Murder case‌ : 2 ತಿಂಗಳ ಹಿಂದೆಯಷ್ಟೇ ಮದುವೆ, ಆದರೆ ಪತ್ನಿ 4 ತಿಂಗಳ ಗರ್ಭಿಣಿ : ಅಮಾಯಕ ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ

ಚೆನ್ನೈ: ಅವರಿಬ್ಬರಿಗೂ ಎರಡು ತಿಂಗಳ ಹಿಂದೆ ಮದುವೆಯಾಗಿತ್ತು. ಪತ್ನಿಗೆ ಅನಾರೋಗ್ಯ ಕಾಣಿಸಿಕೊಂಡ (Murder case‌) ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದು ಪತ್ನಿಯ ಆರೋಗ್ಯ ತಪಾಸಣೆ ಮಾಡಿಸಿದ್ದಾನೆ. ಈ ವೇಳೆಯಲ್ಲಿ ವೈದ್ಯರು ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಪತಿ ಮಹಾಶಯನೋರ್ವ ಬ್ಲೇಡ್‌ ನಿಂದ ಕತ್ತು ಸೀಳಿ ಪತ್ನಿಯನ್ನು ಕೊಲೆಗೈದಿದ್ದಾನೆ. ಈ ಗಟನೆ ನಡೆದಿರೋದು ಕಡಲೂರು ಚೆನ್ನೈನಲ್ಲಿ.

ಚೆನ್ನೈನ ಚಿದಂಬರಂ ಸಮೀಪದ ಕಿಲನುವಂಪತ್‌ನ ನಿವಾಸಿ ರೋಜಾ ಎಂಬಾಕೆಯೇ ಪತಿಯಿಂದ ಕೊಲೆಯಾದ ಗರ್ಭಿಣಿ. ಚಿಲಂಬರಸನ್‌ ಎಂಬಾತನೇ ಪತ್ನಿಯನ್ನು ಕೊಲೆಗೈದ ಕಿರಾತಕ. ಕಳೆದ ನವೆಂಬರ್‌ ತಿಂಗಳಿನಲ್ಲಿ 27 ವರ್ಷದ ರೋಜಾ ಮತ್ತು ಚಾಲಕ ಚಿಲಂಬರಸನ್ ವಿದೇಶದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ನಂತರದಲ್ಲಿ ಇಬ್ಬರೂ ಕೂಡ ಅನೇಕ ಬಾರಿ ಲೈಂಗಿಕ ಸಂಪರ್ಕವನ್ನು ಹೊಂದಿದ್ದರು. ಅಲ್ಲದೇ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಇಬ್ಬರಿಗೂ ಮದುವೆಯಾಗಿತ್ತು.

ಮದುವೆಯ ನಂತರವೂ ಇಬ್ಬರ ನಡುವೆ ದೈಹಿಕ ಸಂಬಂಧವಿತ್ತು. ಈ ನಡುವಲ್ಲೇ ರೋಜಾಗೆ ದೈಹಿಕ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ. ನಿಶ್ಚಿತಾರ್ಥದ ನಂತರ ರೋಜಾ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದರೂ ಕೂಡ ಚಿಲಂಬರಸನ್ ಗರ್ಭಧಾರಣೆಗೆ ತಾನು ಜವಾಬ್ದಾರನಲ್ಲ ಎನ್ನುತ್ತಿದ್ದ. ಅಲ್ಲದೇ ಪತ್ನಿ ರೋಜಾ ಬೇರೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿರಬಹುದು ಎಂದು ಅನುಮಾನಿಸುತ್ತಿದ್ದ.

ಇದೇ ವಿಚಾರಕ್ಕೆ ರೋಚಾ ಹಾಗೂ ಚಿಲಂಬರಸನ್ ನಡುವೆ ಆಗಾಗ ಗಲಾಟೆ ಆಗುತ್ತಲೇ ಇತ್ತು. ಪತಿಯ ಜೊತೆ ಮುನಿಸಿಕೊಂಡು ರೋಜಾ ಒಂದೆರಡು ಬಾರಿ ತವರು ಮನೆಗೂ ಹೋಗಿ ಬಂದಿದ್ದಳು. ಇನ್ನು ಪೊಲೀಸರ ಪ್ರಕಾರ, ಮದುವೆಯಾದ ದಿನದಿಂದಲೂ ಇಬ್ಬರ ನಡುವೆ ಜಗಳ ಸಾಮಾನ್ಯವಾಗಿತ್ತು.ನಿನ್ನೆ ರಾತ್ರಿಯೂ ಇಬ್ಬರ ನಡುವೆ ಜಗಳ ನಡೆದಿದ್ದು, ಮನೆಯಲ್ಲಿಟ್ಟಿದ್ದ ಬ್ಲೇಡ್‌ನಿಂದ ಚಿಲಂಬರಸನ್ ರೋಜಾ ಅವರ ಕತ್ತು ಕೊಯ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ರೋಜಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರೋಜಾ ಹತ್ಯೆಯಾದ ನಂತರ ಚಿಲಂಬರಸನ್ ಸೀದಾ ಪೊಲೀಸ್ ಠಾಣೆಗೆ ಬಂದು ತನ್ನ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ರೋಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಡಿಯಂಬಕ್ಕಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಕಡಲೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಾರಾಂ ಮತ್ತು ಚಿದಂಬರಂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಘುಪತಿ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Uttar Pradesh Murder Case‌ : ಗರ್ಭಿಣಿ ಮಹಿಳೆಯನ್ನು ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದ ಪ್ರಿಯಕರ

ಇದನ್ನೂ ಓದಿ : Madhya Pradesh urination case : ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ : ಆರೋಪಿಯ ಮನೆ ಧ್ವಂಸ

ಕೊಲೆ, ವರದಕ್ಷಿಣೆ ಕಿರುಕುಳ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಕಿಲ್ಲಾಯ್‌ ಠಾಣೆಯ ಪೊಲೀಸರು ಚಿಲಂಬರಸನ್‌ ನನ್ನು ಬಂಧಿಸಿದ್ದು, ಆತನ ತಾಯಿ ಸುಂದರಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಚಿಲಂಬರಸನ್‌ನ ತಾಯಿ ಸುಂದರಿ ರೋಜಾಳಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಾಯಸಿ ಚಿತ್ರಹಿಂದೆ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Murder case: Marriage only 2 months ago, but wife is 4 months pregnant: Husband kills innocent wife by slitting her throat

Comments are closed.