Meghana Raj Christmas : ಮೇಘನಾ ರಾಜ್ ಮನೆಯಲ್ಲಿ ಸಂಭ್ರಮ : ರಾಯನ್‌ರಾಜ್‌ ಸರ್ಜಾ ಜೊತೆ ಖುಷಿಗೆ ಕಾರಣ ಹಂಚಿಕೊಂಡ ಕುಟ್ಟಿಮಾ

ಮೇಘನಾ ರಾಜ್ ಮನೆಯಲ್ಲಿ ಸದಾ ಮಡುಗಟ್ಟಿರುತ್ತಿದ್ದ ಮೌನದ ಜಾಗದಲ್ಲಿ ಈಗ ಸದಾ ಸಂಭ್ರಮ ಮನೆ ಮಾಡಿರುತ್ತದೆ. ಪುಟ್ಟ ರಾಯನ್ ಮುಖ‌ನೋಡಿ ತಮ್ಮ ದುಃಖ ಮರೆಯುವ ತಾಯಿ, ಮೊಮ್ಮಗನ ನಗುವಿನಲ್ಲಿ ಎಲ್ಲವನ್ನು ಮರೆತು ಮಕ್ಕಳಾಗುವ ಅಜ್ಜ- ಅಜ್ಜಿ. ಹೀಗೆ ಎಲ್ಲವೂ ಈಗ ರಾಯನ್ ಮಯ ( Raayan Raj Sarja ). ಅಂತಹುದೇ ಸಂಭ್ರಮದ ಕ್ಷಣವೊಂದನ್ನು ನಟಿ ಮೇಘನಾರಾಜ್ (Meghana Raj Christmas) ಶೇರ್ ಮಾಡಿದ್ದಾರೆ.

ಮೇಘನಾ ರಾಜ್ ಮನೆಯಲ್ಲಿ ಸಂಭ್ರಮವೊಂದು ನಿಧಾನಕ್ಕೆ ರಂಗೇರುತ್ತಿದೆ. ಮನೆಯನ್ನು ಚೆಂದದ ದೀಪಗಳಿಂದ ಅಲಂಕರಿಸಲಾಗುತ್ತಿದೆ. ಹೀಗೆ ಅಲಂಕಾರಗೊಳ್ಳುತ್ತಿರುವ ಮನೆಯನ್ನು ನಟಿ ಮೇಘನಾ ರಾಜ್ ತಮ್ಮ ಪುತ್ರ ರಾಯನ್ ರಾಜ್ ಸರ್ಜಾ ಜೊತೆ ನಿಂತು ವೀಕ್ಷಿಸುತ್ತಿರುವ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಷ್ಟಕ್ಕೂ ಮನೆ ಹೀಗೆ ಅಲಂಕಾರಗೊಳ್ಳುತ್ತಿರುವುದ್ಯಾಕೆ ಗೊತ್ತಾ?! ಇನ್ನೇನು ಕ್ರಿಸ್ಮಸ್ ಗೆ ದಿನಗಣನೆ ನಡೆದಿದ್ದು ಕ್ರಿಸ್ಮಸ್ ನ್ನು ಅದ್ದೂರಿಯಾಗಿ ಆಚರಿಸೋಕೆ ಮೇಘನಾ ಮನೆಯಲ್ಲಿ ದೀಪಿನ ಅಲಂಕಾರ, ಕ್ರಿಸ್ಮಸ್ ಟ್ರೀ ಎಲ್ಲವೂ ಸಿದ್ಧವಾಗುತ್ತಿದೆ. ಕಳೆದ ವರ್ಷದ ಕ್ರಿಸ್ಮಸ್ ವೇಳೆ ರಾಯನ್ ರಾಜ್ ಸರ್ಜಾ ಚಿಕ್ಕ ಮಗುವಾಗಿದ್ದ. ಈಗ ಒಂದೂವರೆ ವರ್ಷ ಸಮೀಪಿಸುತ್ತಿದ್ದು ರಾಯನ್ ಬೆಳಕು,ಸಂಭ್ರಮ ಎಲ್ಲವೂ ಅರ್ಥವಾಗುತ್ತಿದೆ. ಹೀಗಾಗಿ ಈ ಭಾರಿ ಕ್ರಿಸ್ಮಸ್ ಸಂಭ್ರಮದಿಂದ ಆಚರಿಸಲು ಮೇಘನಾ ಕುಟುಂಬ ನಿರ್ಧರಿಸಿದೆ.

