ಸೋಮವಾರ, ಏಪ್ರಿಲ್ 28, 2025
HomeCrimeMumbai-goa highway accident: ಕಾರು - ಟ್ರಕ್ ಭೀಕರ ಅಪಘಾತ : 9 ಮಂದಿ ಸಾವು

Mumbai-goa highway accident: ಕಾರು – ಟ್ರಕ್ ಭೀಕರ ಅಪಘಾತ : 9 ಮಂದಿ ಸಾವು

- Advertisement -

ಮುಂಬೈ: (Mumbai-goa highway accident) ಕಾರು ಮತ್ತು ನಡುವೆ ಢಿಕ್ಕಿಯಾಗಿ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಐವರು ಪುರುಷರು, ಮೂವರು ಮಹಿಳೆಯರು ಹಾಗೂ ಒಂದು ಮಗು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ರಾಯಗಢ ಜಿಲ್ಲೆಯ ರೆಪೋಲಿ ಪ್ರದೇಶದ ಗೋವಾ-ಮುಂಬೈ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮುಂಬೈ ಗೆ ತೆರಳುತ್ತಿದ್ದ ಟ್ರಕ್‌ ಒಂದು ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮಗು ಸೇರಿದಂತೆ ಒಂಬತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದು ಮಗು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತಪಟ್ಟವರಲ್ಲಿ ಐವರು ಪುರುಷರು, ಮೂವರು ಮಹಿಳೆಯರು ಹಾಗೂ ಒಂದು ಮಗು ಸೇರಿದೆ. ಮೃತರೆಲ್ಲ ಗುಹಾಗರ್‌ನ ಹೆಡ್ವಿ ಗ್ರಾಮದವರು ಎಂದೂ ತಿಳಿದುಬಂದಿದೆ.

ಹತ್ತು ಮಂದಿ ಪ್ರಯಾಣಿಕರಿದ್ದ ಕಾರು ರತ್ನಗಿರಿ ಜಿಲ್ಲೆಯ ಗುಹಾಗರ್ ಗೆ ತೆರಳುತ್ತಿದ್ದು, ಟ್ರಕ್‌ ಮುಂಬೈ ಕಡೆಗೆ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಅಪಘಾತದ ನಂತರದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅಪಘಾತದ ಸ್ಥಳವು ಅಪಘಾತದ ತೀವ್ರತೆಯನ್ನು ತೋರಿಸುತ್ತದೆ. ಟ್ರಕ್‌ ನ ಮುಂಬದಿ ಕೂಡ ಅಪಘಾತದಲ್ಲಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆ ಭಯಾನಕವಾಗಿದೆ.

ಇಂದು ಮುಂಜಾನೆ 4. 45ರ ಸುಮಾರಿಗೆ ಮುಂಬೈ-ಗೋವಾ ಹೆದ್ದಾರಿಯ ಮಂಗಾವ್ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂಬೈನಿಂದ 130 ಕಿ.ಮೀ ದೂರದಲ್ಲಿರುವ ರಾಯಗಢದ ರೆಪೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಅಪಘಾತದ ಸಂಭವಿಸಿದ ಕಾರಣ ಸ್ವಲ್ಪ ಸಮಯದವರಗೂ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಸಂಚಾರ ಪುನರಾರಂಭಗೊಂಡಿದೆ. ಇನ್ನೂ ಘಟನೆಯ ಕುರಿತು ರಾಯಗಢದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಇದನ್ನೂ ಓದಿ : ಉಕ್ರೇನ್‌ನಲ್ಲಿ ವಿಮಾನ ದುರಂತ : ಆಂತರಿಕ ಸಚಿವರು ಸೇರಿ 18 ಮಂದಿ ಸಾವು

ಇದನ್ನೂ ಓದಿ : Police Arrests Roosters : ಕೋಳಿ ಹುಂಜಗಳನ್ನು ಅರೆಸ್ಟ್ ಮಾಡಿದ ಪೊಲೀಸರು

ಇದನ್ನೂ ಓದಿ : ಹೋಟೆಲ್‌ನಲ್ಲಿ ಆಹಾರ ಸೇವನೆ : 68 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Mumbai-goa highway accident: Car-Truck accident: 9 killed.

RELATED ARTICLES

Most Popular