ಮಂಗಳವಾರ, ಏಪ್ರಿಲ್ 29, 2025
HomeCrimeMysterious death: ರಾತ್ರಿ ಮಲಗಿದವಳು ಬೆಳಿಗ್ಗೆ ನೋಡುವಾಗ ಸಜೀವ ದಹನವಾಗಿದ್ದಳು ; ಕಾರಣ ನಿಗೂಢ

Mysterious death: ರಾತ್ರಿ ಮಲಗಿದವಳು ಬೆಳಿಗ್ಗೆ ನೋಡುವಾಗ ಸಜೀವ ದಹನವಾಗಿದ್ದಳು ; ಕಾರಣ ನಿಗೂಢ

- Advertisement -

ಆಂಧ್ರಪ್ರದೇಶ: (Mysterious death) ರಾತ್ರಿ ಬೆಡ್‌ ರೂಮಿನಲ್ಲಿ ಮಲಗಿದ್ದ ಯುವತಿಯೋರ್ವಳು ಬೆಳಿಗ್ಗೆ ಸಜೀವ ದಹನವಾಗಿರುವ ಘಟನೆ ಆಂಧ್ರ ಪ್ರದೇಶದ ಮುದ್ದಪುರಂ ಗ್ರಾಮದ ಮುಲ್ಲಾಪುಡಿಯಲ್ಲಿ ನಡೆದಿದೆ. ನಾಗಹಾರಿಕ ಎನ್ನುವಾಕೆ ಮೃತ ಯುವತಿ. ಆದರೆ ಆಕೆಯ ನಿಗೂಢ ಸಾವಿಗೆ ಕಾರಣಗಳೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಹಾಗಿದ್ದರೇ ಆಕೆಯ ಸಾವಿಗೆ ಕಾರಣವಾದರೂ ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮುಲ್ಲಾಪುಡಿ ಶ್ರೀನಿವಾಸ್‌ ಅವರ ಮಗಳಾದ ನಾಗಹಾರಿಕ ಎರಡನೇ ವರ್ಷದ ಇಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜು ಮುಗಿಸಿ ಮನೆಗೆ ಬಂದಾಕೆ ರಾತ್ರಿ ತನ್ನ ಕೆಲಸವನ್ನೆಲ್ಲಾ ಮುಗಿಸಿ ತನ್ನ ಕೋಣೆಯಲ್ಲಿ ಮಲಗಿದ್ದಳು. ಆದರೆ ಬೆಳಿಗ್ಗೆ ಆಕೆಯ ತಂದೆ ಎದ್ದು ನೋಡುವಾಗ ಆಕೆ ಸುಟ್ಟು ಕರಕಲಾಗಿದ್ದಳು(Mysterious death) ಎಂದು ಪೋಷಕರು ತಿಳಿಸಿದ್ದಾರೆ. ಈ ಕುರಿತು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಈ ಘಟನೆ ಆಕಸ್ಮಿಕವಾಗಿ ನಡೆದಿದೆಯೋ ಅಥವಾ ಬೇಕು ಬೇಕಂತಲೇ ಯಾರದರೂ ಕೊಲೆ ಮಾಡಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಶ್ರೀನಿವಾಸ್‌ ಗೆ ಎರಡನೇ ಮದುವೆಯಾಗಿದ್ದು, ರೂಪಾ ರಾಣಿ ಎನ್ನುವಾಕೆ ಮೃತ ಯುವತಿಯ ಮಲತಾಯಿ ಎಂಬ ಮಾಹಿತಿ ತಿಳಿದುಬಂದಿದೆ. ಆಕೆಗೆ ಒಂಬತ್ತು ವರ್ಷದ ಮಗಳಿದ್ದು, ಆಕೆಯೂ ಕೂಡ ಅದೇ ಮನೆಯಲ್ಲಿದ್ದಾಳೆ ಎಂದು ವರದಿ ತಿಳಿದು ಬಂದಿದೆ. ಕೆಲ ತಿಂಗಳುಗಳ ಹಿಂದಷ್ಟೇ ಹೊಸ ಮನೆಯನ್ನು ಕಟ್ಟಿಸಿದ್ದು ಎಲ್ಲರೂ ಅದೇ ಮನೆಯಲ್ಲೇ ವಾಸ ಮಾಡುತ್ತಿದ್ದರು. ಮೃತ ವಿದ್ಯಾರ್ಥಿನಿಯ ತಂದೆ ಆ ದಿನ ರಾತ್ರಿ ಕೆಲವು ವಸ್ತುಗಳನ್ನು ಇನ್ನೂ ಹೊಸ ಮನೆಗೆ ವರ್ಗಾಯಿಸಿರಲಿಲ್ಲ ಎಂಬ ಕಾರಣಕ್ಕೆ ಹಳೆ ಮನೆಯಲ್ಲಿಯೇ ಮಲಗಿದ್ದರು. ಬೆಳಿಗ್ಗೆ ಹೊಸ ಮನೆಗೆ ಬಂದ ಶ್ರೀನಿವಾಸ್‌ ತನ್ನ ಹೆಂಡತಿಯನ್ನು ಎಬ್ಬಿಸುವ ವೇಳೆಯಲ್ಲಿ ಮಗಳ ಕೋಣೆಯಿಂದ ಹೊಗೆ ಬರುತ್ತಿರುವುದನ್ನು ಅವರು ಗಮನಿಸಿದರು. ಗಾಬರಿಗೊಂಡ ಶ್ರೀನಿವಾಸ್‌ ಮಗಳ ಕೋಣೆಗೆ ಹೋಗಿ ನೋಡಿದಾಗ ಆಕೆ ಬೆಂಕಿಯಲ್ಲಿ ಸಜೀವ ದಹನವಾಗಿದ್ದಳು.

