ಮೊದಲಿಗೆ ನಾಲ್ವರ ವಿರುದ್ಧ ವಾಗ್ವಾದ ನಡೆದಿತ್ತು. ಮೂವರು ಅಪ್ರಾಪ್ತರು ಸುನೀಲ್ಗೆ ಥಳಿಸಿದ್ದಾರೆ. ಈ ನಡುವೆ ಅಪ್ರಾಪ್ತರಲ್ಲಿ ಓರ್ವ 21 ವರ್ಷದ ಯುವಕನ ಕುತ್ತಿಗೆಗೆ ಚಾಕುವಿನಿಂದ ಇರಿದು ಓಡಿ ಹೋಗಿದ್ದಾನೆ.
ಕುತ್ತಿಗೆಗೆ ಇರಿತಕ್ಕೊಳಗಾದ ಬಳಿಕ ಸುನೀಲ್ ಅಪ್ರಾಪ್ತ ಆರೋಪಿಗಳ ಹಿಂದೆ ಓಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುತ್ತಿಗೆಯಲ್ಲಿ ಚಾಕು ಇದ್ದಾಗಲೇ ಮೆಟ್ಟಿಲು ಹತ್ತಿದ್ದಾರೆ ಆದರೆ ಅದು ಸಾಧ್ಯವಾಗದೇ ಅಲ್ಲೇ ಕುಸಿದು ಬಿದ್ದಿದ್ದಾರೆ. ಸುನೀಲ್ರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅತಿಯಾದ ರಕ್ತಸ್ರಾವದಿಂದ ಕೊಲೆಯಾಗಿದ್ದಾರೆ. ಈ ಸಂಬಂಧ ಪೊಲೀಸರು ಮೂವರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿ : Vijaya Raghavendra : ‘ಮರೀಚಿ’ಯಾದ ಚಿನ್ನಾರಿ ಮುತ್ತ- ಸಿದ್ಧ್ರುವ್ ಚೊಚ್ಚಲ ಚಿತ್ರಕ್ಕೆ ಹೀರೋ ಆದ ವಿಜಯ ರಾಘವೇಂದ್ರ
ಇದನ್ನೂ ಓದಿ : Alien in India Vs Pakistan match: ಭಾರತ Vs ಪಾಕಿಸ್ತಾನ ಪಂದ್ಯದಲ್ಲಿ ಮೈದಾನದಲ್ಲೇ ಕಾಣಿಸಿಕೊಂಡ ಏಲಿಯನ್