ಘಾಜಿಯಾಬಾದ್: (Murder like Drishyam movie) ದೃಶ್ಯಂ ಚಿತ್ರಕ್ಕೆ ಹೋಲುವ ಕೊಲೆ ರಹಸ್ಯವನ್ನು ಘಾಜಿಯಾಬಾದ್ ನ ಪೊಲೀಸರು ಬೇಧಿಸಿದ್ದಾರೆ. ಅಕ್ರಮ ಸಂಬಂಧವನ್ನಿಟ್ಟುಕೊಂಡ ಪತ್ನಿ ತನ್ನ ಪತಿಯನ್ನು ಕೊಂದು ನಿರ್ಮಾಣ ಹಂತದ ಮನೆಯಲ್ಲಿ ಹೂತು ಹಾಕಿ ಅನುಮಾನ ಬಾರದಂತೆ ಅದರ ಮೇಲೆ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಮಾಡಿದ ಘಟನೆ ನಡೆದಿದೆ. ಆದರೆ ಈ ಕೊಲೆ ರಹಸ್ಯವನ್ನು ಪೊಲೀಸರು ಬೇಧಿಸಿದ್ದೇ ಒಂದು ರೋಚಕ.
ಛೋಟೇಲಾಲ್ ಎನ್ನುವವರ ಸಹೋದರ ಸತೀಶ್ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಛೋಟೇಲಾಲ್ ಸಹೋದರ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದಾರೆ. ನಾಪತ್ತೆಯಾದ ವ್ಯಕ್ತಿಗೆ ಹುಡುಕಾಟ ನಡೆಸಿದ್ದಾರೆ. ನಂತರದಲ್ಲಿ ಮೃತ ವ್ಯಕ್ತಿಯ ಪತ್ನಿಯ ಮೇಲೆ ಪೊಲೀಸರಿಗೆ ಸಂಶಯ ಮೂಡಿತ್ತು. ಏಕೆಂದರೆ ಪತಿ ಕಾಣೆಯಾಗಿ (Murder like Drishyam movie) ಒಂದು ವಾರ ಕಳೆದರೂ ಸಹ ಆಕೆ ಯಾವುದೇ ದೂರು ನೀಡಿರಲಿಲ್ಲ. ಪೊಲೀಸರಿಗೆ ಬಂದ ಸಂಶಯದ ಮೇರೆಗೆ ಮೃತ ವ್ಯಕ್ತಿಯ ಪತ್ನಿ ನೀತುವನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಈ ವೇಳೆ ಅವರಿಗೆ ಯಾವುದೇ ಸುಳಿವು ಸಿಗದ ಹಾಗೆ ರೀತು ನಡೆದುಕೊಳ್ಳುತ್ತಾಳೆ.
ನೀತು, ಹರ್ಪಾಲ್ ಹಾಗೂ ಗೌರವ್ ಮೂವರು ಆಗಾಗಭೇಟಿಯಾಗುತ್ತಿದ್ದರು. ಇದನ್ನು ತಿಳಿದ ಪೊಲೀಸರು ಹರ್ಪಾಲ್ ನನ್ನು ಹಿಂಬಾಲಿಸುತ್ತಾರೆ. ಆತನ ಚಲನವಲನಗಳನ್ನು ಗಮನಿಸಿದ ಪೊಲೀಸರಿಗೆ ಆತನ ಮೇಲೆ ಗಾಢವಾದ ಅನುಮಾನ ಮೂಡುತ್ತದೆ. ಹೀಗಾಗಿ ಹರ್ಪಾಲ್ ನನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಾರೆ. ಮೊದಲಿಗೆ ಆತ ಯಾವುದೇ ಸುಳಿವನ್ನು ಬಿಟ್ಟುಕೊಡುವುದಿಲ್ಲ. ಪೊಲೀಸರು ಬಿಟ್ಟು ಬಿಡದೇ ಆತನ ವಿಚಾರಣೆ ನಡೆಸಿದ್ದು, ಕೊನೆಯದಾಗಿ ಹರ್ಪಾಲ್ ನೀತು ಮತ್ತು ಗೌರವ್ ಸಹಾಯದಿಂದ ಸತೀಶ್ ನನ್ನು ಕೊಂದಿರುವುದಾಗಿ ಬಾಯಿಬಿಡುತ್ತಾನೆ.
