ಚಿತ್ರದುರ್ಗ : ಮುರಾಘಾ ಮಠದ ಶ್ರೀಗಳ ಕೇಸ್ ವಿರುದ್ಧದ ಪ್ರಕರಣ ಹಲವು ತಿರುವುಗಳನ್ನು (Muruga shree case update) ಪಡೆಯುತ್ತಿದೆ. ಮುರುಶ್ರೀ ಬಂಧನವಾಗಿ ಇದೀಗ ಮೂರು ತಿಂಗಳುಗಲೇ ಕಳೆದಿದೆ. ಈ ನಡುವಲ್ಲೇ ಮುರುಘಾ ಮಠದ ಹಾಸ್ಟೆಲ್‌ನಲ್ಲಿ ವಾಸವಿದ್ದ 22 ಅನಾಥ ಮಕ್ಕಳು ನಾಪತ್ತೆಯಾಗಿರುವ ಕುರಿತ ಗಂಭೀರ ಆರೋಪವೊಂದು ಕೇಳಿಬಂದಿದೆ.ನಾಪತ್ತೆಯಾಗಿರುವ ಮಕ್ಕಳ ಪೈಕಿಯಲ್ಲಿ 14 ಹೆಣ್ಣು ಮಕ್ಕಳು ಮತ್ತು 8 ಗಂಡು ಮಕ್ಕಳಿದ್ದಾರೆ. ಅಷ್ಟಕ್ಕೂ ಈ ಅನಾಥ ಮಕ್ಕಳು ಮಠಕ್ಕೆ ಸಿಕ್ಕಿದ್ದು ಹೇಗೆ ? ಅನಾಥ ಮಕ್ಕಳನ್ನು ಸರಕಾರದ ಅನಿಮತಿಯಿಂದ ಪಡೆಯಲಾಗಿತ್ತೇ ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಮುರುಘಾ ಮಠದ ವತಿಯಿಂದ ನಿರ್ಮಾಣಗೊಂಡಿರುವ ಬಸವ ಕುಟೀರಕ್ಕೆ ಸರಕಾರದಿಂದ ಅನುದಾನ ನೀಡಲಾಗಿತ್ತು. ಆದರೆ ಶಿವಮೂರ್ತಿ ಮುರಾಘಾ ಶರಣರು 2012 ರಲ್ಲಿ ಈ ಅನುದಾನವನ್ನು ನಿರಾಕರಿಸಿದ್ದರು. ಹಾಗಾಗಿ ಸರಕಾರದ ಅನುದಾನವನ್ನು ಬಳಕೆ ಮಾಡದ ಸಂಸ್ಥೆಯ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ನೀಡುತ್ತಿರಲಿಲ್ಲ. ಇದೇ ಕಾರಣದಿಂದಲೇ ಮಕ್ಕಳು ನಾಪತ್ತೆ ಆಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಹಾಗಾದರೆ ನಾಪತ್ತೆಯಾಗಿರುವ ಮಕ್ಕಳು ಎಲ್ಲಿದ್ದಾರೆ ? ಹೇಗಿದ್ದಾರೆ ಎಂಬ ಬಗ್ಗೆಯೂ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದೂರು ನೀಡಿರುವ ಮಕ್ಕಳಲ್ಲದೇ ಇತರ ಅನಾಥ ಮಕ್ಕಳ ಮೇಲೆ ಕೂಡ ಶಿವಮೂರ್ತಿ ಮುರಾಘಾ ಶರಣರು ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಮಕ್ಕಳ ನಾಪತ್ತೆಯನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ತನಿಖೆಯನ್ನು ಕೂಡಲೇ ನಡೆಸಬೇಕೆಂದು ಚಿತ್ರದುರ್ಗದ ಆರ್‌ಟಿಐ ಕಾರ್ಯಕರ್ತ ಬಿ.ಎಚ್. ಗೌಡ್ರು ಒತ್ತಾಯಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್‌ಪಿ ಕೆ. ಪರಶುರಾಮ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಇದನ್ನೂ ಓದಿ : small boy died: ಬೀದಿ ನಾಯಿಗಳಿಂದ ಹಲ್ಲೆ: 4 ವರ್ಷದ ಬಾಲಕ ಸಾವು
ಇದನ್ನೂ ಓದಿ : M-bomb blast: ಮಂಗಳೂರು ಬಾಂಬ್ ಸ್ಪೋಟ: ಉಗ್ರ ಶಾರೀಖ್ ಹಣದ ಮೂಲದ ಬಗ್ಗೆ ಅಧಿಕಾರಿಗಳಿಂದ ತನಿಖೆ
ಇದನ್ನೂ ಓದಿ : Rape case: ಅತ್ಯಾಚಾರಗೈದ ಮಲತಂದೆ ರಕ್ಷಣೆಗೆ ನಿಂತ ಸಂತ್ರಸ್ತೆ: ಪಟ್ಟು ಬಿಡದ ನ್ಯಾಯಾಧೀಶರು ಮಾಡಿದ್ದೇನು ಗೊತ್ತಾ?
ಶಿವಮೂರ್ತಿ ಮುರಾಘಾ ಶರಣರು ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಮತೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಲ್ಲಿ ನಡೆದಿದೆ.
Muruga shree case update: 22 children missing from Muragha Math! How did the orphans get to the monastery?