ಎಲ್ಲರಿಗೂ ಗೊತ್ತಿರುವಂತೆ ಮೇಘನಾ ತಾಯಿ ಪ್ರಮೀಳಾ ಜೋಷಾಯ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು. ಮೇಘನಾ ತಂದೆ ಹಿಂದೂ ಧರ್ಮದವರು. ಹೀಗಾಗಿ ಮೇಘನಾ ಮನೆಯಲ್ಲಿ ಎರಡೂ ಧರ್ಮಕ್ಕೆ ಸಂಬಂಧಿಸಿದ ಹಬ್ಬಹರಿದಿನಗಳು ಆಚರಿಸಲ್ಪಡುತ್ತದೆ. ಹೀಗಾಗಿ ಕ್ರಿಸ್ಮಸ್ ಸಿದ್ಧತೆಯ ಪೋಟೋವನ್ನು ಮೇಘನಾ ಶೇರ್ ಮಾಡಿದ್ದು, ಜೊತೆಗೆ ಇದರಲ್ಲಿ ಚಳಿಗೆ ಫುಲ್ ಸ್ವೆಟರ್, ಮಂಕಿ ಕ್ಯಾಪ್ ,ಸಾಕ್ಸ್ ಧರಿಸಿದ ರಾಯನ್ ಸರ್ಜಾ ತಾಯಿ‌ಜೊತೆ ಸ್ಟಾರ್ ಮತ್ತು ಲೈಟ್ಸ್ ಗಳನ್ನು ನೋಡುತ್ತಿದ್ದಾರೆ.

ಇದಕ್ಕೆ ಮೇಘನಾ ರಾಜ್, ಲವ್ ಲೈಫ್ ಮತ್ತು ಅದ್ಭುತವಾದ ಡಿಸೆಂಬರ್ ತಿಂಗಳು ಎಂದು ಕ್ಯಾಪ್ಸನ್ ನೀಡಿದ್ದಾರೆ. ಇದಕ್ಕೆ ಮೇಘನಾ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಹಬ್ಬಕ್ಕೆ ಹಾಗೂ ರಾಯನ್ ಸರ್ಜಾಗೆ ಶುಭಹಾರೈಸಿದ್ದಾರೆ. ಸದ್ಯ ಎರಡು ವರ್ಷಗಳಿಂದ ಪತಿಯ ಅಗಲಿಕೆ ಹಾಗೂ ಮಗನ ಪಾಲನೆಯಲ್ಲೇ ಬ್ಯುಸಿಯಾಗಿದ್ದ ಮೇಘನಾ ರಾಜ್ ಕೆಲ ತಿಂಗಳಿನಿಂದ ನಟನೆಗೆ ಮರಳಿದ್ದು ಪನ್ನಗಾಭರಣ ನಿರ್ದೇಶನದ ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದಾರೆ.

ಇದನ್ನೂ ಓದಿ : Meghana Raj Sarja : ಚಿರು ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

ಇದನ್ನೂ ಓದಿ : Meghanaraj ಹೊಸ ಪೋಟೋ ಶೂಟ್‌ : ಮಹಾರಾಣಿಯಾಗಿ ಮಿಂಚಿದ ಮೇಘನಾ

( Meghana Raj Christmas celebration with Raayan Raj Sarja)

Comments are closed.