ತನಿಖೆಯ ವೇಳೆ, ನೀತು ಮತ್ತು ಹರ್ಪಾಲ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಸಹ ಬಯಸಿದ್ದರು. ಇದಕ್ಕೆ ನೀತು ಪತಿ ಸತೀಶ್ ಅಡ್ಡಗಾಲಾಗಿ ನಿಂತಿದ್ದನು. ಇದರಿಂದಾಗಿ ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಹರ್ಪಾಲ್ ಸತೀಶ್ ನನ್ನು ಕೊಂದು ನೆರೆಹೊರೆಯ ಜಮೀನಿನಲ್ಲಿ ಹೂಳಲು ಯೋಜನೆ ರೂಪಿಸಿದ್ದ. ಆದರೆ ಇದಕ್ಕೆ ನೀತು ಒಪ್ಪಿಗೆ ಸೂಚಿಸಿರಲಿಲ್ಲ. ಗೌರವ್ ಹಾಗೂ ಹರ್ಪಾಲ್ ಇಬ್ಬರು ಸೇರಿ ನಿವೇಶನದಲ್ಲಿ ಮನೆಕಟ್ಟುವ ಕೆಲಸ ಮಾಡುತ್ತಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ಪತ್ನಿ ನೀತು ಸತೀಶ್ ಗೆ ವಿಷ ಕುಡಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಳು.
ನಂತರ ಆರೋಪಿ ಪತ್ನಿ ಹರ್ಪಾಲ್ ನ ಸಹಾಯದಿಂದ ಶವವನ್ನು ಅವರು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಹೂತುಹಾಕಿದ್ದರು. ನಂತರ ಕೊಲೆ ಅಪರಾದವನ್ನು ಮುಚ್ಚಿಹಾಕುವ ಸಲುವಾಗಿ ಮೃತದೇಹವನ್ನು ಹೂತ ಜಾಗದಲ್ಲಿ ಸೆಪ್ಟಿಕ್ ಟ್ಯಾಂಕ್ ಅನ್ನು ನಿರ್ಮಿಸಿದ್ದರು ಎಂದು ತಿಳಿದು ಬಂತು. ಆರೋಪಿಗಳ ನೀಡಿದ ಹೇಳಿಕೆಯ ಜಾಡನ್ನು ಹಿಡಿದು ಪೊಲೀಸರು ಮೃತ ಸತೀಶ್ ಶವವನ್ನು ಹೂತ ಜಾಗಕ್ಕೆ ತೆರಳಿ ಶವವನ್ನು ಬಿಸ್ರಖ್‌ನ ನಿರ್ಮಾಣ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಕೊಲೆ ಆರೋಪಿಗಳಾದ ನೀತು ಮತ್ತು ಆಕೆಯ ಪ್ರಿಯಕರ ಹರ್ಪಾಲ್ ನನ್ನು ಪೊಲೀಸರು ಬಂಧಿಸಿದ್ದು, ಮೂರನೇ ಆರೋಪಿ ಗೌರವ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : Gurugram road accident: ರಾಂಗ್ ಸೈಡಿನಲ್ಲಿ ಬಂದ ಪೊಲೀಸ್ ವಾಹನ ಕಾರಿಗೆ ಢಿಕ್ಕಿ: 6ತಿಂಗಳ ಮಗು ಸಾವು, 4 ಮಂದಿಗೆ ಗಾಯ
ಇದನ್ನೂ ಓದಿ : 9 year girl raped: 9 ವರ್ಷದ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತರಿಂದ ಅತ್ಯಾಚಾರ: ದೂರು ದಾಖಲು
ಆರೋಪಿಗಳ ವಿರುದ್ದ ಐಪಿಸಿಯ ಸೆಕ್ಷನ್ 302 , 201, 34 ಮತ್ತು 120 ಬಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Murder like Drishyam movie: Wife who killed her husband like Drishyam movie: It is exciting that the police have registered the case