ಬೆಂಗಳೂರು : ಆತ ಟೋಲ್ ಬೂತ್ ನಲ್ಲಿ ನಿಂತು ಕೈ ತೊಳೆಯುತ್ತಿದ್ದ. ಆದರೆ ಒಮ್ಮಿಂದೊಮ್ಮೆಲೆ ನುಗ್ಗಿದ ಲಾರಿಯೊಂದು ಸಿಬ್ಬಂಧಿಯನ್ನ ಎಳೆದೊಯ್ದಿದೆ. ಘಟನೆಯಿಂದಾಗಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಟೋಲ್ ಸಿಬ್ಬಂಧಿಯ ಸಾವಿನ ವಿಡಿಯೋ ಇದೀಗ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಷ್ಟಕ್ಕೂ ಈ ಘಟನೆ ನಡೆದಿರುವುದು ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿರುವ ನವಯುಗ ಟೋಲ್ ನಲ್ಲಿ. ಗೋಪಾಲ್ ಎಂಬಾತನೇ ಸಾವನ್ನಪ್ಪಿದ್ದ ದುರ್ದೈವಿ. ಲಾರಿ ಚಾಲಕನ ಅಜಾಗರೂಕತೆ, ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. ಟೋಲ್ ಲೈನಿನಲ್ಲಿ ಲಾರುಗಳು ಒಂದೊಂದಾಗಿ ಟೋಲ್ ಪಾವತಿಸಿ ಮುಂದೆ ಸಾಗುತ್ತಿದ್ದವು.


ಈ ವೇಳೆಯಲ್ಲಿ ಒಮ್ಮೆಲೆ ನುಗ್ಗಿ ಬಂದ ಲಾರಿ ಟೋಲ್ ಲೈನ್ ನ ಬದಿಯಲ್ಲಿ ನಿಂತಿದ್ದ ಸಿಬ್ಬಂಧಿಯನ್ನು ಎಳೆದೊಯ್ದಿದೆ. ಈ ವೇಳೆಯಲ್ಲಿ ಸಿಬ್ಬಂಧಿ ಲಾರಿ ಹಾಗೂ ಗೋಡೆಯ ಮಧ್ಯದಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೇ ಸಿಬ್ಬಂಧಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಲ್ಲದೇ ಲಾರಿ ಮುಂದೆ ಸಾಗುತ್ತಿದ್ದ ಕಾರನ್ನು ಕೂಡ ಎಳೆದೊಯ್ದಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟೋಲ್ ನಿರ್ಮಾಣದ ವೇಳೆಯಲ್ಲಿ ಟೋಲ್ ಬೂತ್ ಬಾಗಿಲನ್ನು ರಸ್ತೆ ಇರಿಸಿದ್ದರಿಂದಲೇ ಘಟನೆ ಸಂಭವಿಸಿದೆ. ಇನ್ನು ಘಟನೆಯ ಕುರಿತು ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.