ಸೋಮವಾರ, ಏಪ್ರಿಲ್ 28, 2025
HomeCrimeಪಾಗಲ್ ಪ್ರೇಮಿಯ ಅವಾಂತರಕ್ಕೆ ಬಲಿಯಾಯ್ತು ಜೀವ: ಪ್ರೀತಿ ವಿರೋಧಿಸಿದ್ದಕ್ಕೆ ಬಿತ್ತು ಹುಡುಗಿ ತಂದೆ ಹೆಣ

ಪಾಗಲ್ ಪ್ರೇಮಿಯ ಅವಾಂತರಕ್ಕೆ ಬಲಿಯಾಯ್ತು ಜೀವ: ಪ್ರೀತಿ ವಿರೋಧಿಸಿದ್ದಕ್ಕೆ ಬಿತ್ತು ಹುಡುಗಿ ತಂದೆ ಹೆಣ

- Advertisement -

ನೆಲಮಂಗಲ: ಪಾಗಲ್ ಪ್ರೇಮಿಯೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲಿನ ದ್ವೇಷಕ್ಕೆ ಆಕೆಯ ತಂದೆಯನ್ನು ರಾಡ್ ನಿಂದ ಹೊಡೆದು ಸಾಯಿಸಿದ ಘಟನೆ ನಡೆದಿದೆ. ನೆಲಮಂಗಲದ ಬೆತ್ತನಗೆರೆಯಲ್ಲಿ ಈ ಕೃತ್ಯ ನಡೆದಿದ್ದು, ಕ್ರೌರ್ಯಕ್ಕೆ ಜನರೇ ಬೆಚ್ಚಿ ಬಿದ್ದಿದ್ದಾರೆ.

28 ವರ್ಷದ ಪಾಗಲ್ ಪ್ರೇಮಿ ನರೇಶ್ ಎಂಬಾತನೇ ಈ ಕೃತ್ಯ ಎಸಗಿದ್ದು, ನಾಗಪ್ಪ ಎಂಬ 48 ವರ್ಷದ ವ್ಯಕ್ತಿಯನ್ನು ನರೇಶ್ ಸ್ನೇಹಿತರ ಜೊತೆ ಸೇರಿ ರಾಡ್ ನಿಂದ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ.

ನಾಗಪ್ಪ ಅವರ ಪುತ್ರಿಯನ್ನು ನರೇಶ್ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸಿದ್ದು, ಇದಕ್ಕೆ ಯುವತಿಯ ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ. ಅಲ್ಲದೇ ನಾಗಪ್ಪ ಕೂಡ ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.

ಹೀಗಾಗಿ ನಾಗಪ್ಪಅವರ ಹತ್ಯೆಗೆ ಸ್ಕೆಚ್ ಹಾಕಿದ ನರೇಶ್ ರಾಡ್ ನಿಂದ ಹಲ್ಲೆ ಮಾಡಿ ನಾಗಪ್ಪನನ್ನು ಕೊಂದು ಮುಗಿಸಿದ್ದಾನೆ. ನೆಲಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು  ಪರಿಶೀಲನೆ ನಡೆಸಿದ್ದಾರೆ.  

RELATED ARTICLES

Most Popular