ಭಾನುವಾರ, ಏಪ್ರಿಲ್ 27, 2025
HomeCrimeWife Murder : ಮಾಜಿ ಪತ್ನಿಯನು ಕೊಲ್ಲಲು 700 KM ಕಾರು ಚಲಾಯಿಸಿದ ಭೂಪ

Wife Murder : ಮಾಜಿ ಪತ್ನಿಯನು ಕೊಲ್ಲಲು 700 KM ಕಾರು ಚಲಾಯಿಸಿದ ಭೂಪ

- Advertisement -

Wife Murder 700 KM to Kill his Ex-Wife : ತನ್ನ ಮಾಜಿ ಪತ್ನಿಯ ಮೇಲೆ ಕೋಪಗೊಂಡ ಪಾಕಿಸ್ತಾನಿ ಅಮೆರಿಕದ ಇಲಿನಾಯ್ಸ್‌ನಲ್ಲಿ ಅವಳನ್ನು ಕೊಂದು ಹಾಕಿದ್ದಾನೆ. ಆ ಬಳಿಕ ತಾನು ಕೂಡ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 29 ವರ್ಷದ ಸಾನಿಯಾ ಖಾನ್ ಟಿಕ್‌ಟಾಕ್‌ರ್ ಆಗಿದ್ದು ಹಾಗೂ ವೃತ್ತಿಪರ ಫೋಟೋಗ್ರಾಫರ್ ಕೂಡ ಆಗಿದ್ದರು. 36 ವರ್ಷದ ಮಾಜಿ ಪತಿ ರಾಹಿಲ್ ಅಹ್ಮದ್ ಒಬ್ಬ ಉದ್ಯಮಿ ಅವರನ್ನು ಕಳೆದ ಒಂದು ವರ್ಷದ ಹಿಂದೆ ಮದುವೆ ಆಗಿದ್ದರು ಆದರೆ ಇವರ ದಾಂಪತ್ಯ ಜೀವನ ಒಂದು ವರ್ಷವೂ ಸಹ ಉಳಿಯಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಇದು ಮರ್ಯಾದಾ ಹತ್ಯೆಯ ಪ್ರಕರಣವಾಗಿದ್ದು, ಪಾಕಿಸ್ತಾನದಲ್ಲಿ ಇಂತಹ ಪ್ರಕರಣಗಳು ಸರ್ವೇ ಸಾಮಾನ್ಯವಾಗಿವೆ.

ಗುಂಡು ಹಾರಿಸಿ ಮಾಜಿ ಹೆಂಡತಿಯನ್ನು ಕೊಂದ ಪತಿ
ಕಳೆದ ವರ್ಷ ಸಾನಿಯಾ ಮತ್ತು ರಾಹಿಲ್ ವಿವಾಹವಾಗಿದ್ದರು. ಮೇ ತಿಂಗಳಲ್ಲಿ ವಿಚ್ಛೇದನವನ್ನು ಕೂಡ ಪಡೆಕೊಂಡರು. ರಾಹಿಲ್ ಒಬ್ಬ ತೀವ್ರಗಾಮಿಯಾಗಿದ್ದನು ಮತ್ತು ಸಾನಿಯಾ ಆಜಾದ್ ಖಯಾಲಿಯೊಂದಿಗೆ ತೀವ್ರ ಅಸಮಾಧಾನ ಹೊಂದಿದ್ದನು. ಇದೇ ಕಾರಣಕ್ಕೆ ಅವರಿಬ್ಬರ ನಡುವೆ ಮನಸ್ತಾಪ ಬಂದು ಮದುವೆ ಬಹುಬೇಗ ಮುರಿದುಬಿತ್ತು. ಅಂದಿನಿಂದ ರಾಹಿಲ್ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದನು. ಜೂನ್ ಆರಂಭದಲ್ಲಿ ಸಾನಿಯಾ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು ಈ ಪ್ರಕರಣ ಈಗ ಬೆಳಕಿಗೆ ಬಂದಿದೆ. ಸಾನಿಯಾರನ್ನು ಕೊಲ್ಲಲು ರಾಹಿಲ್ ಜಾರ್ಜಿಯಾದಿಂದ ಇಲಿನಾಯ್ಸ್‌ಗೆ ಸುಮಾರು 700 ಕಿಲೋಮೀಟರ್ ಕಾರು ಚಲಾಯಿಸಿಕೊಂಡು ಬಂದಿದ್ದ.

