Mysore accident : ಮೈಸೂರು ಅಪಘಾತದಲ್ಲಿ 10 ಮಂದಿ ಸಾವು : ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು : Mysore accident : ಟಿ.ನರಸೀಪುರ ತಾಲೂಕಿನ ಕುರುಬೂರು ಬಳಿಯಲ್ಲಿ ನಡೆದಿರುವ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು, ಮೃತಪಟ್ಟವರಿಗೆ ಸೂಕ್ತ ಚಿಕಿತ್ಸೆಯ ಜೊತೆಗೆ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವುದಾಗಿ ಟ್ವೀಟ್‌ ಮಾಡಿದ್ದಾರೆ.

ಕೊಳ್ಳೆಗಾಲ ದಿಂದ ಟಿ.ನರಸೀಪುರ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಖಾಸಗಿ ಬಸ್‌ ಹಾಗೂ ಇನ್ನೋವಾ ಕಾರು ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ ಸಾವನ್ನಪ್ಪಿದ್ದರು. ಮೃತರನ್ನು ಬಿಳ್ಯಾಳ ಮಂಜುನಾಥ್‌, ಪತ್ನಿ ಪೂರ್ಣಿಮಾ, ಮಗ ಪವನ, ಕಾರ್ತಿಕ, ಸಂದೀಪ, ತಾಯಿ ಸುಜಾತ, ತಂದೆ ಕೊಟ್ರೇಶ್‌ ಪತ್ನಿ ಗಾಯತ್ರಿ, ಮಗಳು ಶ್ತಾವ್ಯ ಹಾಗೂ ಇನ್ನೋವಾ ಚಾಲಕ ಆದಿತ್ಯ ಎಂಬವರೇ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಮೃತಪಟ್ಟವರ ಪೈಕಿ ಕಾರು ಚಾಲಕ ಮೈಸೂರಿನರಾಗಿದ್ದು, ಉಳಿದವರೆಲ್ಲರೂ ಬಳ್ಳಾರಿ ಮೂಲದವರಾಗಿದ್ದು ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಎಲ್ಲರೂ ಕೂಡ ಪ್ರವಾಸಕ್ಕೆ ತೆರಳಿದ್ದು ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಮಂದಿ ರಜೆಯಲ್ಲಿ ಬಂದಿದ್ದರು. ಚಾಮುಂಡಿ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗ ಬೆಟ್ಟಗಳಿಗೆ ಭೇಟಿ ನೀಡಿ ಮೈಸೂರಿಗೆ ಹಿಂತಿರುಗುತ್ತಿದ್ದರು. ಇವರೆಲ್ಲರೂ ಬಳ್ಳಾರಿ ಸಮೀಪದ ಸಂಗನಕಲ್ ಗ್ರಾಮದಿಂದ ಬಂದಿದ್ದರು. ಸೋಮವಾರ ಸಂಜೆ 5 ಗಂಟೆಗೆ ರೈಲಿನಲ್ಲಿ ಬಳ್ಳಾರಿಗೆ ತೆರಳಬೇಕಿತ್ತು.

ಇದನ್ನೂ ಓದಿ : Minor girl Murder case : ಬಾಲಕಿಗೆ 20 ಬಾರಿ ಚಾಕು ಇರಿದು ಕೊಲೆ : ಘಟನೆ ಸಿಸಿಟಿವಿಯಲ್ಲಿ ಸೆರೆ

ಇದನ್ನೂ ಓದಿ : Mysore Bus Accident : ಖಾಸಗಿ ಬಸ್‌ ಕಾರು ನಡುವೆ ಭೀಕರ ಅಪಘಾತ : 10 ಮಂದಿ ಸಾವು

Comments are closed.