ಸೋಮವಾರ, ಏಪ್ರಿಲ್ 28, 2025
HomeCrimeMumbai Crime News : ಚಲಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿಗೆ ಬೆಂಕಿ : ಪ್ರಾಣಾಪಾಯದಿಂದ ಪಾರಾದ...

Mumbai Crime News : ಚಲಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿಗೆ ಬೆಂಕಿ : ಪ್ರಾಣಾಪಾಯದಿಂದ ಪಾರಾದ ಚಾಲಕ

- Advertisement -

ಮುಂಬೈ : ದುಬಾರಿ ಕಾರ್‌ವೊಂದು (Mumbai Crime News) ಚಲಿಸುತ್ತಿರುವಾಗಲೇ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಬೆಳಕಿಗೆ ಬಂದಿವೆ. ನಂತರ ಕಾರು ಸುಟ್ಟು ಬೂದಿಯಾಗಿದ್ದು, ಸ್ವಲ್ಪದರಲ್ಲೇ ಚಾಲಕ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಮುಂಬೈನ ಮಹಾಲಕ್ಷ್ಮಿ ರೇಸ್‌ಕೋರ್ಸ್ ಪ್ರದೇಶದಲ್ಲಿ ಭಾನುವಾರ ಮರ್ಸಿಡಿಸ್ ಬೆಂಜ್ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಚಾಲಕನ ಪ್ರಕಾರ, ಕಾರಿನ ಹವಾನಿಯಂತ್ರಣ ನಾಳದಿಂದ ಹೊಗೆ ಹೊರಹೊಮ್ಮಲು ಪ್ರಾರಂಭಿಸಿತು. ಇದು ಹಠಾತ್ ಸ್ಫೋಟಕ್ಕೆ ಕಾರಣವಾಯಿತು. ‘‘ನನ್ನ ಕಣ್ಣೆದುರೇ ಕಾರು ಸುಟ್ಟು ಬೂದಿಯಾಯಿತು’’ ಎಂದು ಚಾಲಕ ಹೇಳಿದರು.

ಇದನ್ನೂ ಓದಿ : Tomato Price : 3.5 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ಕಳ್ಳತನ : ದಂಪತಿ ಬಂಧನ

ಇದನ್ನೂ ಓದಿ : Crime News : ಕುಡಿದ ಅಮಲಿನಲ್ಲಿ ಬಾರ್ ಗೆ ಬೆಂಕಿ ಹಚ್ಚಿದ ವ್ಯಕ್ತಿ : 11 ಮಂದಿ ಸಾವು

ಘಟನೆಯ ನಂತರ ಸಂಚಾರ ಪೊಲೀಸರು ರಸ್ತೆಯನ್ನು ಬಂದ್ ಮಾಡಿದ್ದರಿಂದ ಈ ಪ್ರದೇಶದಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.

ಟಿಪ್ಪರ್ ಗೆ ಕಾರು ಢಿಕ್ಕಿ : ನಾಲ್ವರು ದುರ್ಮರಣ

ಸಕಲೇಶಪುರ : ಟಿಪ್ಪರ್‌ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾಗಿ ನಾಲ್ವರು (Accident News) ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಈಶ್ವರಹಳ್ಳಿ ಕೂಡಿಗೆ ಬಳಿಯಲ್ಲಿ ನಡೆದಿದೆ.

ತಟ್ಟೆಕೆರೆಯ ಪುರುಷೋತ್ತಮ್‌, ಚಿಗಳೂರಿನ ದಿನೇಶ್‌, ಕುಪ್ಪಹಳ್ಳಿಯ ಚೇತನ್‌, ಗುಡ್ಡೇನಹಳ್ಳಿಯ ಅಶೋಕ್‌ ಮೃತಪಟ್ಟವರು. ಟೊಯೊಟಾ ಇನ್ನೋವಾ ಕಾರನ್ನು ಹಿಂದಿಕ್ಕುವ ಭರದಲ್ಲಿ ಕಾರನ್ನು ಓವರ್‌ ಟೇಕ್‌ ಮಾಡಿದ್ದಾರೆ. ಈ ವೇಳೆಯಲ್ಲಿ ಎದುರಿನಿಂದ ಬಂದ ಟಿಪ್ಪರ್‌ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕ್ರೇನ್‌ ಸಹಾಯದಿಂದ ಟಿಪ್ಪರ್‌ ಹಾಗೂ ಕಾರನ್ನು ಬೇರ್ಪಡಿಸಲಾಗಿತ್ತು. ಘಟನೆಯ ಕುರಿತು ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

Mumbai Crime News : Moving Mercedes Benz car catches fire : Driver escapes with life

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular