Aira Production house: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ.. ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್..?

ಬೆಂಗಳೂರು: Aira Production house: ಕೆಜಿಎಫ್ ಸರಣಿ ಸಿನಿಮಾ ಹಿಟ್ ಆದ ಬಳಿಕ ಅವರ ಮುಂದಿನ ಚಿತ್ರ ಯಾವುದು ಅನ್ನೋ ಕುತೂಹಲ ಅಭಿಮಾನಿಗಳನ್ನು ಬಿಡದೇ ಕಾಡುತ್ತಿದೆ. ಬೆಂಗಳೂರಿನಿಂದ ಮುಂಬೈ, ದೇಶ-ವಿದೇಶ ಅಂತ ಅಲ್ಲಿ ಇಲ್ಲಿ ಸುತ್ತಾಡುತ್ತಾ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದರೂ ಯಶ್ ತಮ್ಮ ಮುಂದಿನ ಸಿನಿಮಾದ ಗುಟ್ಟನ್ನು ಇಲ್ಲಿವರೆಗೆ ಬಿಟ್ಟುಕೊಟ್ಟಿಲ್ಲ. ಈ ನಡುವೆ ಯಶ್ ಬಗ್ಗೆ ಸುದ್ದಿಯೊಂದು ಹೊರಬಿದ್ದಿದ್ದು ಅಬಿಮಾನಿಗಳನ್ನು ಸಂತೋಷದ ಕಡಲಲ್ಲಿ ತೇಲುವಂತೆ ಮಾಡಿದೆ.

ನಟನೆಯಲ್ಲಿ ಸೈ ಎನಿಸಿಕೊಂಡಿದ್ದ ಯಶ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುತ್ತಾರೆ. ತಮ್ಮದೇ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಾರೆ ಅನ್ನೋ ಸುದ್ದಿ ಬಹಳ ಸಮಯದಿಂದಲೂ ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿತ್ತು. ಆದರೀಗ ಈ ವಿಚಾರ ನಿಜ ಎಂಬಂಥ ಮಾಹಿತಿ ಸಿಕ್ಕಿದೆ. ತಮ್ಮ ಮಗಳು ಐರಾ ಹೆಸರಿನಲ್ಲಿ ಯಶ್ ಅವರು ಪ್ರೊಡಕ್ಷನ್ ಹೌಸ್ ತೆರೆಯಲಿದ್ದು, ತಮ್ಮದೇ ಬ್ಯಾನರ್ ಅಡಿಯಲ್ಲಿ ರಾಕಿಂಗ್ ಸ್ಟಾರ್ ನಟಿಸಲಿದ್ದಾರೆ ಎಂಬ ವಿಚಾರ ಎಲ್ಲೆಡೆ ಕೇಳಿಬರುತ್ತಿದೆ. ಸದ್ಯ ಲಭಿಸಿರುವ ಮಾಹಿತಿ ಪ್ರಕಾರ ಯಶ್ ಸಿನಿಮಾಗೆ ಮಗಳು ಐರಾ ನಿರ್ಮಾಪಕಿ ಆಗಲಿದ್ದು, ಸಂಸ್ಥೆಗೆ ಅಗತ್ಯವಿರುವ ಕೆಲಸ ಕಾರ್ಯಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: Anand Pandit Motion Pictures : ಬಾಲಿವುಡ್‌ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪಾಲಾದ ” ಕಬ್ಜ” ಸಿನಿಮಾ ವಿತರಣಾ ಹಕ್ಕು

ಬರ್ತ್‍ಡೇ ಯಂದೇ ಸಿಹಿ ಸುದ್ದಿ ನೀಡಲಿದ್ದಾರಾ ಯಶ್:

ಕೆಜಿಎಫ್ 2 ಬಳಿಕ ನಟ ಯಶ್ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಮಫ್ತಿ ಸಿನಿಮಾ ನಿರ್ದೇಶಕ ನರ್ತನ್ ಜೊತೆ ಯಶ್ ಕೆಲಸ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಇತ್ತೀಚೆಗಷ್ಟೆ ಸದ್ಯಕ್ಕೆ ಈ ಸಿನಿಮಾ ಆಗುವುದಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಜನವರಿ 8ರಂದು ಯಶ್ ಹುಟ್ಟುಹಬ್ಬದ ದಿನದಂದೇ ಅವರ ಹೊಸ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ಸಿಗುವ ನಿರೀಕ್ಷೆ ಇದೆ. ಹೀಗಾಗಿ ಅಭಿಮಾನಿಗಳು ಯಶ್ ಅವರ ಬರ್ತ್ ಡೇಗೆ ಕಾಯುತ್ತಿದ್ದಾರೆ.

ಕೆಜಿಎಫ್- 3 ಬಗ್ಗೆ ಏನಿದೆ ಮಾಹಿತಿ..?
ಇನ್ನೊಂದೆಡೆ ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಶನ್ ಅಡಿಯಲ್ಲಿ ಕೆಜಿಎಫ್- 3 ಬರಲಿದೆ ಎನ್ನಲಾಗುತ್ತಿದೆ. ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಶ್ ಈ ಹಿಂದೆಯೇ ಉತ್ತರ ನೀಡಿದ್ದರು. ಶೀಘ್ರದಲ್ಲೇ ತನ್ನ ಮುಂದಿನ ಪ್ರಾಜೆಕ್ಟ್ ಬಗ್ಗೆ ಹೇಳುತ್ತೇನೆ. ಕೆಜಿಎಫ್-3 ಬಗ್ಗೆ ಪ್ಲ್ಯಾನ್ ಇದೆ. ಆದರೆ ಅಷ್ಟು ಬೇಗ ಅದು ಸಾಧ್ಯವಿಲ್ಲ. ಕಳೆದ 6-7 ವರ್ಷಗಳಿಂದ ಕೆಜಿಎಫ್ ಮಾಡಿದ್ದೇನೆ. ಅದನ್ನು ಬಿಟ್ಟು ಬೇರೆ ಏನಾದರೂ ಮಾಡಬೇಕು ಎಂಬ ಆಲೋಚನೆ ಇದೆ. ಎಲ್ಲವೂ ಸರಿಯಾದರೆ ಕೆಜಿಎಫ್- 3 ಆಮೇಲೆ ಮಾಡುತ್ತೇವೆ ಎಂದಿದ್ದರು.

ಇದನ್ನೂ ಓದಿ: Delhi Liquor Policy Scam: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತೆಲಂಗಾಣ ಸಿಎಂ ಪುತ್ರಿಗೆ ಇಡಿ ಶಾಕ್; ತನಿಖೆಗೆ ಸಿದ್ಧ ಎಂದ ಕೆ.ಕವಿತಾ

Comments are closed.