ಸಾನಿಯಾ ಮನೆಯಲ್ಲಿ ರಾಹಿಲ್ ಅಹ್ಮದ್ ಇದ್ದಾಗ ಪೊಲೀಸ್ ತಂಡವು ಸಹ ಹೊರಗಿತ್ತು. ಸಾನಿಯಾರನ್ನು ಕೌನ್ಸೆಲಿಂಗ್‌ಗಾಗಿ ಪೊಲೀಸರು ಭೇಟಿಯಾಗಲು ಬಂದಿದ್ದರು. ಅದೇ ಸಮಯದಲ್ಲಿ  ಅವರಿಗೆ ಎರಡು ಗುಂಡಿನ ಶಬ್ದ ಕೇಳಿಬಂದಿದೆ. ರಾಹಿಲ್ ಮೊದಲ ಬುಲೆಟ್ ಅನ್ನು ಸಾನಿಯಾ ಮೇಲೆ ಹಾರಿಸಿದ  ನಂತರ ಮತ್ತೊಂದು ಕೋಣೆಗೆ ಹೋಗಿ ಅದೇ ಪಿಸ್ತೂಲ್‌ನಿಂದ ತನ್ನ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾನಿಯಾ ಫ್ಲೈಟ್ ಅಟೆಂಡೆಂಟ್
ಸಾನಿಯಾ ತನ್ನದೇ ಆದ ವೆಬ್‌ಸೈಟ್ ಹೊಂದಿದ್ದರು. ಅಮೆರಿಕಾದ ಚಿಕಾಗೋದಲ್ಲಿನ ಮುಂಚೆ  ಅವರು ಟೆನ್ನೆಸ್ಸೀಯಲ್ಲಿ ವಾಸಿಸುತ್ತಿದ್ದರು. ಎರಡು ವರ್ಷಗಳ ಕಾಲ ಫ್ಲೈಟ್ ಅಟೆಂಡೆಂಟ್ ಆಗಿಯೂ ಸಹ ಕೆಲಸ ನಿರ್ವಹಿಸಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲೂ ಸಾನಿಯಾ ತುಂಬಾ ಸಕ್ರಿಯರಾಗಿ ಹಲವು ಜನರಿಗೆ ಸಹಾಯಸ್ತ ನೀಡಿದ್ದಾರೆ ಮತ್ತು ಸಾನಿಯಾ  ಟಿಕ್‌ಟಾಕ್‌ನಲ್ಲಿ  ಹಲವು ವೀಡಿಯೊಗಳನ್ನು ಪೋಸ್ಟ್ ಮಾಡಿ  ತನ್ನ ನಟನಾ ಶೈಲಿ ಇಂದ ಆಕೆ ತಾನೊಬ್ಬ ಉತ್ತಮ ತಾರೆ ಎಂಬುದನ್ನು ಸಾಬೀತುಪಡಿಸಿದಳು. ಸಾನಿಯಾ  ವೃತ್ತಿಪರ ಛಾಯಾಗ್ರಾಹಕಿಯಾಗಿ ಸಾನಿಯಾ ಬಹಳ  ಯಶಸ್ವಿಯಾಗಿದ್ದರು ಇದರಿಂದ  ಸಾಕಷ್ಟು ಹಣವನ್ನೂ ಸಹ ಗಳುಹಿಸಿದ್ದರು.

ಇದನ್ನೂ ಓದಿ: Exclusive : ಕೆ.ಎಲ್ ರಾಹುಲ್ ಕಂಬ್ಯಾಕ್ ಪ್ಲಾನ್ ಔಟ್.. ಜಿಂಬಾಬ್ವೆ ಸರಣಿಗೆ ಕನ್ನಡಿಗ ಕ್ಯಾಪ್ಟನ್ ?

ಇದನ್ನೂ ಓದಿ: Praveen Nettaru funeral : ಪಂಚಭೂತಗಳಲ್ಲಿ ಪ್ರವೀಣ್​ ನೆಟ್ಟಾರು ಲೀನ : ಕೇಸರಿ ಕಾರ್ಯಕರ್ತನಿಗೆ ಕಣ್ಣೀರ ವಿದಾಯ

(Pakistan Man Drive 700 KM to Kill his Ex-Wife)

RELATED ARTICLES

Most Popular