Delhi V V : ಈ ವಿವಿಯ 20,000 ಸೀಟುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ 1.8 ಲಕ್ಷ ವಿದ್ಯಾರ್ಥಿಗಳು !

ನವದೆಹಲಿ : ದೆಹಲಿ ವಿಶ್ವ ವಿದ್ಯಾಲಯದ ಪಿಜಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ವಿವಿಯಲ್ಲಿ ಸದ್ಯ 20,000 ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಬರೋಬ್ಬರಿ 1.8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ನೋಂದಾಯಿಸಿಕೊಂಡಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಪಿಜಿ ಪ್ರವೇಶ 2021 ಕ್ಕೆ ನೋಂದಣಿ ಪ್ರಕ್ರಿಯೆಯನ್ನು ಜುಲೈ 26, 2021 ರಂದು ಆರಂಭಿಸಿದೆ. ಆನ್‌ಲೈನ್ ನೋಂದಣಿ ನಮೂನೆಯನ್ನು ಭರ್ತಿ ಮಾಡಲು ಆಗಸ್ಟ್ 21, 2021, ರಾತ್ರಿ 11:59 ಕೊನೆಯ ದಿನಾಂಕವಾಗಿದೆ. ಆದರೆ ಪಿಜಿ, ಎಂ.ಫಿಲ್ ಮತ್ತು ಪಿಎಚ್‌ಡಿ ಕೋರ್ಸ್‌ಗಳಿಗೆ ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿಲ್ಲ. ಅಲ್ಲದೆ, ವಿಶ್ವವಿದ್ಯಾಲಯವು ಎಂ.ಫಿಲ್ ಮತ್ತು ಪಿಎಚ್‌ಡಿ ಕೋರ್ಸ್‌ಗಳಿಗೆ ಸುಮಾರು 28,827 ನೋಂದಣಿಗಳನ್ನು ದಾಖಲಿಸಿದೆ.

ಪಿಜಿ, ಎಂ.ಫಿಲ್ ಮತ್ತು ಪಿಎಚ್‌ಡಿ ಪ್ರವೇಶ ಪರೀಕ್ಷೆಗಳನ್ನು ಸೆಪ್ಟೆಂಬರ್ 26 ರಿಂದ 30, 2021 ಮತ್ತು ಅಕ್ಟೋಬರ್ 1, 2021 ರಂದು ನಡೆಸಲು ನಿರ್ಧರಿಸಲಾಗಿದೆ. ದೆಹಲಿ ವಿಶ್ವ ವಿದ್ಯಾಲಯದಿಂದ ಪದವಿಪೂರ್ವ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ.

ದೆಹಲಿ ವಿಶ್ವವಿದ್ಯಾಲಯದ ಪಿಜಿ ಪ್ರವೇಶ 2021 ರ ಪರೀಕ್ಷೆಯು ಒಟ್ಟು 75 ಕೋರ್ಸ್‌ಗಳಿಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪ್ರವೇಶ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವು ಕಡ್ಡಾಯ ದಾಖಲೆಯಾಗಿದೆ ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು. ಈ ವಾರದ ಅಂತ್ಯದೊಳಗೆ ಪ್ರವೇಶ ಪತ್ರ ವಿತರಿಸುವ ಸಾಧ್ಯತೆ ಇದೆ.

Comments are closed.