ಸೋಮವಾರ, ಏಪ್ರಿಲ್ 28, 2025
HomeCrimeMysore Bus Accident : ಖಾಸಗಿ ಬಸ್‌ ಕಾರು ನಡುವೆ ಭೀಕರ ಅಪಘಾತ : 10...

Mysore Bus Accident : ಖಾಸಗಿ ಬಸ್‌ ಕಾರು ನಡುವೆ ಭೀಕರ ಅಪಘಾತ : 10 ಮಂದಿ ಸಾವು

- Advertisement -

ಮೈಸೂರು : ಖಾಸಗಿ ಬಸ್‌ ಹಾಗೂ ಕಾರು ಮುಖಾಮುಖಿಯಾಗಿ ಢಿಕ್ಕಿಯಾದ ಪರಿಣಾಮ ಭೀಕರ ಅಪಘಾತ (Mysore Bus Accident) ಸಂಭವಿಸಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ ಕಾರಿನ ಒಳಗೆ ಸಿಲುಕಿಕೊಂಡವರ ನೋವಿನಿಂದ ಕೂಡಿದ ಚೀರಾಟ ಮುಗಿಲು ಮುಟ್ಟಿತ್ತು.

ಇಂದು ಮಧ್ಯಾಹ್ನದ ವೇಳೆಗೆ ಮೈಸೂರಿನ ಕೊಳ್ಳೇಗಾಲ ಹಾಗೂ ಟಿ. ನರಸೀಪುರ ಮುಖ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಸುತ್ತಿದ್ದ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ : Minor girl Murder case : ಬಾಲಕಿಗೆ 20 ಬಾರಿ ಚಾಕು ಇರಿದು ಕೊಲೆ : ಘಟನೆ ಸಿಸಿಟಿವಿಯಲ್ಲಿ ಸೆರೆ

ಈ ಅಪಘಾತದಲ್ಲಿ ಇನ್ನೊವಾ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜುಗೊಂಡಿರುತ್ತದೆ. ಕಾರಿನಲ್ಲಿ ಸಿಲುಕಿರುವ ಜನರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಕಾರಿನೊಳಗೆ ಒದ್ದಾಡುತ್ತಿದ್ದ ಮಗು ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Terrible Car Accident Case : ಭೀಕರ ಕಾರು ಅಪಘಾತದಲ್ಲಿ ಒಂದೇ ಕಾಲೇಜಿನ 7 ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಸಾವು : ಮೂವರಿಗೆ ಗಂಭೀರ ಗಾಯ

ಅಸ್ಸಾಂ : ಮುಂಜಾವಿನ ನುಸುಕಿನ ವೇಳೆಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ (Terrible Car Accident Case) ಒಂದೇ ಕಾಲೇಜಿನ ಏಳು ವಿದ್ಯಾರ್ಥಿಗಳು ಮೃತ್ಯುಲೋಕಕ್ಕೆ ತೆರಳಿದ್ದಾರೆ. ಈ ಅವಘಡದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ಮೃತ ಪಟ್ಟ ದುರ್ದೈವಿಗಳಾದ ಕೌಶಿಕ್‌ ಬರುವಾ, ಕೌಶಿಕ್‌ ಮೋಹನ್‌, ರಾಜ್‌ ಕಿರಣ್‌ ಭೂಯಾನ್‌, ಇವೋನ್‌ ಬರುವಾ, ಅರಿಂದಮ್‌ ಭೋವಲ್‌, ಉಪಾಂಶು ಶರ್ಮಾ, ನಿಯಾರ್‌ ದೇಕಾ ಎಂದು ಗುರುತಿಸಲಾಗಿದೆ. ಅಸ್ಸಾಂ ಗುವಾಹಟಿಯ ಜಾಲುಕ್‌ಬಾರಿ ಪ್ರದೇಶದಲ್ಲಿರುವ ಎಇಸಿ ಕಾಲೇಜಿನ ಮೂರನೇ ವರ್ಷದ ಹತ್ತು ವಿದ್ಯಾರ್ಥಿಗಳು ಮುಂಜಾನೆಯ ನುಸುಕಿನ ವೇಳೆಗೆ ಕಾರಿನಲ್ಲಿ ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋಗುತ್ತಿದ್ದು. ಇದೇ ವೇಳೆ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಮತ್ತೊಂದು ರಸ್ತೆ ಬದಿಯಲ್ಲಿ ವೇಗವಾಗಿ ಬರುತ್ತಿದ್ದ ಬೊಲೆರೊ ಕಾರಿಗೆ ಢಿಕ್ಕಿ ಹೊಡೆದಿದೆ. ಬೊಲೆರೊ ಗಾಡಿ ಕಾರಿಗೆ ಢಿಕ್ಕಿ ಹೊಡೆದ ಪರಿಣಮಾವಾಗಿ ಕಾರು ಸಂಪೂರ್ಣ ನುಜ್ಜುಗುಜ್ಜು ಆಗಿದ್ದು, ಸ್ಥಳದಲ್ಲೇ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಮತ್ತುಳಿದ ಮೂವರು ವಿದ್ಯಾರ್ಥಿಗಳು ಹಾಗೂ ಬೊಲೆರೊದ ಚಾಲಕ ಹಾಗೂ ಕ್ಲೀನರ್‌ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಗುವಾಹಟಿ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಹಿಮಾಂತ್‌ ಬಿಸ್ವ ಶರ್ಮಾ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

Mysore Bus Accident: Terrible accident between a private bus: 10 killed

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular