ಭಾನುವಾರ, ಜೂನ್ 15, 2025
HomeCrimeMurder for Mango : ಮಾವಿನಹಣ್ಣು ಕೇಳಿದ್ದಕ್ಕೆ 5 ವರ್ಷದ ಸೊಸೆಯ ಕತ್ತು ಸೀಳಿದ ಮಾವ

Murder for Mango : ಮಾವಿನಹಣ್ಣು ಕೇಳಿದ್ದಕ್ಕೆ 5 ವರ್ಷದ ಸೊಸೆಯ ಕತ್ತು ಸೀಳಿದ ಮಾವ

- Advertisement -

ನವದೆಹಲಿ : 5 ವರ್ಷದ ಬಾಲಕಿಯೋರ್ವಳು ಮಾವಿನ ಹಣ್ಣು ಬೇಕು ಅಂತಾ ಪದೇ ಪದೇ ತನ್ನ ಮಾವನಲ್ಲಿ ಕೇಳಿದ್ದಾಳೆ. ಇಷ್ಟಕ್ಕೆ ಸಿಟ್ಟಾದ ಮಾವ ಮಾಡಿದ್ದು ಅಮಾನವೀಯ ಕೃತ್ಯ. ತಿನ್ನಲು ಮಾವಿನಹಣ್ಣು ಕೇಳಿದ ತಪ್ಪಿಗೆ ಮಾವ ತನ್ನ 5 ವರ್ಷದ ಸೊಸೆಯ ಕತ್ತು (Murder for Mango) ಸೀಳಿಬಿಟ್ಟಿದ್ದಾನೆ. ಇಂತಹ ಘಟನೆ ನಡೆದಿರೋದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಖೇಡಾ ಕುರ್ತಾನ್‌ ಗ್ರಾಮದಲ್ಲಿ.

ಶಾಮ್ಲಿ ಜಿಲ್ಲೆಯ ಖೇಡಾ ಕುರ್ತಾನ್ ಗ್ರಾಮದ ನಿವಾಸಿ ಉಮರ್ದೀನ್‌ ( 33 ವರ್ಷ ) ಎಂಬಾತನೇ ಆರೋಪಿ. ಬಾಲಕಿ ಪದೇ ಪದೇ ಮಾವಿನಹಣ್ಣು ಕೇಳುತ್ತಿದ್ದಂತೆಯೇ ಆರೋಪಿ ಸಿಟ್ಟಾಗಿದ್ದಾನೆ. ಬಾಲಕಿಯ ತಲೆಗೆ ರಾಡ್‌ ನಿಂದ ಹೊಡೆದು ನಂತರ ಆಕೆಯ ಕತ್ತನ್ನು ಸೀಳಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯ ದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಮನೆಯಲ್ಲಿಯೇ ಇಟ್ಟಿದ್ದಾನೆ.

ಬಾಲಕಿಯ ತಂದೆ ಕೂಲಿ ಕಾರ್ಮಿಕನಾಗಿದ್ದು, ಮಗಳು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರನ್ನು ನೀಡಿದ್ದ. ನಂತರದಲ್ಲಿ ಗ್ರಾಮಸ್ಥರ ಜೊತೆ ಸೇರಿಕೊಂಡ ಉಮರ್ದಿನ್‌ ಬಾಲಕಿಯನ್ನು ಹುಡುಕುವ ನಾಟಕವಾಡಿದ್ದಾನೆ. ಆದರೆ ಪೊಲೀಸರು ಉಮರ್ದಿನ್‌ ನಡವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಂತರದಲ್ಲಿ ಆತ ನಾಪತ್ತೆಯಾಗಿದ್ದಾನೆ.

ಕೂಡಲೇ ಅಲರ್ಟ್‌ ಆದ ಪೊಲೀಸರು ಆರೋಪಿ ಉಮರ್ದೀನ್‌ನನ್ನು ಗ್ರಾಮದ ಸಮೀಪದ ಅರಣ್ಯ ಪ್ರದೇಶದಿಂದ ಬಂಧಿಸಿದ್ದಾರೆ. ಅಲ್ಲದೇ ಆತನಿಂದ ಕೊಲೆಗೆ ಬಳಸಿದ್ದಆಯುಧ, ಚಾಕು ಮತ್ತು ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಂಡಿದ್ದಾರೆ. ಸಂತ್ರಸ್ತೆಯ ತಂದೆ ನೀಡಿದ ದೂರನ್ನು ಆಧರಿಸಿ ಆರೋಪಿಯ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ. ಅವರನ್ನು ಬಂಧಿಸಿ ಕೊಲೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿ ಜೈಲಿಗೆ ಅಟ್ಟಲಾಗಿದೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Police Staff Bangalore Died : ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ : ಬೆಂಗಳೂರಿನ ಮೂವರು ಪೊಲೀಸ್‌ ಸಿಬ್ಬಂದಿ ದುರ್ಮರಣ

ಇದನ್ನೂ ಓದಿ : Power cut in Bangalore today : ಬೆಂಗಳೂರಲ್ಲಿ ಇಂದು ವಿದ್ಯುತ್ ಕಡಿತ : ಈ ಪ್ರದೇಶಗಳಲ್ಲಿ ಪವರ್‌ ಕಟ್‌

Murder for Mango Slit 5 Year Old Niece’s Throat For Repeatedly Asking For Mango Uttar Pradesh Man

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular