online gaming tokens :ಆನ್​ಲೈನ್​ ಗೇಮ್​​ನ ಹುಚ್ಚಿನಿಂದ ಸಹೋದರರನನ್ನೇ ಕೊಂದ 16 ವರ್ಷದ ಬಾಲಕ..!

ಮನರಂಜನೆಗೆಂದು ಶುರುವಾದ ಆನ್​ಲೈನ್​ ಗೇಮ್ (online gaming tokens)​ ಎಷ್ಟೋ ಮಂದಿಯ ಜೀವವನ್ನೇ ತೆಗೆಯುತ್ತಿದೆ. ಈಗಾಗಲೇ ಬ್ಲೂ ವೇಲ್​ನಂತಹ ಮಾರಕ ಗೇಮ್​ಗಳನ್ನು ಬ್ಯಾನ್​ ಕೂಡ ಮಾಡಲಾಗಿದೆ.ಆದರೂ ಸಹ ಆನ್​ಲೈನ್​​ ಗೇಮ್ಸ್​ನ (online gaming addiction) ಹೆಸರಿನಲ್ಲಿ ನಡೆಯುತ್ತಿರುವ ಹುಚ್ಚಾಟಗಳಿಗೆ ಮಿತಿಯೇ ಇಲ್ಲ ಎಂಬಂತಾಗಿದೆ.

ಈ ಮಾತಿಗೆ ಸಾಕ್ಷಿ ಎಂಬಂತೆ ರಾಜಸ್ಥಾನದ ನಗೌರ್​ ಜಿಲ್ಲೆಯ ಲಾಡ್ನು ಎಂಬಲ್ಲಿ ಆನ್​ಲೈನ್​ ಗೇಮ್​ ಟೋಕನ್​ ಪಾವತಿ ವಿಚಾರದಲ್ಲಿ ಶುರುವಾದ ಜಗಳವು ತಾರಕಕ್ಕೇರಿದ ಪರಿಣಾಮ 16 ವರ್ಷದ ಬಾಲಕ ತನ್ನ 12 ವರ್ಷದ ಸೋದರ ಸಂಬಂಧಿಯನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯಗೈದಿದ್ದಾನೆ. ಕೊಲೆ ಮಾಡಿದ್ದು ಮಾತ್ರವಲ್ಲದೇ ಬಾಲಕನ ಶವವನ್ನು ಹೂತು ಹಾಕಿದ್ದಾನೆ. ಬಳಿಕ ಮೃತನ ಚಿಕ್ಕಪ್ಪನಿಂದ ಸೋಶಿಯಲ್​ ಮೀಡಿಯಾ ಮೂಲಕ 5 ಲಕ್ಷ ರೂಪಾಯಿ ದೋಚಿಸಿದ್ದಾನೆ. ಆರೋಪಿಯು ಈ ಹಣದಿಂದ ಆನ್​ಲೈನ್​ ಗೇಮ್​ ಪೇಮೆಂಟ್ ಟೋಕನ್​ ಖರೀದಿಸಲು ಪ್ಲಾನ್​ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

12 ವರ್ಷದ ಬಾಲಕ ನಾಪತ್ತೆಯಾಗಿದ್ದಾನೆ ಎಂದು ಆತನ ಮಾವ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ದೂರು ನೀಡುವ ವೇಳೆ ತಮ್ಮ ಅಳಿಯ ಪಬ್​ ಜಿ ಗೇಮ್​ ದಾಸನಾಗಿದ್ದ. ಅಲ್ಲದೇ ಅನೇಕ ಆನ್​ಲೈನ್ ಗೇಮ್​ಗಳನ್ನು (online gaming addiction) ಆಡುತ್ತಿದ್ದ ಎಂದು ಹೇಳಿದ್ದರು. ತನಿಖೆ ವೇಳೆ ಮೃತ ಬಾಲಕಿ ಆರೋಪಿ ಬಾಲಕನ ಜೊತೆಯಲ್ಲೇ ಗೇಮ್​ ಆಡುತ್ತಿದ್ದ ಎಂಬ ವಿಚಾರ ಪೊಲೀಸ್​ ಗಮನಕ್ಕೆ ಬಂದಿದೆ. ಹೆಚ್ಚಿನ ತನಿಖೆ ನಡೆಸಿದ ವೇಳೆಯಲ್ಲಿ ನಿಜಾಂಶ ಬೆಳಕಿಗೆ ಬಂದಿದೆ.ಕೊಲೆ ಮಾಡಿದ್ದ ಬಾಲಕ ತಪ್ಪೊಪ್ಪಿಕೊಂಡಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪಬ್‌ ಜೀ ಆಡಲು ತಾಯಿಯ ಬ್ಯಾಂಕ್‌ ಖಾತೆಯಿಂದ 10 ಲಕ್ಷ ವ್ಯಯಿಸಿದ ಬಾಲಕ !

