ಮಂಗಳವಾರ, ಏಪ್ರಿಲ್ 29, 2025
HomeCrimeಮೈಸೂರು ಸಾಮೂಹಿಕ ಅತ್ಯಾಚಾರ : ಐವರು ಆರೋಪಿಗಳ ಬಂಧನ, ಓರ್ವ ಅಪ್ರಾಪ್ತ : ಡಿಜಿ-ಐಜಿಪಿ ಪ್ರವೀಣ್‌...

ಮೈಸೂರು ಸಾಮೂಹಿಕ ಅತ್ಯಾಚಾರ : ಐವರು ಆರೋಪಿಗಳ ಬಂಧನ, ಓರ್ವ ಅಪ್ರಾಪ್ತ : ಡಿಜಿ-ಐಜಿಪಿ ಪ್ರವೀಣ್‌ ಸೂದ್

- Advertisement -

ಮೈಸೂರು : ವಿದ್ಯಾರ್ಥಿನಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಓರ್ವ ಬಾಲ ಆರೋಪಿಯಾಗಿದ್ದಾನೆ. ಎಲ್ಲರೂ ತಮಿಳುನಾಡು ಮೂಲದವರಾಗಿದ್ದು. ಅತ್ಯಾಚಾರ ನಡೆಸಿ, ದರೋಡೆಗೆ ಯತ್ನಿಸಲಾಗಿದೆ ಎಂದು ಡಿಜಿ, ಐಜಿಪಿ ಪ್ರವೀಣ್‌ ಸೂದ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಆರೋಪಿಗಳು ತಮಿಳುನಾಡಿನ ಮೂಲದವರಾಗಿದ್ದರು. ಆಗಾಗಾ ಮೈಸೂರಿಗೆ ಬರುತ್ತಿದ್ದರು. ಹೀಗೆ ಬಂದವರು, ಕುಡಿದು ಪಾರ್ಟಿ ಮಾಡುತ್ತಿದ್ದರು. ಆವತ್ತೂ ಕೂಡ ಸ್ಥಳದಲ್ಲಿಯೇ ಇದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಮೂರು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ದರೋಡೆ ಮಾಡಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮೈಸೂರು ಪೊಲೀಸ್‌ ಆಯುಕ್ತರು, ದಕ್ಷಿಣ ವಲಯದ ಐಜಿಪಿ, ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸೇರಿದಂತೆ ಒಟ್ಟು ಏಳು ತಂಡವನ್ನು ರಚಿಸಲಾಗಿತ್ತು. ಘಟನೆ ನಡೆದ ಸಮಯ ಕತ್ತಲಾಗಿತ್ತು. ಪ್ರಕರಣದಲ್ಲಿ ಸಂತ್ರಸ್ತೆ ಯಾವುದೇ ಸುಳಿವನ್ನೂ ನೀಡಿರಲಿಲ್ಲ. ಅಲ್ಲದೇ ಸಂತ್ರಸ್ತೆಯ ಗೆಳೆಯ ನೀಡಿದ ಮಾಹಿತಿ ಕೂಡ ಅಸ್ಪಷ್ಟವಾಗಿತ್ತು. ಅವರು ಕೂಡ ಅಸ್ವಸ್ಥಗೊಂಡಿದ್ದಾರೆ. ಆದರೂ ಕೂಡ ಪೊಲೀಸರು ಟೆಕ್ನಿಕಲ್‌ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಒಟ್ಟು ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೂ ಬಲೆ ಬೀಸಲಾಗಿದೆ. ಇನ್ನೂ ಓರ್ವ ಆರೋಪಿ ಅಪ್ತಾಪ್ತನಾಗಿದ್ದು, ಆತನ ವಯಸ್ಸಿನ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆದರೆ ಇದೊಂದು ಗಂಭೀರ ಪ್ರಕರಣವಾಗಿದ್ದು, ನಿರ್ಭಯ ಪ್ರಕರಣದ ನಂತರ ಬಾಲಾಪರಾಧಿಗಳ ಕುರಿತ ಕಾನೂನಿನಲ್ಲಿಯೂ ಪರಿವರ್ತನೆ ಮಾಡಲಾಗಿದೆ. ಎಲ್ಲಾ ಆರೋಪಿಗಳು ತಮಿಳುನಾಡಿನ ತಿರುಪುರ್‌ ಜಿಲ್ಲೆಯವರಾಗಿದ್ದಾರೆ. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರೋಪಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಆರೋಪಿಗಳು ಕೂಲಿ ಕಾರ್ಮಿಕರು, ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದು, ಒಂದಿಬ್ಬರು ಮಾತ್ರವೇ ಏಳನೇ ತರಗತಿ, ಎಂಟನೇ ತರಗತಿ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. ಆರೋಪಿಗಳನ್ನು ಇನ್ನೂ ಕೂಡ ಮೈಸೂರು ನಗರಕ್ಕೆ ಕರೆತರಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ : Mysore Gang Rape : ಆರೋಪಿಗಳನ್ನು ಮೈಸೂರಿಗೆ ಕರೆತಂದ ಪೊಲೀಸರು : ಮುಂದೇನು ?

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತೇವೆ. ಈಗಾಗಲೇ ಪ್ರಾಥಮಿಕ ಹಂತದ ಮಾಹಿತಿಯನ್ನಷ್ಟೇ ಪಡೆಯಲಾಗಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಆರೋಪಿಗಳಿಂದ ಪಡೆಯಲಾಗುವುದು. ಇನ್ನು ಸಂತ್ರಸ್ತ ಯುವತಿ ಕೂಡ ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ ಅನ್ನುವ ನಂಬಿಕೆಯಿದೆ ಎಂದಿದ್ದಾರೆ.

ಇದನ್ನೂ ಓದಿ : ಕತ್ತಲಲ್ಲಿ ಕಾಮುಕರನ್ನು ಸೆರೆ ಹಿಡಿದ ಖಾಕಿ ಪಡೆ : ಆರೋಪಿಗಳ ಸುಳಿವು ಕೊಟ್ಟಿತ್ತು ಬಸ್‌ ಟಿಕೆಟ್‌

ಇದನ್ನೂ ಓದಿ : ಸತ್ಯಮಂಗಲದಿಂದ ಮೈಸೂರಿಗೆ ಆರೋಪಿಗಳು : ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌, ಮುಂಬೈ ತೆರಳಿದ ಯುವತಿ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular