Special Gift for King Kohli : ತ್ರಿವರ್ಣ ಧ್ವಜ + ವಿರಾಟ್ ಕೊಹ್ಲಿ = ರಂಗೋಲಿ, ಕಿಂಗ್ ಕೊಹ್ಲಿಗೆ ಅಭಿಯಾನಿಯ ವಿಶೇಷ ಗೌರವ

ಬೆಂಗಳೂರು: (Special Gift for King Kohli) ಜಗತ್ತಿನೆಲ್ಲೆಡೆ ದೀಪಾವಳಿಯ ಸಂಭ್ರಮ ಕಳೆಗಟ್ಟಿದೆ. ಬೆಳಕಿನ ಹಬ್ಬವನ್ನು ಸಂಭ್ರಮದ ಸಡಗರದಿಂದ ಆಚರಿಸಲಾಗುತ್ತಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2022) ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ದೀಪಾವಳಿಯ ಸಂಭ್ರಮದಲ್ಲಿರುವ ಭಾರತೀಯರಿಗೆ ಎರಡು ದಿನಗಳಿಗೆ ಮುನ್ನವೇ ದೊಡ್ಡ ಉಡುಗೊರೆ ನೀಡಿದೆ.

ಪಾಕಿಸ್ತಾನ ವಿರುದ್ಧ ಭಾರತವನ್ನು ಗೆಲ್ಲಿಸಿದ್ದ ವಿರಾಟ್ ಕೊಹ್ಲಿ (Virat Kohli) ಅವರಿಗೆ ಅಭಿಯಾನಿಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ. ಅದು ಉಡುಗೊರೆಯೂ ಹೌದು, ಗೌರವವೂ ಹೌದು. ಕೊಹ್ಲಿ ಅಭಿಮಾನಿಯೊಬ್ಬರು ದೀಪಾವಳಿಗೆ ವಿಶೇಷ ರಂಗೋಲಿಯೊಂದನ್ನು ಬಿಡಿಸಿದ್ದು, ತ್ರಿವರ್ಣ ಧ್ವಜ ಹಾಗೂ ವಿರಾಟ್ ಕೊಹ್ಲಿ ಅವರ ಚಿತ್ರವನ್ನು ರಂಗೋಲಿಯಲ್ಲಿ ಅದ್ಭುತವಾಗಿ ಬಿಡಿಸಲಾಗಿದೆ.


ತ್ರಿವರ್ಣ ಧ್ವಜದ ಸುತ್ತಲೂ ದೀಪ ಬೆಳಗುತ್ತಿದ್ದು, ರಂಗೋಲಿಯ ಕೆಳಭಾಗದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ನಿಂತಿರುವ ಚಿತ್ರವಿದೆ. ಆ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಭಾನುವಾರ ನಡೆದಿದ್ದ ಟಿ20 ವಿಶ್ವಕಪ್ ಸೂಪರ್-12 ಹಂತದ ತನ್ನ ಮೊದಲ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 4 ವಿಕೆಟ್’ಗಳಿಂದ ರೋಚಕವಾಗಿ ಮಣಿಸಿತ್ತು.

ಇದನ್ನೂ ಓದಿ : Dhoni and Kohli : “ಧೋನಿ ಆ ಕೆಲಸ ಮಾಡಿರದಿದ್ದರೆ ನಾನು ಇಲ್ಲಿ ಇರುತ್ತಲೇ ಇರಲಿಲ್ಲ”, ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

ಇದನ್ನೂ ಓದಿ : Kohli reveals secret of success Vs Pak : ಪಾಕಿಸ್ತಾನ ವಿರುದ್ಧದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಸೀಕ್ರೆಟ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : Alien in India Vs Pakistan match: ಭಾರತ Vs ಪಾಕಿಸ್ತಾನ ಪಂದ್ಯದಲ್ಲಿ ಮೈದಾನದಲ್ಲೇ ಕಾಣಿಸಿಕೊಂಡ ಏಲಿಯನ್

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. ನಂತರ ಗುರಿ ಬೆನ್ನಟ್ಟಿದ್ದ ಭಾರತ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಇನ್ನಿಂಗ್ಸ್’ನ ಕೊನೆಯ ಎಸೆತದಲ್ಲಿ ಜಯಭೇರಿ ಬಾರಿಸಿತ್ತು. ಮೊದಲ 10 ಓವರ್’ಗಳಲ್ಲಿ ಕೇವಲ 45 ರನ್ನಿಗೆ 4 ವಿಕೆಟ್ ಕಳೆದಕೊಂಡು ಸೋಲಿನಂಚಿನಲ್ಲಿದ್ದ ಭಾರತವನ್ನು ಕಿಂಗ್ ಕೊಹ್ಲಿ ತಮ್ಮ ಅಮೋಘ ಆಟದಿಂದ ಗೆಲ್ಲಿಸಿದ್ದರು. ವೃತ್ತಿಜೀವನದ ಶ್ರೇಷ್ಠ ಇನ್ನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ, 53 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದ್ದರು.(T20 World Cup 2022) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ 2ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗುರುವಾರ (ಅಕ್ಟೋಬರ್ 27) ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿದೆ

Special Gift for King Kohli Tricolor Virat Kohli Rangoli, Special Tribute to King Kohli Abhiyan.

Comments are closed.