ಮುಂಬೈ : ಇತ್ತೀಚಿನ ದಿನಗಳಲ್ಲಿ ಯುವಕರು ಪಬ್‌ಜೀನತ್ತ ಆಕರ್ಷಿತರಾಗುತ್ತಿದ್ದಾರೆ. ಇದೀಗ ಪಬ್‌ ಗೀಳಿಗೆ ಬಿದ್ದ ಬಾಲಕನೋರ್ವ ತನ್ನ ತಾಯಿಯ ಖಾತೆಯಿಂದ ಬರೋಬ್ಬರಿ 10 ಲಕ್ಷ ರೂಪಾಯಿ ವ್ಯಯಿಸಿದ್ದಾನೆ. ಮನೆಯವರಿಗೆ ವಿಷಯ ತಿಳಿಯುತ್ತಲೇ ಯಾರಿಗೂ ಹೇಳದ ನಾಪತ್ತೆಯಾಗಿದ್ದಾನೆ. 16 ವರ್ಷದ ಬಾಲಕನೋರ್ವ ಮುಂಬೈನ ಅಂದೇರಿಯಿಂದ ನಾಪತ್ತೆಯಾಗಿದ್ದ. ಈ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಬಾಲಕ ಪಬ್‌ ಜೀ ಗೀಳು ಹತ್ತಿಸಿಕೊಂಡಿದ್ದಾನೆ ಅನ್ನೋದು ಬಯಲಾಗಿತ್ತು.

ಬಾಲಕ ಹಲವು ಸಮಯಗಳಿಂದಲೂ ಪಬ್‌ ಆಟವಾಡುತ್ತಿದ್ದ. ಮಾತ್ರವಲ್ಲ ತಾಯಿಯ ಬ್ಯಾಂಕ್‌ ಖಾತೆಯಲ್ಲಿದ್ದ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನು ಪಬ್‌ ಜೀ ಆಟದಲ್ಲಿ ಕಳೆದಿದ್ದಾನೆ. ಈ ವಿಷಯ ಮನೆಯವರಿಗೆ ತಿಳಿಯುತ್ತಲೇ ಬಾಲಕನಿಗೆ ಗದರಿಸಿದ್ದಾರೆ. ಇಷ್ಟಕ್ಕೆ ಬೇಸರ ಮಾಡಿಕೊಂಡ ಬಾಲಕ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ಎಂಐಡಿಸಿ ಠಾಣೆಯ ಪೊಲೀಸರು ಕೊನೆಗೂ ಬಾಲಕನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಬಾಲಕನಿಗೆ ಬುದ್ದಿ ಮಾತು ಹೇಳಿ ಪೋಷಕರಿಗೆ ಒಪ್ಪಿಸಿದ್ದಾರೆ.

ಇದನ್ನು ಓದಿ: Bitcoin Hacker Sriki Missing : ಹ್ಯಾಕರ್ ಶ್ರೀಕಿ ಮತ್ತೆ ನಾಪತ್ತೆ, ಪೊಲೀಸರಿಗೆ ತಲೆ ನೋವು : ಜಾಮೀನು ರದ್ದತಿಗೆ ಖಾಕಿ ಸಿದ್ದತೆ

ಇದನ್ನೂ ಓದಿ: Byadarahalli Suicide Case : ಬ್ಯಾಡರಹಳ್ಳಿ ಐವರ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : FSL ವರದಿಯಿಂದ ಸ್ಪೋಟಕ ಮಾಹಿತಿ

Rajasthan: Teen kills 12-year-old cousin after tiff over online gaming tokens in Nagaur

Comments are closed.