ಇದನ್ನೂ ಓದಿ : POCSO Case : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಐವರು ಆರೋಪಿಗಳ ಬಂಧನ

ಇದನ್ನೂ ಓದಿ : Swami Shraddhanand: ರಾಜೀವ್ ಗಾಂಧಿ ಹಂತಕರನ್ನೇ ಜೈಲಿನಿಂದ ಬಿಟ್ಟಿದ್ದೀರಿ, ನನ್ನನ್ನೂ ರಿಲೀಸ್ ಮಾಡಿ; ಸುಪ್ರೀಂಗೆ ಸ್ವಾಮಿ ಶೃದ್ಧಾನಂದ ಅರ್ಜಿ

ಇದನ್ನೂ ಓದಿ : Suicide Case took turn: ಗೋಳಗುಮ್ಮಟದಿಂದ ಜಿಗಿದು ವ್ಯಕ್ತಿ ಸಾವು: ತಿರುವು ಪಡೆದ ಪ್ರಕರಣ

ಘಟನೆ ನಡೆದ ಸ್ಥಳದಲ್ಲಿ ಫೋರೆನ್ಸಿಕ್ ಸಿಬ್ಬಂದಿ ಹಾಗೂ ಶ್ವಾನ ದಳಗಳು ಹಲವು ಸಾಕ್ಷಿಗಳನ್ನು ಸಂಗ್ರಹಿಸಿದೆ. ಪೊಲೀಸರು ಹಲವರನ್ನು ಈ ವಿಚಾರವಾಗಿ ಬಂಧಿಸಿದ್ದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಗಹಾರಿಕ ಮೃತದೇಹದ ಪೋಸ್ಟ್‌ ಮಾರ್ಟಂ ಮಾಡಿದ ನಂತರ, ಆಕೆಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೂ, ಘಟನೆಗೆ ಸರಿಯಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆ ಸ್ಥಳೀಯ ಸರ್ಕಲ್‌ ಇನ್ಸ್ಪೆಕ್ಟರ್‌ ಆಂಜನೇಯುಲು ಹಾಗೂ ಎಸ್‌ ಐ ರಾಜ್‌ ಕುಮಾರ್‌ ಸ್ಥಳಕ್ಕೆ ಧಾವಿಸಿದ್ದು, ಸಾವಿನ ಕುರಿತಾಗಿ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

(Mysterious death) A young woman who was sleeping in the bedroom at night was burnt alive in the morning in Mullapudi, Muddapuram village of Andhra Pradesh. Nagaharika is the deceased young woman. But the reasons behind her mysterious death are still unknown. If so, here is information on what led to her death.

RELATED ARTICLES

Most Popular