Tamannaah: ಮಿಲ್ಕಿ ಬ್ಯೂಟಿ ಮದುವೆ ವದಂತಿಗೆ ಬ್ರೇಕ್ ; ಹುಡುಗನ ಫೋಟೋ ರಿವೀಲ್ ಮಾಡಿದ ನಟಿ ತಮನ್ನಾ

ಮುಂಬೈ; Tamannaah: ಕಳೆದ ಹಲವಾರು ದಿನಗಳಿಂದ ನಟಿ ತಮನ್ನಾ ಬಾಟಿಯಾ ಮದುವೆ ಆಗ್ತಾರಂತೆ. ಮುಂಬೈ ಮೂಲದ ಉದ್ಯಮಿ ಜೊತೆ ಸಪ್ತಪದಿ ತುಳಿಯಲಿದ್ದಾರಂತೆ ಎಂಬೆಲ್ಲಾ ಸುದ್ದಿ ಎಲ್ಲೆಡೆ ಕೇಳಿಬರ್ತಿತ್ತು. ಇಷ್ಟು ದಿನ ಅದಕ್ಕೆಲ್ಲಾ ಏನು ಉತ್ತರ ನೀಡದೇ ಸುಮ್ಮನಿದ್ದ ಮಿಲ್ಕಿ ಬ್ಯೂಟಿ ಇದೀಗ ತಾನು ಮದುವೆ ಆಗಲಿರುವ ಹುಡುಗನ ಫೋಟೋ ರಿವೀಲ್ ಮಾಡುವ ಮೂಲಕ ರೂಮರ್ಸ್ ಗೆ ಕೌಂಟರ್ ಕೊಟ್ಟಿದ್ದಾರೆ.

ಇದನ್ನೂ ಓದಿ: Bank Strike : ಬ್ಯಾಂಕ್ ಮುಷ್ಕರ: ಬ್ಯಾಂಕ್‌ ಹಾಗೂ ಎಟಿಎಂ ಸೇವೆಗಳಲ್ಲಿ ಸ್ಥಗಿತ

ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿಕೊಂಡಿರುವ ನಟಿ ತಮನ್ನಾ ಸದ್ಯದಲ್ಲೇ ಮದುವೆ ಆಗಲಿದ್ದಾರೆ. ಮುಂಬೈ ಮೂಲದ ಉದ್ಯಮಿ ಪ್ರಪೋಸಲ್ ಗೆ ಒಪ್ಪಿ ಆತನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನೋ ಸುದ್ದಿ ಕಳೆದ ಕೆಲ ದಿನಗಳಿಂದ ಎಲ್ಲೆಡೆ ಹರಿದಾಡುತ್ತಿತ್ತು. ಹೀಗಾಗಿ ಅಭಿಮಾನಿಗಳು ತಮನ್ನಾ ಮದುವೆ ಯಾವಾಗ..? ಆಕೆಯನ್ನು ಮದುವೆಯಾಗೋ ಲಕ್ಕಿ ಮ್ಯಾನ್ ಯಾರು ಎಂದು ತಮನ್ನಾ ಅಧಿಕೃತ ಘೋಷಣೆಗೆ ಕಾಯ್ತಿದ್ರು. ತನ್ನ ಮದುವೆ ಸುದ್ದಿ ಬಗ್ಗೆ ಇಷ್ಟು ದಿನ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದ ನಟಿ ಕೊನೆಗೂ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ತಾನು ಮದುವೆಯಾಗಲಿರುವ ಹುಡುಗನ ಫೋಟೋ ರಿವೀಲ್ ಮಾಡಿರುವ ತಮನ್ನಾ, ಉದ್ಯಮಿ ಆಗಿರುವ ತನ್ನ ಭಾವಿ ಪತಿಯನ್ನು ಪರಿಚಯಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆ ಫೋಟೋ ಬೇರಾರದ್ದೋ ಅಲ್ಲ. ಖುದ್ದು ತಮನ್ನಾರೇ ಹುಡುಗನ ರೀತಿ ಡ್ರೆಸ್ ಮಾಡಿಕೊಂಡಿದ್ದಾರೆ. ಮುಖಕ್ಕೆ ದಪ್ಪ ಮೀಸೆ ಆಂಟಿಸಿಕೊಂಡು, ಹುಡುಗರ ಹೇರ್ ಸ್ಟೈಲ್ ಮಾಡಿಸಿಕೊಂಡು ಕ್ಯಾಮೆರಾದ ಮುಂದೆ ಫೋಟೋಗೆ ಪೋಸ್ ನೀಡಿದ್ದಾರೆ. ಇವರೇ ನಾನು ಮದುವೆ ಆಗುತ್ತಿರುವ ಮುಂಬೈ ಉದ್ಯಮಿ ಎಂಬ ಕ್ಯಾಪ್ಶನ್ ಕೊಟ್ಟು, ಮಿಲ್ಕಿ ಬ್ಯೂಟಿ ಮ್ಯಾರೇಜ್ ರೂಮರ್ಸ್ ಎಂಬ ಹ್ಯಾಶ್ ಟ್ಯಾಗ್ ಕೂಡಾ ಸೇರಿಸಿದ್ದಾರೆ.

ಇದನ್ನೂ ಓದಿ: POCSO Case : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಐವರು ಆರೋಪಿಗಳ ಬಂಧನ

ನನಗೀಗ ಮದುವೆ ಆಗುವ ಮನಸ್ಸಿಲ್ಲ. ನನ್ನ ವೃತ್ತಿಜೀವನ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಅದರ ಮೇಲೆ ನಾನು ಗಮನಹರಿಸಬೇಕಿದೆ ಎಂದು ತಮನ್ನಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ಆದರೂ ಆಗೊಮ್ಮೆ ಈಗೊಮ್ಮೆ ಇವರ ಮದುವೆ ವಿಚಾರದ ಬಗ್ಗೆ ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತವೆ. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ನಟಿ ತಮನ್ನಾ ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

Tamannaah: Milky beauty broke marriage rumors Actress Tamannaah revealed the photo of the boy

Comments are closed.