Online Loan App Fraud : ಆನ್‌ಲೈನ್‌ ಆ್ಯಪ್ ಸಾಲ ಪಡೆಯುವ ಮುನ್ನ ಹುಷಾರ್‌ : ಮಂಗಳೂರಿನ ಮಹಿಳೆಗೆ ನಗ್ನ ಫೋಟೋ ಹರಿಬಿಡುವ ಬೆದರಿಕೆ

ಮಂಗಳೂರು : ಸಾಲದ ಆ್ಯಪ್ ಮೂಲಕ ಸಾಲ (Online Loan App Fraud) ಪಡೆದ ಮಹಿಳೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಅಪರಿಚಿತರು ಬೆದರಿಕೆ ಹಾಕಿರುವ ಆರೋಪದ ಮೇಲೆ ಮಂಗಳೂರು ನಗರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಗೂಗಲ್ ಪ್ಲೇಸ್ಟೋರ್‌ನಿಂದ ಕ್ವಿಕ್ ಮನಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ 10000 ರೂ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ತಕ್ಷಣವೇ ಅವಳ ಖಾತೆಗೆ 7500 ರೂ. ಜಮೆ ಆಗಿರುತ್ತದೆ. ನಂತರ ಹುಡುಗಿ ಕೆಲವೇ ದಿನಗಳಲ್ಲಿ ಮೊತ್ತವನ್ನು ಮರುಪಾವತಿಸಿದ್ದಾಳೆ. ಆದರೆ, ನಂತರದ ದಿನಗಳಲ್ಲಿ ಕೆಲವು ಅಪರಿಚಿತರು ಹಲವಾರು ವಾಟ್ಸಾಪ್ ಸಂಖ್ಯೆಗಳ ಮೂಲಕ ಆಕೆಗೆ ಕರೆ ಮಾಡಿ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳುವಂತೆ ಒತ್ತಡ ಹೇರಿರುತ್ತಾರೆ. ಆಕೆಯ ಎರಡನೇ ಹಂತದಲ್ಲಿ ಖಾತೆಗೆ 14000 ರೂ. ಸಾಲ ತೆಗೆದುಕೊಂಡಿರುತ್ತಾಳೆ. ಹಾಗೆಯೇ ಎರಡನೇ ಸಾಲದ ಮೊತ್ತವನ್ನೂ ಮಹಿಳೆ ಮರುಪಾವತಿಸಿದ್ದಾಳೆ.

ಇದನ್ನೂ ಓದಿ : Telangana News‌ : ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿದ್ದ ವೇಳೆ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಇದನ್ನೂ ಓದಿ : Bus Accident : ನೇಪಾಳ ಬಸ್ ಅಪಘಾತ : ಆರು ಭಾರತೀಯ ಯಾತ್ರಾರ್ಥಿಗಳ ಸಾವು, 19 ಮಂದಿಗೆ ಗಾಯ

ಆದರೆ, ಅಪರಿಚಿತರು ಹೆಚ್ಚಿನ ಹಣ ಮರುಪಾವತಿಸುವಂತೆ ಒತ್ತಡ ಹೇರಿ ಆಕೆಯ ಖಾತೆಯಿಂದ 51000 ರೂ. ಲಪಾಟಯಿಸಿರುತ್ತಾರೆ. ಇಷ್ಟಾದರೂ ಅಪರಿಚಿತರು ತೃಪ್ತರಾಗಲಿಲ್ಲ ಮತ್ತು ಹುಡುಗಿಯಿಂದ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದರು. ಆಕೆ ಹಣ ಕೊಡಲು ನಿರಾಕರಿಸಿದಾಗ, ಬೇರೆ ಹುಡುಗನೊಂದಿಗಿನ ತನ್ನ ನಗ್ನ ಫೋಟೋವನ್ನು ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದರು.

Online Loan App Fraud: Be careful before taking loan from online app: Mangaluru woman threatened to leak nude photo

Comments are closed.