ಮೈಸೂರು : ಮೈಸೂರು ವಿಶ್ವ ವಿದ್ಯಾನಿಲಯದ ಮತ್ತೊಂದು ಕಾಮಕಾಂಡ ಬಯಲಾಗಿದೆ. ಸಂಶೋಧನಾ ವಿದ್ಯಾರ್ಥಿನಿಯನ್ನು ಮನೆಗೆ ಕರೆಯಿಸಿ ಪ್ರಾಧ್ಯಾಪಕನೋರ್ವ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಕಾಮುಕ ಪ್ರಾಧ್ಯಾಪಕ ಇದೀಗ ಪ್ರೊಪೆಸರ್ ಪತ್ನಿಯ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಮೈಸೂರಿನ ವಿಶ್ವವಿದ್ಯಾನಿಲಯ ಒಂದಿಲ್ಲೊಂದು ವಿಚಾರದಿಂದ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಪ್ರಾಧ್ಯಾಪಕನ ಕಾಮಕಾಂಡ ಬಯಲಾಗಿದೆ. ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ. ರಾಮಚಂದ್ರ ಎಂಬವರ ವಿರುದ್ದ ಇದೀಗ ಆರೋಪ ಕೇಳಿಬಂದಿದೆ. ಪಿಎಚ್‌ಡಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿನಿಯೋರ್ವಳು ರಾಮಚಂದ್ರ ಬಳಿಯಲ್ಲಿ ಮಾರ್ಗದರ್ಶನ ಪಡೆಯುತ್ತಿದ್ದಳು. ಪಿಎಚ್‌ಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯನ್ನು ಪ್ರಾಧ್ಯಾಪಕ ಮನೆಗೆ ಕರೆಯಿಸಿಕೊಂಡಿದ್ದಾನೆ.
ಒಂದಿಷ್ಟು ಹೊತ್ತು ಪಿಎಚ್‌ಡಿ ವಿಚಾರದ ಕುರಿತು ಚರ್ಚೆ ನಡೆಸಿದ್ದ ಪ್ರಾಧ್ಯಾಪಕ ನಂತರ ರೂಮಿಗೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆಯಲ್ಲಿ ನಾನು ಕೂಗಿಕೊಂಡಿದ್ದರೂ ಕೂಡ ಮನೆಯಲ್ಲಿ ಯಾರೂ ಇರಲಿಲ್ಲ. ನಂತರ ಪ್ರಾಧ್ಯಾಪಕನ ಪತ್ನಿ ಮನೆಗೆ ಎಂಟ್ರಿ ಕೊಡುತ್ತಲೇ ಪತಿಯ ಕಾಮಕಾಂಡ ಬಯಲಿಗೆ ಬಂದಿದೆ. ಕೂಡಲೇ ಯುವತಿ ಹಾಗೂ ಪತಿಯನ್ನು ಠಾಣೆಗೆ ಕರೆತಂಡಿದ್ದಾರೆ.
ಪ್ರಾಧ್ಯಾಪಕ ಅತ್ಯಾಚಾರವೆಸಗಿರುವ ಕುರಿತು ಇದೀಗ ಸಂಶೋಧನಾ ವಿದ್ಯಾರ್ಥಿನಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇನ್ನು ರಾಮಚಂದ್ರ ಪತ್ನಿ ಕೂಡ ವಿವಿಯಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ಒಟ್ಟಿನಲ್ಲಿ ಸಂಶೋಧನೆಯ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಕಾಮದಾಸೆ ಗೆ ಬಳಸಿಕೊಳ್ಳುವ ಪ್ರಾಧ್ಯಾಪಕರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಮಂಗಳೂರು ವಿವಿ ಪ್ರಾಧ್ಯಾಪಕ ರಾಮಚಂದ್ರ ಕೂಡ ಸೇರ್ಪಡೆಯಾಗಿದ್ದಾರೆ. ಈ ಕುರಿತು ತನಿಖೆ ನಡೆಸಿ ಪ್ರಾಧ್ಯಾಪಕನ ವಿರುದ್ದ ಕಠಿಣ ಕ್ರಮಕೈಗೊಳ್ಳುಬೇಕು ಎಂಬ ಆಗ್ರಹ ಕೇಳಿಬಂದಿದೆ.