Pickup-truck road accident : ಪಿಕಪ್‌ – ಟ್ರಕ್‌ ಭೀಕರ ರಸ್ತೆ ಅಪಘಾತ : 4 ಸಾವು, 20 ಮಂದಿ ಗಾಯ

ಹರಿಯಾಣ : ಟ್ರಕ್‌ ಹಾಗೂ ಪಿಕಪ್‌ ನಡುವೆ ನಡೆದ ಭೀಕರ ರಸ್ತೆ ಅಫಘಾತದಲ್ಲಿ (Pickup-truck road accident) ನಾಲ್ವರು ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ಪಾಣಿಪತ್‌ನ ಸನೋಲಿ ರಸ್ತೆಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಮೃತಪಟ್ಟವರು ಜಿಂದ್‌ನ ಕಮಾಚ್ ಖೇರಾ ಗ್ರಾಮಕ್ಕೆ ಸೇರಿದವರಾಗಿದ್ದು, ಅವರು ಹರಿದ್ವಾರಕ್ಕೆ ತೆರಳುತ್ತಿದ್ದಾಗ ಮುಂಜಾನೆ ಅಪಘಾತ ಸಂಭವಿಸಿದೆ. ಸಂತ್ರಸ್ತರು ಪ್ರಯಾಣಿಸುತ್ತಿದ್ದ ಪಿಕಪ್ ಟ್ರಕ್‌ನ ಟೈರ್ ಪಂಕ್ಚರ್ ಆಗಿದ್ದು, ಅದನ್ನು ಬದಲಾಯಿಸುವಾಗ ಟ್ರಕ್ ಡಿಕ್ಕಿ ಹೊಡೆದು ನಾಲ್ವರು ಗ್ರಾಮಸ್ಥರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Coromandel express accident : 14 ವರ್ಷದ ಹಿಂದಿನ ಕೋರಮಂಡಲ್ ದುರಂತ ನೆನಪಿಸಿದ ಒಡಿಶಾ ರೈಲು ದುರಂತ

ಅಪಘಾತದಲ್ಲಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಐವರನ್ನು ರೋಹ್ಟಕ್‌ನ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ದಾಖಲಿಸಲಾಗಿದೆ. ಟ್ರಕ್ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ, 279 ಮತ್ತು 337 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Pickup-truck road accident: Pickup-truck road accident: 4 dead, 20 injured

Comments are closed.