ಬ್ರಿಟನ್ನಲ್ಲಿ ರಾಷ್ಟ್ರೀಯ ಅಪರಾಧ ಸಂಸ್ಥೆ ಹಾಗೂ ರಾಷ್ಟ್ರೀಯ ಸೈಬರ್ ಅಪರಾಧ ಘಟಕ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಜಗತ್ತಿನಾದ್ಯಂತ ಹ್ಯಾಕರ್ಗಳು ಕದ್ದಿದ್ದ 22.5 ಕೋಟಿ ಪಾಸ್ವರ್ಡ್ಗಳನ್ನು(22 Crore Stolen Passwords) ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಹ್ಯಾಕ್ ಮಾಡಲಾದ ಈ ಪಾಸ್ವರ್ಡ್ಗಳನ್ನು ಕ್ಲೌಡ್ ಸ್ಟೋರೇಜ್ನಿಂದ ವಶಕ್ಕೆ ಪಡೆಯಲಾಗಿದೆ. ವಿಶ್ವದ ಜನತೆಯ ರಕ್ಷಣೆಯ ದೃಷ್ಟಿಯಿಂದ ಈ ಪಾಸ್ವರ್ಡ್ಗಳನ್ನು ಹೆಚ್ಐಬಿಪಿ ಡೇಟಾಬೇಸ್ಗೆ ಪೊಲೀಸರು ದಾನ ಮಾಡಿದ್ದಾರೆ.
ಕ್ಲೌಡ್ ಡೇಟಾಬೇಸ್ನಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಕದಿಯಲಾದ ಇಮೇಲ್ ಐಡಿಗಳು ಹಾಗೂ ಪಾಸ್ವರ್ಡ್ಗಳನ್ನು ಹಿಂಪಡೆದಿದ್ದೇವೆ ಎಂದು ಎನ್ಸಿಎಸ್ ಮಾಹಿತಿಯನ್ನು ನೀಡಿದೆ. ಸೋರಿಕೆಯಾಗಿರುವ ಪಾಸ್ವರ್ಡ್ಗಳನ್ನು ಸೈಬರ್ ವಂಚಕರ ಪಾಲಿಗೆ ಬಂಪರ್ ಲಾಟರಿ ಇದ್ದಂತೆ. ಬ್ಯಾಂಕಿಗ್ ಸೇವೆ ಸೇರಿದಂತೆ ಯಾವುದೇ ಆನ್ಲೈನ್ ಸೇವೆಗಳಲ್ಲಿ ನಿಮ್ಮ ಪಾಸವರ್ಡ್ ಏನಾಗಿರಬಹುದು ಎಂಬುದನ್ನು ಊಹಿಸುತ್ತಾರೆ. ಪೊಲೀಸರು ಈ ಪಾಸ್ವರ್ಡ್ಗಳನ್ನು Have I Been Pwned ಎಂಬ ವೆಬ್ಸೈಟ್ನಲ್ಲಿ ಹಂಚಿಕೊಳ್ಳುವ ಮೂಲಕ ನಿಮ್ಮ ಪಾಸ್ವರ್ಡ್ ಈಗಾಗಲೇ ಸೈಬರ್ ಕ್ರಿಮಿನಲ್ಗಳ ಲಿಸ್ಟ್ನಲ್ಲಿ ಇದೆಯೇ ಇಲ್ಲವೇ ಎಂಬುದನ್ನು ನೀವು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ. ಒಂದು ವೇಳೆ ಈ ಲಿಸ್ಟ್ನಲ್ಲಿ ನಿಮ್ಮ ಪಾಸ್ವರ್ಡ್ ಇದ್ದರೆ ನೀವು ಕೂಡಲೇ ನಿಮ್ಮೆಲ್ಲ ಪಾಸ್ವರ್ಡ್ಗಳನ್ನು ಬದಲಾಯಿಸಿಕೊಳ್ಳುವುದು ಉತ್ತಮ.
ಈಗಾಗಲೇ ಪೊಲೀಸರು 61.3 ಮಿಲಿಯನ್ ಪಾಸ್ವರ್ಡ್ಗಳನ್ನು ಈ ವೆಬ್ಸೈಟ್ನಲ್ಲಿ ಹಾಕಿದ್ದರು. ಇದೀಗ ಈ ಪಟ್ಟಿಗೆ ಮತ್ತೆ 22 ಕೋಟಿ ಕದ್ದ ಪಾಸ್ವರ್ಡ್ಗಳನ್ನು ಸೇರ್ಪಡೆ ಮಾಡಲಾಗಿದೆ. ಅಂದಹಾಗೆ ಒಂದೇ ಬಾರಿಗೆ ಇಷ್ಟು ದೊಡ್ಡ ಮೊತ್ತದ ಕದ್ದ ಪಾಸ್ವರ್ಡ್ಗಳು ಇದೇ ಮೊದಲ ಬಾರಿಗೆ ಸಿಕ್ಕಿವೆ ಎಂದು ಹೆಚ್ಐಬಿಪಿ ಮಾಹಿತಿ ನೀಡಿದೆ.
ನಿಮ್ಮ ಪಾಸ್ವರ್ಡ್ ಕದ್ದ ಪಾಸ್ವರ್ಡ್ಗಳ ಪಟ್ಟಿಯಲ್ಲಿ ಇದೆಯೇ ಎಂದು ನೋಡಿಕೊಳ್ಳಲು ನೀವು https://haveibeenpwned.com/. ವೆಬ್ಸೈಟ್ಗೆ ತೆರಳಿ. ನಂತರ ಇಮೇಲ್ ಐಡಿಯನ್ನು ನಮೂದಿಸಬೇಕು. ಬಳಿಕ pwned?’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ನಿಮ್ಮ ಪಾಸ್ವರ್ಡ್ ಸೋರಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಸ್ಪಷ್ಟ ಮಾಹಿತಿ ಸಿಗಲಿದೆ.
ಇದನ್ನು ಓದಿ: horse Price : ಅಬ್ಬಬ್ಬಾ..ಎರಡು ಬೆಂಜ್ ಕಾರಿನ ಮೌಲ್ಯಕ್ಕೆ ಸಮ ಈ ಕುದುರೆಯ ಬೆಲೆ..!
ಇದನ್ನೂ ಓದಿ : celebrates purchase of smartphone : ಮೊಬೈಲ್ ಖರೀದಿಸಿದ ಖುಷಿಗೆ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ..!
Police ‘Donates’ Over 22 Crore Stolen Passwords: Check Whether Your Password Is Hacked Or Not